‘ಮ್ಯಾಕ್‌ಡೊನಾಲ್ಡ್ಸ್, ‘ಬರ್ಗರ ಕಿಂಗ್’, ‘ಡಾಮಿನೊಜ’, ‘ಪಿಜ್ಜಾ ಹಟ್’ ಇತ್ಯಾದಿ ಸಂಸ್ಥೆಗಳ ಆಹಾರದಲ್ಲಿ ಆರೋಗ್ಯಕ್ಕೆ ಹಾನಿಕರ ರಾಸಾಯನಿಕಗಳ ಬಳಕೆ ! – ಅಮೇರಿಕಾದ ಸಂಶೋಧಕರ ಸಂಶೋಧನೆಗಳು

  • ಫಾಸ್ಟ್ ಫುಡ್’ ಆರೋಗ್ಯಕ್ಕೆ ಹಾನಿಕರವೇ ಆಗಿದೆ, ಎಂದು ಹಲವು ವರ್ಷಗಳಿಂದ ನಾನಾ ಹಂತಗಳಲ್ಲಿ ಹೇಳಲಾಗುತ್ತಿದೆ. ಅದರಲ್ಲಿ ವಿದೇಶಿ ಸಂಸ್ಥೆಗಳ ಆಹಾರದ ಗುಣಮಟ್ಟ ಯಾವಾಗಲೂ ಸಂಶೋಧನೆಯ ವಿಷಯವಾಗಿದೆ. ಈಗ ವಿದೇಶಿ ಆಹಾರದ ಗುಣಮಟ್ಟವನ್ನು ಅಮೇರಿಕಾದ ಸಂಶೋಧಕರು ಬಹಿರಂಗ ಪಡಿಸಿದ್ದರಿಂದ ಈ ಸಂಸ್ಥೆಗಳಿಗೆ ಕಪಾಳಮೋಕ್ಷವಾಗಿದೆ. ಈಗಲಾದರೂ ಭಾರತೀಯ ಜನರು ವಿದೇಶಿ ಆಹಾರವನ್ನು ತಿನ್ನುವುದನ್ನು ತಪ್ಪಿಸುವರು, ಎಂಬ ಅಪೇಕ್ಷೆಯಿದೆ !
  • ಜನರ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿರುವ ಇಂತಹ ಸಂಸ್ಥೆಗಳನ್ನು ಕೇಂದ್ರ ಸರಕಾರ ಈಗಲಾದರೂ ನಿಷೇಧಿಸಬೇಕು ಎಂಬುದು ಜನರ ಆಗ್ರಹವಾಗಿದೆ !

ವಾಷಿಂಗ್ಟನ್ (ಅಮೇರಿಕ) – ‘ಮೆಕ್‌ಡೊನಾಲ್ಡ್ಸ್, ‘ಬರ್ಗರ್ ಕಿಂಗ್’, ‘ಡೊಮಿನೋಸ್’, ‘ಪಿಜ್ಜಾ ಹಟ್’, ‘ಟ್ಯಾಕೋ ಬೆಲ್’ ಮತ್ತು ‘ಚಿಪೊಟಲ’ ಮುಂತಾದ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವ ಸಂಸ್ಥೆಗಳ ಆಹಾರದಲ್ಲಿ ರಾಸಾಯನಿಕಗಳನ್ನು ಬಳಸಲಾಗುತ್ತದೆ’, ಎಂದು ಒಂದು ಸಂಶೋಧನೆಯಿಂದ ಬೆಳಕಿಗೆ ಬಂದಿದೆ, ಎಂದು ‘ಜೀ ನ್ಯೂಸ್’ ವರದಿ ಮಾಡಿದೆ. ಈ ಆಹಾರಗಳಲ್ಲಿ ಬಳಸುವ ರಾಸಾಯನಿಕಗಳನ್ನು ಹೆಚ್ಚಾಗಿ ಪ್ಲಾಸ್ಟಿಕ್ ಅನ್ನು ಮೃದುಗೊಳಿಸಲು ಬಳಸಲಾಗುತ್ತದೆ ಎಂದು ಹೇಳಿದೆ. ಇಂತಹ ರಾಸಾಯನಿಕಗಳನ್ನು ಉಪಯೋಗಿಸಿ ನಿರ್ಮಿಸಿದ ಆಹಾರದ ಸೇವನೆಯು ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಅನ್ನ ಮತ್ತು ಔಷಧ ಆಡಳಿತವು (‘ಎಫ್.ಡಿ.ಎ’ಯು) ‘ಈ ಸಂಶೋಧನಾ ವರದಿಯನ್ನು ಅಧ್ಯಯನ ಮಾಡುವುದಾಗಿ’, ಹೇಳಿದೆ.

