‘ಆಶ್ರಮ-3’ ವೆಬ್ ಸರಣಿಯ ಚಿತ್ರೀಕರಣದ ಸ್ಥಳವನ್ನು ಧ್ವಂಸಗೊಳಿಸಿದ ಬಜರಂಗದಳ

ನಿರಂತರ ಹಿಂದೂಧರ್ಮದ ಅವಮಾನದ ಪ್ರಸಂಗ; ‘ಆಶ್ರಮ’ ವೆಬ್ ಸರಣಿಯ ಮೇಲೆ ಆರೋಪ

ನಿರ್ಮಾಪಕ ಪ್ರಕಾಶ ಝಾರವರ ಮೇಲೆ ಮಸಿ ಎಸೆದು, ಹಾಗೂ ಕಾರ್ಮಿಕರನ್ನು ಥಳಿಸಿ ಪ್ರತಿಭಟನೆ !

* ಹಿಂದೂ ಧರ್ಮವನ್ನು ಅವಮಾನಿಸುವವರ ಮೇಲೆ ಕಠಿಣ ಕಾರ್ಯಾಚರಣೆ ನಡೆಸದ ಕಾರಣ ಯಾರಾದರೂ ಈ ರೀತಿಯ ಕೃತ್ಯಗಳನ್ನು ಮಾಡುತ್ತಿದ್ದರೆ, ಅದರ ಹಿಂದಿನ ಕಾರಣದ ವಿಚಾರವಾಗುವ ಅಗತ್ಯವಿದೆ. ಬಾಂಗ್ಲಾದೇಶದಲ್ಲಿ ಕಥಿತ ಕುರಾನನ್ನುಅವಮಾನಿಸಲಾದ ಬಗ್ಗೆ ಕಳೆದ ಕೆಲವು ದಿನಗಳಲ್ಲಿ ಹಿಂದೂಗಳ ವಿಷಯವಾಗಿ ಎಷ್ಟೆಲ್ಲಾ ನಡೆಯಿತು, ಆದರೆ ಹಿಂದೂಗಳು ಮಾತ್ರ ಅವರ ಧರ್ಮಕ್ಕಾಗುತ್ತಿರುವ ಅವಮಾನದ ಬಗ್ಗೆ ಏನೂ ಮಾಡುವುದಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು !

ಭೋಪಾಲ (ಮಧ್ಯಪ್ರದೇಶ) – ಚಲನಚಿತ್ರ ನಿರ್ದೇಶಕ ಪ್ರಕಾಶ ಝಾ ರವರ `ಆಶ್ರಮ-3′ ಎಂಬ ವೆಬ ಸಿರೀಸನ ಚಿತ್ರೀಕರಣದ ಸ್ಥಳವನ್ನು ಬಜರಂಗ ದಳದ ಕಾರ್ಯಕರ್ತರು ಧ್ವಂಸಗೊಳಿಸಿದ್ದಾರೆ ಹಾಗೂ ಪ್ರಕಾಶ ಝಾರವರ ಮುಖಕ್ಕೆ ಶಾಯಿ ಎಸೆಯಲಾಗಿದೆ, ಹಾಗೂ ಅಲ್ಲಿದ್ದ ಕೆಲಸದವರನ್ನು ಥಳಿಸಲಾಗಿದೆ, ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆಗ ಬಜರಂಗ ದಳದ ಕಾರ್ಯಕರ್ತರು ನಟ ಬಾಬಿ ದೆಓಲರನ್ನು ಹುಡುಕುತ್ತಿದ್ದರು, ಎಂದು ಕೂಡ ಹೇಳಲಾಗುತ್ತಿದೆ. ಆ ಸಮಯದಲ್ಲಿ ಅವರು ‘ಜಯ ಶ್ರೀರಾಮ’ ಎಂದು ಘೋಷಿಸುವುದರೊಂದಿಗೆ ‘ಪ್ರಕಾಶ ಝಾ ಮುರ್ದಾಬಾದ’, ‘ಬಾಬೀ ದೆಓಲ ಮುರ್ದಾಬಾದ’, ಎಂದು ಕೂಡ ಘೋಷಣೆ ನೀಡಿದರು. ‘ಆಶ್ರಮ – 1‘ ಹಾಗೂ `ಆಶ್ರಮ – 2′ ವೆಬ ಸಿರೀಸ್ ತಯಾರಿಸಿದ ನಂತರ ಈಗ ಪ್ರಕಾಶ ಝಾರವರು ‘ಆಶ್ರಮ-3′ ಅನ್ನು ತಯಾರಿಸುತ್ತಿದ್ದಾರೆ.

ಬಾಬೀ ದೆಓಲರವರು ನಟಿಸಿರುವ ನಿರ್ದೇಶಕ ಪ್ರಕಾಶ ಝಾರವರ ‘ಆಶ್ರಮ’ ಎಂಬ ವೆಬ ಸಿರೀಸ್‍ನಲ್ಲಿ ಹಿಂದುತ್ವವನ್ನು ಅವಮಾನಿಸಲಾಗಿದೆ. ‘ಆ ವೆಬಸಿರೀಸನ ಹೆಸರನ್ನು ಬದಲಾಯಿಸುವವರೆಗೂ ಅದನ್ನು ಪ್ರಸಾರವಾಗಲು ಬಿಡುವುದಿಲ್ಲ, ಆಶ್ರಮದ ಮಾಧ್ಯಮದಿಂದ ನಕಲಿ ಗುರು ಹಾಗೂ ಬಾಬಾರವರು ಮಹಿಳೆಯರನ್ನು ಶೋಷಿಸುತ್ತಿರುವ ದೃಶ್ಯಗಳನ್ನು ಪ್ರಕಾಶ ಝಾರವರು ತಮ್ಮ ವೆಬಸಿರೀಸ್‍ನಲ್ಲಿ ತೋರಿಸಿದ್ದಾರೆ. ಚರ್ಚ ಹಾಗೂ ಮದರಸಾಗಳನ್ನು ಕೂಡ ಅವರು ತಮ್ಮ ವೆಬಸಿರೀಸ್‍ನಲ್ಲಿ ತೋರಿಸಿದ್ದಾರೆ. ಚರ್ಚ ಹಾಗೂ ಮದರಸಾಗಳ ವಿಷಯದಲ್ಲಿ ಆ ರೀತಿಯ ಚಿತ್ರೀಕರಣ ನಡೆಸುವ ಧೈರ್ಯ ಅವರಿಗಿದೆಯೇ? ಎಂದು ಬಜರಂಗ ದಳದ ಕಾರ್ಯಕರ್ತರು ಪ್ರಶ್ನಿಸಿದ್ದಾರೆ. ಹಾಗೂ ‘ಬಾಬೀ ದೆಓಲರವರು ತಮ್ಮ ಸಹೋದರನಿಂದ (ನಟ ಸನೀ ದೆಓಲರವರಿಂದ) ಏನಾದರೂ ಕಲಿತುಕೊಳ್ಳಲಿ ಹಾಗೂ ದೇಶಭಕ್ತಿ ತೋರಿಸುವಂತಹ ಚಲನಚಿತ್ರವನ್ನು ತಯಾರಿಸಲಿ’, ಎಂದು ಕೂಡ ಬಜರಂಗ ದಳವು ಸಲಹೆ ನೀಡಿದೆ.