* ಒಬ್ಬ ಅಕಲಾಖ್‍ನ ಹತ್ಯೆ ಆದನಂತರ ಸಮಸ್ತ ಹಿಂದೂಗಳನ್ನು ಅಪರಾಧಿಗಳೆಂದು ನಿರ್ಧರಿಸುವ ಜಾತ್ಯತೀತವಾದಿ, ಮಾನವ ಹಕ್ಕುಗಳ ಸಂಘಟನೆ ಮತ್ತು ಪ್ರಸಾರ ಮಾಧ್ಯಮಗಳು ಈಗ ಏಕೆ ಬಾಯಿ ಮುಚ್ಚಿ ಕುಳಿತಿವೆ ? – ಸಂಪಾದಕರು * ಜಾರ್ಖಂಡ್‍ನಲ್ಲಿ ಹಿಂದೂದ್ವೇಷಿ ಝಾರ್ಖಂಡ್ ಮುಕ್ತಿ ಮೋರ್ಚಾ ಸರಕಾರವಿದ್ದಾಗ ಅಲ್ಲಿನ ಹಿಂದೂಗಳ ಮೇಲೆ ಅತ್ಯಾಚಾರವಾದರೆ ಆಶ್ಚರ್ಯ ಪಡಬೇಕಾಗಿಲ್ಲ! – ಸಂಪಾದಕರು |
ರಾಂಚಿ (ಝಾರ್ಖಂಡ್) – ಖುಂಟಿ ಜಿಲ್ಲೆಯಲ್ಲಿ ಮತಾಂಧರು ಕ್ಷುಲ್ಲಕ ಕಾರಣದಿಂದ 45 ವರ್ಷದ ಪಂಕಜ ಚೌಧರಿ ಅವರನ್ನು ಹತ್ಯೆಗೈದಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಚೌಧರಿ ಅವರನ್ನು ಮೊದಲು ಟೋಪರಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಅವರನ್ನು ರಾಂಚಿಯ ರಿಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು; ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚೌಧರಿ ಅವರ ಪತ್ನಿ ನೀಡಿದ ದೂರಿನ ಮೇರೆಗೆ ಇಶ್ತಿಯಾಕ್ ಮಿಯಾ ಅಲಿಯಾಸ ತಾಜೋ, ನಾಜೀರ್ ಅನ್ಸಾರಿ ಮತ್ತು ಸುಹೈಲ್ ಆಲಂ ಅವರನ್ನು ಬಂಧಿಸಲಾಗಿದೆ.
Jharkhand: 46-year-old carpenter Pankaj beaten to death in Khunti, Istiyak, Nazir and Suhail arrestedhttps://t.co/i0XZBZi31s
— OpIndia.com (@OpIndia_com) October 25, 2021
ಚೌಧರಿಯವರು ಬಡಗಿಯ ಕೆಲಸ ಮಾಡಿ ತಮ್ಮ ಕುಟುಂಬವನ್ನು ಪೋಷಿಸುತ್ತಿದ್ದರು. ಅವರು ತಮ್ಮ ಕುಟುಂಬದೊಂದಿಗೆ ತಪಕಾರಾ ಮಸೀದಿ ಬಳಿ ವಾಸವಾಗಿದ್ದರು. ಅವರ 2 ಮಕ್ಕಳು ದಿವ್ಯಾಂಗ(ವಿಕಲಚೇತನ) ರಾಗಿದ್ದಾರೆ. ಮತಾಂಧರು ಚೌಧರಿ ಅವರನ್ನು ಮೆಲಾಟಾಂಡ್ ಪ್ರದೇಶಕ್ಕೆ ಕರೆಸಿ ಥಳಿಸಿದ್ದಾರೆ. ಪೊಲೀಸು ಠಾಣೆಯಿಂದ ಕೇವಲ 50 ಮೀಟರ್ ದೂರದಲ್ಲಿ ಈ ಘಟನೆ ನಡೆದಿದೆ. (ಇದರಿಂದ ಮತಾಂಧರಿಗೆ ಪೊಲೀಸರ ಬಗ್ಗೆ ಭಯವಿಲ್ಲ ಎಂಬುದು ಕಂಡುಬರುತ್ತದೆ ! – ಸಂಪಾದಕರು) ಚೌಧರಿ ಅವರ ಹತ್ಯೆಯಾಗಿರುವ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಗ್ರಾಮದಲ್ಲಿ ಉದ್ವಿಗ್ನದ ವಾತಾವರಣ ಉಂಟಾಗಿದೆ. ಜನಸಮೂಹವು ಗುಂಪುಗೂಡಿ ತಪಕರಾ ಪೊಲೀಸ್ ಠಾಣೆಯಲ್ಲಿ ಆಂದೋಲನ ನಡೆಸಿತು. ಭಾಜಪದ ಶಾಸಕ ಕೋಚೆ ಮುಂಡಾ ಅವರ ಸಮ್ಮುಖದಲ್ಲಿ ಅಧಿಕಾರಿಗಳು ಚೌಧರಿ ಕುಟುಂಬಕ್ಕೆ 20 ಸಾವಿರ ರೂಪಾಯಿಯ ಧನಸಹಾಯ ನೀಡಿದರು. ಶಾಸಕ ಮುಂಡಾ ಇವರು `ಪೊಲೀಸರು ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು’, ಎಂದು ಆಗ್ರಹಿಸಿದ್ದಾರೆ.