(ಸೌಜನ್ಯ : Instants News)

೧. ಈ ಸಂಶೋಧನೆಯನ್ನು ‘ಜಾರ್ಜ್ ವಾಷಿಂಗ್ಟನ್ ವಿಶ್ವವಿದ್ಯಾಲಯ’ ಮತ್ತು ‘ಸೌತ್‌ವೆಸ್ಟ್ ರಿಸರ್ಚ್ ಇನ್‌ಸ್ಟಿಟ್ಯೂಟ್ ’(ಸ್ಯಾನ್ ಆಂಟೋನಿಯೊ, ಟೆಕ್ಸಾಸ್), ‘ಬೋಸ್ಟನ್ ವಿಶ್ವವಿದ್ಯಾಲಯ’ ಮತ್ತು ‘ಹಾರ್ವರ್ಡ್ ವಿಶ್ವವಿದ್ಯಾಲಯ’ದ ಸಂಶೋಧಕರು ನಡೆಸಿದರು. ಈ ಬಗೆಗಿನ ವರದಿಯನ್ನು ‘ಜರ್ನಲ್ ಆಫ್ ಎಕ್ಸ್‌ಪೋಸರ್ ಸೈಯನ್ಸ್ ಅಂಡ್ ಎನ್ವಿರಾನ್‌ಮೆಂಟಲ್ ಎಪಿಡೆಮಿಯಾಲಜಿ’ಯಲ್ಲಿ ಮುದ್ರಿಸಲಾಗಿದೆ.

೨. ಸಂಶೋಧಕರು ಸಂಸ್ಥೆಗಳಿಂದ ‘ಹ್ಯಾಂಬರ್ಗರ್‌ಗಳು’, ‘ಫ್ರೈಸ್‌ಗಳು, ‘ಚಿಕನ್ ನಗೆಟ್ಸ್’, ‘ಚಿಕನ್ ಬರ್ರಿಟೊಸ್’ ಮತ್ತು ‘ಪನೀರ್ ಪಿಜ್ಜಾಗಳ ೬೪ ಮಾದರಿಗಳನ್ನು ತೆಗೆದುಕೊಂಡರು. ಈ ಮಾದರಿಗಳಲ್ಲಿ ಶೇ. ೮೦ ಕ್ಕಿಂತ ಹೆಚ್ಚು ಆಹಾರದಲ್ಲಿ ‘ಫೆಥಲೇಟ್’ ಎಂಬ ರಾಸಾಯನಿಕವಿದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಈ ರಾಸಾಯನಿಕವು ಆರೋಗ್ಯಕ್ಕೆ ಹಾನಿಕರವಾಗಿದೆ.

೩. ಸಂಶೋಧಕರ ಪ್ರಕಾರ, ‘ಫೆಥಲೆಟ’ ರಾಸಾಯನಿಕವನ್ನು ಸೌಂದರ್ಯವರ್ಧಕಗಳು, ಫಿನಾಲ್‌ಗಳು, ಡಿಟರ್ಜೆಂಟ್‌ಗಳು, ವೈರ್ ಕವರ್‌ಗಳು ಮುಂತಾದವುಗಳಲ್ಲಿ ಬಳಸಲಾಗುತ್ತದೆ. ಈ ರಾಸಾಯನಿಕವು ಪ್ಲಾಸ್ಟಿಕ್ ಅನ್ನು ಮೃದುಗೊಳಿಸಲು ಮತ್ತು ಬಾಗಿಸಲು ಸಹಕಾರಿಯಾಗಿದೆ. ಈ ರಾಸಾಯನಿಕದಿಂದ ಅಸ್ತಮಾ ಮತ್ತು ಮಕ್ಕಳ ಮೆದುಳಿಗೆ ಸಂಬಂಧಿಸಿದ ಕಾಯಿಲೆಗಳಾಗುವ ಸಾಧ್ಯತೆಯಿದೆ, ಜೊತೆಗೆ ವ್ಯಕ್ತಿಯ ಸಂತಾನೋತ್ಪತ್ತಿಯ ಮೇಲೆಯೂ ಇದರ ದುಷ್ಪರಿಣಾಮವಾಗಬಹುದು.

೪. ಸಂಶೋಧಕರಿಗೆ ‘ಬರಿಟೊಸ್’ ಮತ್ತು ‘ಚೀಸ್‌ಬರ್ಗರ್’ನಂತಹ ಮಾಂಸಯುಕ್ತ ಆಹಾರಗಳಲ್ಲಿ ಈ ರಾಸಾಯನಿಕವು ಅಧಿಕ ಪ್ರಮಾಣದಲ್ಲಿ ಕಂಡುಬಂದಿದೆ, ಹಾಗೂ ಪಿಜ್ಜಾದಲ್ಲಿ ಕಡಿಮೆ ಪ್ರಮಾಣದಲ್ಲಿತ್ತು.