ಅಯೋಧ್ಯೆಯಲ್ಲಿ ಸಾಧುಗಳ ವೇಷದಲ್ಲಿ ಭಿಕ್ಷೆ ಬೇಡುವ ಇಬ್ಬರು ಮುಸಲ್ಮಾನರ ಬಂಧನ !

ಹಿಂದೂಗಳು ಎಂದಾದರೂ ಫಕಿರನ ವೇಷ ತೊಟ್ಟು ಭಿಕ್ಷೆ ಬೇಡುತ್ತಾರೆ ? ಹಾಗಾದರೆ ಮತಾಂಧರಿಂದ ಈ ರೀತಿ ಏಕೆ ಮಾಡಲಾಗುತ್ತದೆ ? ‘ಹಿಂದೂಗಳಿಂದ ಭೀಕ್ಷೆ ಪಡೆಯಲು ಅಥವಾ ಏನಾದರೂ ರಕ್ತಪಾತ ನಡೆಸಡಲು ?’, ಎಂಬುದನ್ನು ಬೆಳಕಿಗೆ ಬರಬೇಕು !

ಆಯೋಧ್ಯೆ (ಉತ್ತರಪ್ರದೇಶ) – ಇಲ್ಲಿ ಕೇಸರಿ ವಸ್ತ್ರ ಧರಿಸಿದ ಇಬ್ಬರು ಸಾಧುಗಳನ್ನು ಪೊಲೀಸರು ಬಂಧಿಸಿದ್ದಾರೆ. ಇವರಿಬ್ಬರೂ ಮುಸಲ್ಮಾನರಾಗಿದ್ದು ಸುದ್ದು ಮತ್ತು ಮೊಹರ್ರಮ್ ಎಂದು ಹೆಸರುಗಳಿವೆ. ಅವರು ಪಕ್ಕದ ಸುಲ್ತಾನ್ ಪುರ ಜಿಲ್ಲೆಯ ನಿವಾಸಿಗಳಾಗಿದ್ದಾರೆ. ದೀಪಾವಳಿಯ ಹಿನ್ನಲೆಯಲ್ಲಿ ಅಯೋಧ್ಯೆಯಲ್ಲಿ ಉಗ್ರರಿಂದ ರಕ್ತಪಾತ ಆಗಬಾರದು, ಅದಕ್ಕಾಗಿ ಪೋಲಿಸರು ಸತರ್ಕತೆಯಿಂದ ಇರುವಾಗ ಅವರು ಇಬ್ಬರನ್ನೂ ಬಂಧಿಸಿದ್ದಾರೆ. ಈ ವಿಷಯವಾಗಿ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ.

ಇವರಿಬ್ಬರು ಇಲ್ಲಿ ಭಿಕ್ಷೆ ಬೇಡುವಾಗ ಪೊಲೀಸರು ಅವರನ್ನು ವಿಚಾರಣೆಗಾಗಿ ನಿಲ್ಲಿಸಿದರು. ಅವರ ನಡತೆಯಿಂದ ಪೊಲೀಸರಿಗೆ ಸಂದೇಹ ಬಂತು. ವಿಚಾರಣೆಯಲ್ಲಿ ಅವರು ಮುಸಲ್ಮಾನರೆಂದು ತಿಳಿದುಬಂದಿದೆ. ವಿಚಾರಣೆಯ ಸಮಯದಲ್ಲಿ ಅವರು, ತಮ್ಮ ಊರಿನಲ್ಲಿ ಇನ್ನೂ ಕೆಲವರು ಅನೇಕ ವರ್ಷಗಳಿಂದ ಸಾಧುಗಳಾಗಿ ಭಿಕ್ಷೆ ಬೇಡುತ್ತಿದ್ದಾರೆ ಎಂದು ಹೇಳಿದ್ದಾರೆ.