ದೇವಸ್ಥಾನದಿಂದ 114 ಮೀಟರ್ ದೂರದಲ್ಲಿರುವ ಬಿಯರ್ ಬಾರ್ ತೆರವುಗೊಳಿಸಲು ಸರ್ವೋಚ್ಚ ನ್ಯಾಯಾಲಯದಿಂದ ನಿರಾಕರಣೆ !

ಹಿಂದೂ ರಾಷ್ಟ್ರದಲ್ಲಿ ಮದ್ಯಪಾನ ನಿಷೇಧ ಇರಲಿದೆ, ಆದ್ದರಿಂದ ಇಂತಹ ಸಮಸ್ಯೆಯೇ ಉದ್ಭವಿಸುವುದಿಲ್ಲ ! – ಸಂಪಾದಕರು

ನವದೆಹಲಿ : ಸರ್ವೋಚ್ಚ ನ್ಯಾಯಾಲಯವು ಪುದುಚೇರಿಯ ಥ್ರೋಬಥಿಯಮ್ಮಮ್ ದೇವಸ್ಥಾನದ ಬಳಿ ಇರುವ ಬಿಯರ್ ಬಾರ್ ಮುಚ್ಚಲು ಸರ್ವೋಚ್ಚ ನ್ಯಾಯಾಲಯ ನಿರಾಕರಿಸಿದೆ. ನ್ಯಾಯಾಲಯವು ದೇವಸ್ಥಾನದ ಆವರಣದಿಂದ ಸ್ವಲ್ಪ ದೂರದಲ್ಲಿ ‘ಜೋಠಿ’ ಎಂಬ ಹೆಸರಿನ ಬಿಯರ್ ಬಾರ್ ಇದೆ. ಹಾಗಾಗಿ ಅದನ್ನು ಮುಚ್ಚುವಂತೆ ಆದೇಶ ನೀಡಲು ಯಾವುದೇ ಆಧಾರವಿಲ್ಲ. ದೇವಸ್ಥಾನ ಮತ್ತು ಬಿಯರ್ ಬಾರ್ ನಡುವಿನ ಅಂತರವು 114.5 ಮೀಟರ್ ಆಗಿದೆ, ಅಂದರೆ 100 ಮೀಟರ ಗಳಿಗಿಂತ ಹೆಚ್ಚು ಇದೆ. ಹಾಗಾಗಿ ಮುಚ್ಚಲು ಆದೇಶ ನೀಡಲು ಸಾಧ್ಯವಿಲ್ಲ. ಕೆಲವರಿಗೆ ಪೂಜೆ ಮಾಡಲಿಕ್ಕಿರುತ್ತದೆ, ಇತರರು ಮದ್ಯಪಾನ ಮಾಡಲು ಇರಬಹುದು ಎಂದು ತೀರ್ಪಿನಲ್ಲಿ ತಿಳಿಸಿದೆ.

1. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ಮಾತನಾಡಿ, ದೇವಸ್ಥಾನ ಮತ್ತು ಬಾರ್ ನಡುವಿನ ಅಂತರ ಕಡಿಮೆ ಇರುವುದರಿಂದ ಕೆಲವರು ಮದ್ಯ ಸೇವಿಸಿ ದೇವಸ್ಥಾನಕ್ಕೆ ಬಂದು ಗೊಂದಲ ಉಂಟು ಮಾಡುತ್ತಾರೆ. ದೇವಸ್ಥಾನದಲ್ಲಿ ನಡೆಯುವ ಧಾರ್ಮಿಕ ವಿಧಿವಿಧಾನಗಳ ವೇಳೆಯೂ ಗೊಂದಲ ಉಂಟು ಮಾಡುತ್ತಾರೆ. ಆದ್ದರಿಂದ ಈ ಬಾರ್ ಅನ್ನು ಮುಚ್ಚಬೇಕು ಅಥವಾ ಸ್ಥಳಾಂತರಿಸಲು ಆದೇಶಿಸಬೇಕು ಎಂದು ಹೇಳಿದರು.

2. ಈ ಕುರಿತು ನ್ಯಾಯಾಲಯವು, ನಾವು ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲು ಬಯಸುವುದಿಲ್ಲ; ಆದರೆ ಕಾನೂನಿನ ಪ್ರಕಾರ ಎರಡರಲ್ಲಿ ಸಾಕಷ್ಟು ಅಂತರ ಇರುವುದರಿಂದ ನಾವು ಏನೂ ಮಾಡಲು ಸಾಧ್ಯವಿಲ್ಲ. ದೇವಸ್ಥಾನದ ಆಡಳಿತ ಮಂಡಳಿಗೆ ಈ ಬಗ್ಗೆ ಯಾವುದೇ ಅಭ್ಯಂತರವಿಲ್ಲ, ಹೀಗಿರುವಾಗ ನಾವೇಕೆ ಇದರಲ್ಲಿ ಹಸ್ತಕ್ಷೇಪ ಮಾಡಬೇಕು ? ಅಲ್ಲದೇ ಮದ್ಯ ಸೇವಿಸಿ ದೇವಸ್ಥಾನಕ್ಕೆ ಬರುವವರು 500 ಮೀಟರ್ ಅಥವಾ 1 ಸಾವಿರ ಮೀಟರ್ ದೂರವಿರಲಿ ಎಲ್ಲಿಂದಾದರೂ ಮದ್ಯ ಸೇವಿಸಿ ದೇವಸ್ಥಾನಕ್ಕೆ ಬರಬಹುದು ಎಂದು ಹೇಳಿದೆ.