ಮುಂಬಯಿ : ಕಾರ್ತಿಕ ಅಮಾವಾಸ್ಯೆ ನವೆಂಬರ್ ೫ ರಂದು ಮಧ್ಯರಾತ್ರಿ ೩ ಗಂಟೆಗೆ ಬರುತ್ತದೆ. ಈ ವೇಳೆ ಮಂಗಳ ಗ್ರಹ ತುಲಾ ರಾಶಿಯಲ್ಲಿ ೬ನೇ ಸ್ಥಾನದಲ್ಲಿರುವ ಶನಿ ಮತ್ತು ಗುರು ಗ್ರಹದ ಮೇಲೆ ನಾಲ್ಕನೇ ದೃಷ್ಟಿ ಇಟ್ಟಿರುವುದರಿಂದ ಒಂದು ಹೊಸ ಯೋಗ ಸಿದ್ಧವಾಗಿ, ಅದರಿಂದ ಭಾರತದ ಗಡಿಯಲ್ಲಿ ಭಾರತೀಯ ಸೈನ್ಯವು ಒಂದು ದೊಡ್ಡ ಕಾರ್ಯಾಚರಣೆ ಮಾಡುವ ಸಾಧ್ಯತೆ ಇದೆ, ಎಂಬ ಭವಿಷ್ಯವಾಣಿಯನ್ನು ಜ್ಯೊತಿಷಿ ಸಚಿನ ಮಲ್ಹೋತ್ರಾ ಇವರು ನುಡಿದಿದ್ದಾರೆಂದು ‘ನವಭಾರತ ಟೈಮ್ಸ್’ನಲ್ಲಿ ಪ್ರಕಟಿಸಿದೆ. ಈ ಯೋಗದಿಂದ ಮುಂದಿನ ೨೦ ದಿನಗಳಲ್ಲಿ ಹಿಂದೂಕುಶ್ ಪರ್ವತ ಶ್ರೇಣಿಗಳಲ್ಲಿ, ಅಂದಾಜು ೨೦ ದಿನ ಭೂಕಂಪದ ಅನುಭವವಾಗಬಹುದು, ಎಂದು ಕೂಡಾ ಮಲ್ಹೋತ್ರಾ ಹೇಳಿದರು.
೧. ಮಂಗಳವು ಅಗ್ನಿತತ್ತ್ವ ಹೊಂದಿರುವ ಗ್ರಹವಾಗಿದೆ ಮತ್ತು ಪ್ರಸ್ತುತ ಶುಕ್ರನ ತುಲಾ ರಾಶಿಯಲ್ಲಿ ಸೂರ್ಯನೊಂದಿಗೆ ಯುತಿಯಲ್ಲಿದೆ. ಇದು ಚಲನಚಿತ್ರ ಮತ್ತು ಕಲಾ ಕ್ಷೇತ್ರದ ದೊಡ್ಡ ವ್ಯಕ್ತಿಗಳ ಮೇಲೆ ಪ್ರಭಾವ ಬೀರಿ ಅವರು ಮುಂದಿನ ಒಂದು ತಿಂಗಳು ಕಠಿಣತೆ ಅನುಭವಿಸಬೇಕಾಗಬಹುದು.
೨. ಕಾಶ್ಮೀರದಲ್ಲಿ ಪ್ರಸ್ತುತ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು, ಬಂಡವಾಳ ಹೂಡಿಕೆಗೆ ಮನವಿ ನೀಡಲಾಗುತ್ತಿದೆ. ಇಂತಹ ಹೂಡಿಕೆಯನ್ನು ತಡೆಗಟ್ಟಲು ಬರುವ ೩೦ ದಿನಗಳಲ್ಲಿ ಪಾಕಿಸ್ತಾನ ರಕ್ತಪಾತ ನಡೆಸಬಹುದು ಮತ್ತು ಇದರಿಂದ ಉಭಯ ದೇಶಗಳ ನಡುವೆ ಗಡಿ ಉದ್ವಿಗ್ನತೆಗೆ ಕಾರಣವಾಗಬಹುದು ಎಂದು ಸಹ ಮಲ್ಹೋತ್ರಾ ಇವರು ತಮ್ಮ ಭವಿಷ್ಯವಾಣಿಯಲ್ಲಿ ತಿಳಿಸಿದ್ದಾರೆ.