ಕೇರಳದಲ್ಲಿ ‘ಹಲಾಲ್’ ಮುಕ್ತ ರೆಸ್ಟೊರೆಂಟ್ ತೆರೆದ ಮಹಿಳೆಯನ್ನು ಥಳಿಸಿದ ದುಷ್ಕರ್ಮಿಗಳು !

ರೆಸ್ಟೊರೆಂಟ್‍ನ ಇನ್ನೊಂದು ಶಾಖೆಯನ್ನು ತೆರೆಯಲು ಮತಾಂಧರಿಂದ ವಿರೋಧ

* ಕೇರಳದಲ್ಲಿ ಮಾಕಪದ ಸರಕಾರವಿರುವಾಗ ಒರ್ವ ಮಹಿಳಾ ಉದ್ಯಮಿಯನ್ನು ಥಳಿಸುವುದು ಅತ್ಯಂತ ಲಜ್ಜಾಸ್ಪದ ಸಂಗತಿಯಾಗಿದೆ ! ಈ ವಿಷಯದಲ್ಲಿ ಮಾನವ ಹಕ್ಕುಗಳ ಸದಸ್ಯರು ಹಾಗೂ ಮಹಿಳಾ ಸಂಘಟನೆಯವರು ಯಾಕೆ ಸುಮ್ಮನಿದ್ದಾರೆ ? – ಸಂಪಾದಕರು 

‘ಹಲಾಲ್’ ಮುಕ್ತ ರೆಸ್ಟೋರೆಂಟ್ ತೆರೆದಿದ್ದ ತುಶಾರಾ ಅಜಿತ್ ಅವರಿಗೆ ಮತಾಂಧರಿಂದ ಥಳಿತ

ಎರ್ನಾಕುಲಮ್ (ಕೇರಳ) : ಇಲ್ಲಿ ‘ಹಲಾಲ್’ ಪದಾರ್ಥಗಳಿಲ್ಲದ `ನಂದೂಸ್ ಕಿಚನ್’ ಹೆಸರಿನ ರೆಸ್ಟೊರೆಂಟ್ ತೆರೆದ ತುಶಾರಾ ಅಜಿತ ಎಂಬ ಮಹಿಳೆಯ ಮೇಲೆ ಅಕ್ಟೋಬರ 25 ರಂದು ಹಲ್ಲೆ ನಡೆಸಿ ಥಳಿಸಲಾಯಿತು. ತುಶಾರಾ ಇವರು ಈ ವರ್ಷ ಜನವರಿ ತಿಂಗಳಿನಲ್ಲಿಯೇ ಈ ರೆಸ್ಟೊರೆಂಟ ತೆರೆದಿದ್ದರು. ಈ ರೆಸ್ಟೊರೆಂಟ್‍ನಲ್ಲಿ ಕೇವಲ ಹಲಾಲ್ ಅಲ್ಲದ ಪದಾರ್ಥಗಳು ಸಿಗುತ್ತವೆ. ಅವರು ರೆಸ್ಟೊರೆಂಟ್‍ನ ಹೊರಗೆ ಒಂದು ಫಲಕವನ್ನು ಹಾಕಿ ಅದರಲ್ಲಿ ‘ಹಲಾಲ್ ಭೋಜನವನ್ನು ಇಲ್ಲಿ ನಿಷೇಧಿಸಲಾಗಿದೆ’ ಎಂದು ಬರೆದಿದ್ದರು. ಇದರಿಂದ ಅನೇಕ ಮುಸಲ್ಮಾನರು ಅವರ ರೆಸ್ಟೊರೆಂಟ್‍ನ ಬಗ್ಗೆ ಆಕ್ಷೇಪವನ್ನೆತ್ತಿದ್ದರು. ತುಶಾರಾ ಇವರು ರೆಸ್ಟೊರೆಂಟ್‍ನ ಇನ್ನೊಂದು ಶಾಖೆಯನ್ನು ತೆರೆಯುವವರಿದ್ದರು. ಹಾಗಾಗಿ ಅವರಿಗೆ ಮತಾಂಧರಿಂದ ಬೆದರಿಕೆಗಳು ಬರತೊಡಗಿತ್ತು.

