ಅಫ್ಘಾನಿಸ್ತಾನದಲ್ಲಿನ ಪರಿಸ್ಥಿತಿಯ ಪರಿಣಾಮವು ಕಾಶ್ಮೀರದಲ್ಲಿ ಅರಿವಾಗಲಿದೆ ! – ಸಿ.ಡಿ.ಎಸ್. ಜನರಲ್ ಬಿಪಿನ್ ರಾವತ್

ಸಿ.ಡಿ.ಎಸ್. ಜನರಲ್ ಬಿಪಿನ್ ರಾವತ್

ಗುವಾಹಾಟಿ (ಅಸ್ಸಾಂ) – ಅಫ್ಘಾನಿಸ್ತಾನದಲ್ಲಿನ ಪರಿಸ್ಥಿತಿಯ ಪರಿಣಾಮವು ಜಮ್ಮು ಮತ್ತು ಕಾಶ್ಮೀರದಲ್ಲಿ ಅರಿವಾಗಲಿದೆ. ಆ ಪರಿಸ್ಥಿತಿಯನ್ನು ಎದುರಿಸಲು ನಾವು ಸಿದ್ಧರಾಗಿರಬೇಕು. ಅದಕ್ಕಾಗಿ ನಮ್ಮ ಗಡಿಗಳನ್ನು ಮುಚ್ಚುವುದು, ನಿಗಾ ವಹಿಸುವುದು ಮತ್ತು ಗಸ್ತು ತಿರುಗುವುದು ಮಹತ್ವದ್ದಾಗಿದೆ. ಹೊರಗಿನಿಂದ ನಮ್ಮ ದೇಶಕ್ಕೆ ಯಾರು ಬರುತ್ತಿದ್ದಾರೆ ?, ಎಂಬತ್ತ ನಮ್ಮ ಗಮನ ಇರಬೇಕು. ಬಂದವರನ್ನು ಪರಿಶೀಲಿಸಬೇಕು, ಎಂದು ‘ಚೀಫ್ `ಆಫ್ ಡಿಫೆನ್ಸ್ ಸ್ಟಾಫ್'(ಸಿ.ಡಿ.ಎಸ್.) ಜನರಲ್ ಬಿಪಿನ್ ರಾವತ್ ಇವರು ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ. ‘ನಾಗರಿಕರಿಗೆ ಆಂತರಿಕ ಭದ್ರತೆಯ ಬಗ್ಗೆ ಅರಿವು ಮೂಡಿಸುವುದು ಅಗತ್ಯವಿದೆ’, ಎಂದೂ ಸಹ ಅವರು ಹೇಳಿದರು.

ಜನರಲ್ ರಾವತರು ತಮ್ಮ ಮಾತನ್ನು ಮುಂದುವರೆಸುತ್ತಾ ಮುಂದಿನಂತೆ ಹೇಳಿದರು.

1. ಸಾಮಾನ್ಯ ನಾಗರಿಕರಿಗೆ ಮತ್ತು ಪ್ರವಾಸಿಗರಿಗೆ ಕಟ್ಟುನಿಟ್ಟಾದ ಪರಿಶೀಲನೆಯಿಂದ ತೊಂದರೆಯಾಗಬಹುದು; ಆದರೆ ಇದೆಲ್ಲವೂ ತಮ್ಮ ಭದ್ರತೆಯ ದೃಷ್ಟಿಯಿಂದ ಮಾಡಲಾಗುತ್ತಿದೆ ಎಂಬುದನ್ನು ಅವರು ಅರ್ಥಮಾಡಿಕೊಳ್ಳಬೇಕು. ನಮ್ಮ ಭದ್ರತೆಗೆ ಯಾರೂ ಬರುವುದಿಲ್ಲ, ನಾವೇ ನಮ್ಮ, ನಮ್ಮ ಜನರನ್ನು ಮತ್ತು ನಮ್ಮ ಆಸ್ತಿಯನ್ನು ರಕ್ಷಿಸಿಕೊಳ್ಳಬೇಕಾಗಬಹುದು. ದೇಶದ ಆಂತರಿಕ ಭದ್ರತೆಯು ನಮಗೆ ಕಳವಳಕಾರಿಯಾದ ವಿಷಯವಾಗಿದೆ. ಇದನ್ನು ಎದುರಿಸಲು ನಮಗೆ ನಮ್ಮ ನಾಗರಿಕರಿಗೆ ತರಬೇತಿ ನೀಡಬೇಕಾಗಬಹುದು.

2. ದೇಶದ ಪ್ರತಿಯೊಬ್ಬ ನಾಗರಿಕನು ತನ್ನ ಕರ್ತವ್ಯವನ್ನು ಅರ್ಥಮಾಡಿಕೊಂಡರೆ ನಾವು ದೇಶದ ಆಂತರಿಕ ಭದ್ರತೆಯನ್ನು ಕಾಪಾಡಬಹುದು. ನಾಗರಿಕರು ದೇಶದ ಆಂತರಿಕ ಭದ್ರತೆಗೆ ಸಂಬಂಧಿಸಿದಂತೆ ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕು. ಪ್ರತಿಯೊಬ್ಬ ನಾಗರಿಕನು ತನ್ನ ಕರ್ತವ್ಯವನ್ನು ನಿಭಾಯಿಸಿದರೆ, ನಾವು ಈ ಪರಿಸ್ಥಿತಿಯನ್ನು ಎದುರಿಸಬಹುದು.

3. ನಿಮ್ಮ ನೆರೆಹೊರೆಯಲ್ಲಿ ಯಾರು ಬಂದು ವಾಸಿಸುತ್ತಾರೆ ?, ಎಂಬುದರ ಬಗ್ಗೆ ನಿಮಗೆ ಗೊತ್ತಿರಬೇಕು. ನಾವು ಜಾಗರೂಕರಾಗಿದ್ದರೆ, ಯಾವುದೇ ಭಯೋತ್ಪಾದಕರು ನಮ್ಮ ನೆರೆಹೊರೆಯಲ್ಲಿ (ಅಕ್ಕಪಕ್ಕದಲ್ಲಿ) ಬಂದು ಉಳಿಯಲು ಸಾಧ್ಯವಿಲ್ಲ. ಯಾರಿಗಾದರೂ ಏನಾದರೂ ಸಂದೇಹಾಸ್ಪದವೆನಿಸಿದರೆ ನಾಗರಿಕರು ಅವರಿಗೆ ಪ್ರಶ್ನೆಗಳನ್ನು ವಿಚಾರಿಸಬೇಕು ಮತ್ತು ಪೊಲೀಸರಿಗೆ ಮಾಹಿತಿ ನೀಡಬೇಕು.