ಇಲ್ಲಿಯವರೆಗೆ ಅಂದಾಜು 600 ಜನರ ಬಂಧನ
ಇಂತಹವರಿಗೆ ಕಠಿಣ ಶಿಕ್ಷೆಯಾಗಲು ಭಾರತ ಸರಕಾರವು ಬಾಂಗ್ಲಾದೇಶದ ಮೇಲೆ ಒತ್ತಡ ಹೇರಬೇಕು ! – ಸಂಪಾದಕರು
ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಾದ ದಾಳಿಯ ಸಂಚು ರೂಪಿಸಿರುವ ಇನ್ನೊಬ್ಬ ಸೂತ್ರಧಾರನನ್ನು ಬಂಧಿಸಲಾಗಿದೆ. ರಂಗಪುರದ ಪಿರಗಂಜ ಉಪಜಿಲ್ಲೆಯಲ್ಲಿ ಅಕ್ಟೋಬರ್ 17 ರಂದು ನಡೆದಿರುವ ಹಿಂಸಾಚಾರದ ಸೂತ್ರಧಾರ ಶೌಕತ್ ಮಂಡಲ ಮತ್ತು ಅವನ ಸಹಚರನನ್ನು ಢಾಕಾದ ಗಡಿಪ್ರದೇಶದ ಗಾಜಿಪುರದಿಂದ ಬಂಧಿಸಲಾಗಿದೆ. ‘ಮಂಡಲನು ‘ಫೇಸ್‍ಬುಕ್ ಲೈವ್’ ಮೂಲಕ ಹಿಂದೂ ವಿರೋಧಿ ಮಾಹಿತಿಯನ್ನು ಪ್ರಸಾರ ಮಾಡಿ ಮತಾಂಧರನ್ನು ಉದ್ರೇಕಿಸುತ್ತಿದ್ದನು. ನಂತರ ಉದ್ರಿಕ್ತ ಮತಾಂಧರು ದೊಡ್ಡ ಪ್ರಮಾಣದಲ್ಲಿ ಹಿಂಸಾಚಾರ ನಡೆಸಿದರು’, ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. ಈ ಹಿಂಸಾಚಾರದಲ್ಲಿ ಹೆಚ್ಚುಕಡಿಮೆ 70 ಹಿಂದೂಗಳ ಮನೆ ಮತ್ತು ಅಂಗಡಿಗಳನ್ನು ಸುಡಲಾಗಿತ್ತು.
ಈ ಮೊದಲು ಕೋಮಿಲ್ಲಾದಲ್ಲಿ ಶ್ರೀ ದುರ್ಗಾ ಪೂಜಾ ಮಂಟಪದಲ್ಲಿ ಕುರಾನ್‍ನ ಪ್ರತಿ ಇಟ್ಟಿದ್ದ ಮುಖ್ಯ ಸಂದೇಹಾಸ್ಪದ ವ್ಯಕ್ತಿ ಇಕ್ಬಾಲ ಹುಸೇನನನ್ನು ಪೊಲೀಸರು ಬಂಧಿಸಿದ್ದರು. ಹುಸೇನನನ್ನು ಸದ್ಯ 7 ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿ ಇರಿಸಲಾಗಿದೆ. ಈ ಹಿಂಸಾಚಾರದ ಪ್ರಕರಣದಲ್ಲಿ ಈವರೆಗೆ ಬಾಂಗ್ಲಾದೇಶದಲ್ಲಿ ಸುಮಾರು 600 ಜನರನ್ನು ಬಂಧಿಸಲಾಗಿದೆ.