ವಿಶ್ವಸಂಸ್ಥೆಯ ಸಭೆಯಲ್ಲಿ ಇಸ್ರೇಲ್‍ವಿರೋಧಿ ವರದಿಯನ್ನು ಹರಿದು ಹಾಕಿದ ಇಸ್ರೇಲ್ ರಾಯಭಾರಿ !

ಜಾಗತಿಕ ವೇದಿಕೆಯಲ್ಲಿ ಅನೇಕ ಬಾರಿ ಭಾರತವಿರೋಧಿ ವರದಿಗಳು ಮಂಡನೆಯಾಗುತ್ತದೆ, ಆಗ ಭಾರತ ಇದುವರೆಗೆ ಎಂದಾದರೂ ಇಂತಹ ಕಠಿಣ ನಿಲುವು ಕೈಗೊಂಡಿದೆಯೇ ? – ಸಂಪಾದಕರು 

ಇಸ್ರೇಲ್ ರಾಯಭಾರಿ ಗಿಲಾದ ಎರ್ದನ್ ಇಸ್ರೇಲ್‍ವಿರೋಧಿ ವರದಿಯನ್ನು ಹರಿದು ಹಾಕುತ್ತಿರುವುದು

ನ್ಯೂಯಾರ್ಕ್ (ಅಮೇರಿಕಾ) – ಇಸ್ರೇಲ್ ರಾಯಭಾರಿ ಗಿಲಾದ ಎರ್ದನ್ ಅವರು ವಿಶ್ವಸಂಸ್ಥೆಯ ಮಹಾಸಭೆಯ ವೇದಿಕೆಯಲ್ಲಿ ವಿಶ್ವಸಂಸ್ಥೆಯ ಮಾನವಹಕ್ಕುಗಳ ಪರಿಷದ್ ಸಿದ್ಧಪಡಿಸಿದ್ದ ಇಸ್ರೇಲ್‍ ವಿರೋಧಿ ವಾರ್ಷಿಕ ವರದಿಯನ್ನು ಹರಿದು ಹಾಕಿದ್ದಾರೆ. ‘ಈ ವರದಿಯು ಇಸ್ರೇಲ್‍ವಿರೋಧಿ ಮತ್ತು ಪಕ್ಷಪಾತದಿಂದ ಕೂಡಿದೆ ಮತ್ತು ಅದರ ನೈಜ ಸ್ಥಳವು ಕಸದ ಬುಟ್ಟಿಯಲ್ಲಿದೆ. ಈ ವರದಿಯ ಯಾವುದೇ ಉಪಯೋಗವಿಲ್ಲ’, ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವರದಿಯಲ್ಲಿ ಇಸ್ರೇಲ್‍ನ ಗಾಜಾ ಪಟ್ಟಿಯ ಮೇಲೆ ದಾಳಿ ನಡೆಸಿದ ನಂತರ ಸ್ಥಾಪಿಸಲಾದ ತನಿಖಾ ಸಮಿತಿಯ ನಿಷ್ಕರ್ಷವನ್ನು ನೊಂದಾಯಿಸಲಾಗಿದೆ. ವರದಿಯ ಪ್ರಕಾರ, ಇಸ್ರೇಲ್‍ನ ದಾಳಿಯಲ್ಲಿ 67 ಮಕ್ಕಳು, 40 ಮಹಿಳೆಯರು ಮತ್ತು 16 ವೃದ್ಧರು ಸೇರಿದಂತೆ 260 ಪ್ಯಾಲೆಸ್ಟೈನಿ ನಾಗರಿಕರು ಸಾವನ್ನಪ್ಪಿದ್ದರು. ಈ ವರದಿಯಲ್ಲಿ ಗಾಜಾಪಟ್ಟಿಯ ಮೇಲಿನ ದಾಳಿಗಾಗಿ ಇಸ್ರೈಲ್‍ವನ್ನು ನಿಂದಿಸಿತ್ತು.

ಮಹಾಸಭೆಯನ್ನುದ್ದೇಶಿಸಿ ಮಾತನಾಡಿದ ಎರ್ದನ್, 15 ವರ್ಷಗಳ ಹಿಂದೆ ಮಾನವಹಕ್ಕುಗಳ ಪರಿಷದ್ ಸ್ಥಾಪನೆಯಾದಾಗಿನಿಂದ, ಅದು ವಿಶ್ವದ ಇತರ ದೇಶಗಳ ವಿರುದ್ಧದ 142 ನಿಂದನೆಗಳಲ್ಲಿ 95 ಬಾರಿ ಇಸ್ರೇಲ್ ಅನ್ನು ನಿಂದಿಸಿದೆ. ಮಾನವ ಹಕ್ಕುಗಳ ಪರಿಷದ್ ಪೂರ್ವಗ್ರಹದೂಷಿತವಾಗಿದೆ ಮತ್ತು ಈ ವರದಿಯು ಅದನ್ನು ಮತ್ತೊಮ್ಮೆ ಸಾಬೀತುಪಡಿಸುತ್ತದೆ ಎಂದು ಹೇಳಿದರು.