ಶಾಲೆಯಿಂದ ಇಂತಹ ಕೃತಿಯಾಗಿದ್ದರೆ ಕ್ರಮ ಕೈಗೊಳ್ಳಲಾಗುವುದು ! – ಆಡಳಿತ
|
ಕಾಂಕೇರ್ (ಛತ್ತೀಸ್‌ಗಡ) – ಇಲ್ಲಿಯ ಭಾನುಪ್ರತಾಪಪುರದಲ್ಲಿ ಕ್ರೈಸ್ತ ಮಿಷನರಿಗಳು ನಡೆಸುತ್ತಿರುವ ಸೇಂಟ್ ಜೋಸೆಫ್ ಶಾಲೆಯಲ್ಲಿ ಕಲಿಯುತ್ತಿರುವ ಅಂಶ ತಿವಾರಿ ಎಂಬ ವಿದ್ಯಾರ್ಥಿಯನ್ನು ಶಾಲೆಯ ಮುಖ್ಯೊಪಾಧ್ಯಾಯರು ಜುಟ್ಟು ಕತ್ತರಿಸುವಂತೆ ಹೇಳಿದ್ದಾರೆ. ಅದಕ್ಕೆ ಅಂಶ ಅವರಿಗೆ ಜುಟ್ಟು ಬಿಡುವುದು ಭಾರತೀಯ ಸಂಸ್ಕೃತಿಯ ಸಂಕೇತವಾಗಿದೆ ಎಂದು ಹೇಳಿ ಅದನ್ನು ಕತ್ತರಿಸಲು ನಿರಾಕರಿಸಿದ. ಇದರಿಂದ ಮುಖ್ಯೋಪಾಧ್ಯಾಯರು ಆತನನ್ನು ಶಾಲೆಗೆ ಬರದಂತೆ ನಿರ್ಬಂಧ ಹೇರಿದರು. ಈ ಬಗ್ಗೆ ಭಾರತೀಯ ಜನತಾ ಯುವ ಮೋರ್ಚಾ ಅಧ್ಯಕ್ಷ ರಾಜಾ ಪಾಂಡೆ ಅವರಿಗೆ ದೂರು ನೀಡಿದಾಗ ಅವರು ಕಾರ್ಯಕರ್ತರೊಂದಿಗೆ ಶಾಲೆಗೆ ತೆರಳಿ ವಿರೋಧಿಸಿದರು. ಅವರು ಮುಖ್ಯೋಪಾಧ್ಯಾಯರ ಕೋಣೆಯಲ್ಲಿ ಕೇಸರಿ ಧ್ವಜವನ್ನು ಹಾರಿಸಿದರು. ಈ ಘಟನೆಯ ಮಾಹಿತಿ ಪೊಲೀಸರಿಗೆ ಸಿಕ್ಕಿದಾಗ, ಅವರು ಪರಿಸ್ಥಿತಿಯನ್ನು ಶಾಂತಗೊಳಿಸಿದರು. ಈ ಪ್ರಕರಣವು ವಿಶೇಷ ಜಿಲ್ಲಾಧಿಕಾರಿ ಜಿತೇಂದ್ರ ಯಾದವ್ ಅವರ ಗಮನಕ್ಕೆ ಬಂದಾಗ ಅವರು, ಶಾಲೆಯಿಂದ ಇಂತಹ ಕೃತಿಯಾಗಿದ್ದರೆ, ಶಾಲೆಯ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಸೇಂಟ್ ಜೋಸೆಫ್ ಶಾಲೆ ಕಳೆದ ೨೦ ವರ್ಷಗಳಿಂದ ನಡೆಯುತ್ತಿದೆ. ೨೦೧೯ ರಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು ‘ಭಾರತಮಾತಾ ಕೀ ಜೈ’ ಮತ್ತು ‘ವಂದೇ ಮಾತರಂ’ ಘೋಷಣೆಗಳನ್ನು ನಿಷೇಧಿಸಿದ್ದರು. ಆಗಲೂ, ಶಾಲೆಯನ್ನು ವಿರೋಧಿಸಲಾಗಿತ್ತು. ಆ ಸಮಯದಲ್ಲಿ ಆಡಳಿತವು ತಿಳುವಳಿಕೆ ನೀಡಿದ ಮೇಲೆ ನಿಷೇಧವನ್ನು ತೆಗೆದುಹಾಕಲಾಗಿತ್ತು. (ಇದರಿಂದ ಕ್ರೈಸ್ತ ಶಾಲೆಗಳ ಹಿಂದೂದ್ವೇಷಿ ಮತ್ತು ಭಾರತದ್ವೇಷಿ ಮಾನಸಿಕತೆ ಸ್ಪಷ್ಟವಾಗುತ್ತದೆ. ಈ ಬಗ್ಗೆ ತಥಾಕಥಿತ ಜಾತ್ಯತೀತರು, ಪ್ರಗತಿ(ಅಧೋಗತಿ)ಪರರು ಮಾತನಾಡುವುದಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿರಿ ! – ಸಂಪಾದಕರು)