4 ಮುಸಲ್ಮಾನರು ಮತ್ತು 2 ಹಿಂದೂಗಳ ಮರಣಅನೇಕ ಮೂರ್ತಿಗಳ ಧ್ವಂಸವಾಗಿರುವುದಾಗಿ ಒಪ್ಪಿಗೆ |
* ಬಾಂಗ್ಲಾದೇಶ ಸರಕಾರವು ತನ್ನ ಮಾನವನ್ನು ಉಳಿಸಿಕೊಳ್ಳುವುದ್ದಕ್ಕಾಗಿ ಈ ರೀತಿಯ ಹುಸಿ ದಾವೆ ಮಾಡುತ್ತಿದೆ, ಎಂದು ಹೇಳಲು ಯಾವುದೇ ತಜ್ಞರ ಅಗತ್ಯವಿಲ್ಲ. ಜಗತ್ತು ನೋಡಿರುವುದನ್ನು ನೇರವಾಗಿ ನಿರಾಕರಿಸುವುದು ಸುಳ್ಳಾಗಿದೆ. ಈ ವಿಷಯದಲ್ಲಿ ಭಾರತವು ಜಾಗತಿಕ ಸಮಿತಿಯಿಂದ ವಿಚಾರಣೆ ನಡೆಸುವಂತೆ ಆಗ್ರಹಿಸಲಿ ಹಾಗೂ ಸತ್ಯವನ್ನು ಜಗತ್ತಿನ ಮುಂದೆ ತರಲಿ ಎಂದು ಹಿಂದೂಗಳಿಗೆ ಅನಿಸುತ್ತದೆ !- ಸಂಪಾದಕರು
ಢಾಕಾ (ಬಾಂಗ್ಲಾದೇಶ) – ಈಗ ನಡೆಯುತ್ತಿರುವುದು ಪ್ರಚಾರದ ತದ್ವಿರುದ್ಧದ ಸ್ಥಿತಿಯಾಗಿದೆ. ದೇಶದಲ್ಲಿ ಇತ್ತೀಚೆಗಷ್ಟೇ ನಡೆದ ಹಿಂಸಾಚಾರದಲ್ಲಿ ಕೇವಲ 6 ಜನರಷ್ಟೇ ಮೃತಪಟ್ಟಿದ್ದಾರೆ. ಪೊಲೀಸರೊಂದಿಗೆ ನಡೆದ ಚಕಮಕಿಯಲ್ಲಿ 4 ಮುಸಲ್ಮಾನರು ಮತ್ತು 2 ಹಿಂದೂಗಳು ಸಾವನ್ನಪ್ಪಿದರು. ಅದರಲ್ಲಿ ಓರ್ವ ಹಿಂದೂ ಮೃತಪಟ್ಟಿರುವುದು `ಸಾಮಾನ್ಯ ಸ್ಥಿತಿಯಲ್ಲಾಯಿತು’ ಹಾಗೂ ಮತ್ತೊಬ್ಬನು ಕೆರೆಗೆ ಹಾರಿ ಸಾವನ್ನಪ್ಪಿದ್ದಾನೆ. ಈ ಹಿಂಸಾಚಾರದಲ್ಲಿ ಒಂದೂ ಬಲಾತ್ಕಾರದ ಘಟನೆ ನಡೆದಿಲ್ಲ ಮತ್ತು ಹಿಂದೂಗಳ ಒಂದು ದೇವಾಲಯದ ಮೇಲೆಯೂ ದಾಳಿ ಮಾಡಿ ಅದನ್ನು ನಾಶ ಮಾಡಲಿಲ್ಲ; ಆದರೆ ಕೆಲವೆಡೆಗಳಲ್ಲಿ ಮೂರ್ತಿಗಳ ಧ್ವಂಸ ಮಾಡಲಾಗಿದ್ದು, ಅದು ದುರ್ದೈವದ ಘಟನೆಯಾಗಿದೆ, ಎಂದು ಬಾಂಗ್ಲಾದೇಶದ ವಿದೇಶಾಂಗ ಸಚಿವರಾದ ಡಾ. ಎಕೆ ಅಬ್ದುಲ ಮೊಮೆನ್‍ರವರು ಹಿಂಸಾಚಾರದ ಘಟನೆಯ ಬಗ್ಗೆ ಮಾಹಿತಿ ನೀಡಿದರು.
Bangladesh communal violence: No one was raped and not a single temple was destroyed, says Foreign Ministerhttps://t.co/gRzkC0aMwA
— TIMES NOW (@TimesNow) October 29, 2021
ಡಾ. ಮೊಮೇನರವರು ಮುಂದೆ ಮಾತನಾಡುತ್ತಾ, ಸಾಮಾಜಿಕ ಮಾಧ್ಯಮಗಳು ಹಾಗೂ ಕೆಲವು ‘ಉತ್ಸಾಹಿ’ ಪ್ರಚಾರ ಮಾಧ್ಯಮಗಳು ಈ ವಿಷಯವಾಗಿ ತಪ್ಪಾದ ಮಾಹಿತಿಯನ್ನು ಹಬ್ಬಿದರು. ಇದು ಸರಕಾರವನ್ನು ಅವಮಾನಿಸುವ ಪ್ರಯತ್ನವಾಗಿತ್ತು. ಕಳೆದ ಕೆಲವು ವರ್ಷಗಳಿಂದ ಬಾಂಗ್ಲಾದೇಶದಲ್ಲಿ ದುರ್ಗಾಪೂಜೆಯ ಮಂಟಪದ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ; ಏಕೆಂದರೆ ಸರಕಾರವು ಅದಕ್ಕೆ ಅನುದಾನ ನೀಡುತ್ತದೆ. (ಸರಕಾರವು ಅನುದಾನ ನೀಡುತ್ತಿದ್ದರೆ ಹಾಗೂ ಮಂಟಪಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿರಬಹುದು; ಆದರೆ ಸರಕಾರವು ಅವರಿಗೆ ಸಂರಕ್ಷಣೆ ಒದಗಿಸುವುದಿಲ್ಲ ಹಾಗೂ ಅದರಿಂದ ಮತಾಂಧರು ಮಂಟಪಗಳನ್ನು ಗುರಿ ಮಾಡುತ್ತಿದ್ದಾರೆ, ಎಂಬ ವಸ್ತುಸ್ಥಿತಿಯನ್ನು ಅವರೇಕೆ ಒಪ್ಪಿಕೊಳ್ಳುವುದಿಲ್ಲ? – ಸಂಪಾದಕರು)