ಕೊಡಗಿನ ಶಾಲೆಯೊಂದರಲ್ಲಿ 32 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು

ಕೊಡಗು – ಇಲ್ಲಿನ ಜವಾಹರ ನವೋದಯ ವಿದ್ಯಾಲಯ ವಸತಿ ಶಾಲೆಯಲ್ಲಿನ 32 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗುಲಿದೆ. ಇವರಲ್ಲಿ 10 ಹುಡುಗಿಯರು ಮತ್ತು 22 ಹುಡುಗರು ಸೇರಿದ್ದಾರೆ. ಒಂದು ವಾರದ ಹಿಂದೆ ಶಾಲೆಯ ಎಲ್ಲಾ 270 ವಿದ್ಯಾರ್ಥಿಗಳಿಗೆ ಕೊರೊನಾದ ಪರೀಕ್ಷೆ ಮಾಡಲಾಗಿತ್ತು. ಈ ಎಲ್ಲ ವಿದ್ಯಾರ್ಥಿಗಳು 9 ರಿಂದ 12 ನೇ ತರಗತಿಯವರಾಗಿದ್ದಾರೆ. ಒಬ್ಬ ಸಿಬ್ಬಂದಿಗೂ ಕೊರೊನಾ ಸೋಂಕು ತಗುಲಿದೆ. ಚಿಕಿತ್ಸೆಗಾಗಿ ಇವರೆಲ್ಲರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.