ಈ ಆಕ್ರಮಣವನ್ನು ಭಾಜಪದ ಪ್ರದೇಶಾಧ್ಯಕ್ಷ ಕೆ. ಸುರೇಂದ್ರನ್ ಇವರು ಟ್ವೀಟ್ ಮಾಡಿ ನಿಷೇಧ ವ್ಯಕ್ತಪಡಿಸಿದ್ದಾರೆ. ಅವರು, ಈ ಘಟನೆಯು ತಾಲಿಬಾನಿ ಕೃತ್ಯವಾಗಿದೆ. ನಾನು ಕೇರಳದ ಜನರಲ್ಲಿ ‘ಹಲಾಲ್’ಅನ್ನು ಬಹಿಷ್ಕರಿಸುವಂತೆ ಕರೆ ನೀಡುತ್ತಿದ್ದೇನೆ’ ಎಂದು ಹೇಳಿದ್ದಾರೆ.

‘ಹಲಾಲ’ ಎಂದರೇನು?

‘ಝಟಕಾ ಸರ್ಟಿಫಿಕೇಶನ್ ಆಥಾರಿಟಿ’ಯ ಅಧ್ಯಕ್ಷ ರವಿ ರಂಜನ ಸಿಂಹ ಇವರು ಹಲಾಲ ಬಗ್ಗೆ ಮುಂದಿನಂತೆ ಹೇಳಿದ್ದಾರೆ, ಹಿಂದೂ ಸಿಕ್ಖ್, ಮೊದಲಾದ ಭಾರತೀಯ ಧರ್ಮಗಳಲ್ಲಿ ‘ಝಟಕಾ’ ಪದ್ಧತಿಯಿಂದ ಪ್ರಾಣಿಗಳನ್ನು ಹತ್ಯೆ ಮಾಡಲಾಗುತ್ತದೆ. ಇದರಲ್ಲಿ ಪ್ರಾಣಿಗಳ ಕುತ್ತಿಗೆಯನ್ನು ಒಂದೇ ಏಟಿಗೆ ಕತ್ತರಿಸಲಾಗುತ್ತದೆ. ಇದರಿಂದ ಪ್ರಾಣಿಗೆ ವೇದನೆಯಾಗುವ ಪ್ರಮಾಣವು ಅತ್ಯಲ್ಪವಾಗಿರುತ್ತದೆ. ಇದಕ್ಕೆ ವಿರುದ್ಧವಾಗಿ ಹಲಾಲ್ ಪದ್ಧತಿಯಲ್ಲಿ ಪ್ರಾಣಿಗಳ ಕುತ್ತಿಗೆಯ ನರವನ್ನು ಸೀಳಲಾಗುತ್ತದೆ ಮತ್ತು ಅದನ್ನು ಹಾಗೆ ನರಳಲು ಬಿಡಲಾಗುತ್ತದೆ. ಇದರಿಂದ ಬಹಳ ಪ್ರಮಾಣದಲ್ಲಿ ರಕ್ತವು ಹರಿಯುತ್ತದೆ ಮತ್ತು ಆ ಪ್ರಾಣಿಯು ನರಳಿ ನರಳಿ ಸಾಯುತ್ತದೆ. ಈ ಪ್ರಾಣಿಗಳನ್ನು ಬಲಿ ನೀಡುವಾಗ ಅದರ ಮುಖವನ್ನು ಮಕ್ಕಾದ ದಿಕ್ಕಿನಲ್ಲಿ ಇರಿಸಲಾಗುತ್ತದೆ. ಅದೇ ರೀತಿ ಈ ಕೆಲಸವನ್ನು ಮುಸಲ್ಮಾನೇತರರಿಗೆ ನೀಡಲಾಗುವುದಿಲ್ಲ. ಇಂದು ‘ಮೆಕ್ ಡೊನಾಲ್ಡ್’ ಮತ್ತು ‘ಲಿಶಿಯಸ್’ ನಂತಹ ನಿಗಮಗಳು ಸಹ ಕೇವಲ ಹಲಾಲ್ ಮಾಂಸವನ್ನು ಮಾರಾಟ ಮಾಡುತ್ತವೆ. ಹಾಗೆಯೇ ಇಂತಹ ಮಾಂಸದಿಂದ ತಯಾರಿಸಲಾದ ಪದಾರ್ಥವನ್ನು ಮಾರಾಟ ಮಾಡಲಾಗುತ್ತದೆ.