ಹಿಂದೂ ವಿರೋಧಿ ನಟರ ಗುಂಪೊಂದು ಯಾವಾಗಲೂ ಹಿಂದೂಗಳ ಭಾವನೆಗಳಿಗೆ ನೋವುಂಟು ಮಾಡುತ್ತದೆ ! – ಭಾಜಪದ ಸಂಸದ ಅನಂತ ಕುಮಾರ್ ಹೆಗ್ಡೆ

ಹಿಂದೂ ವಿರೋಧಿ ಜಾಹೀರಾತಿನಿಂದಾಗಿ ಹೆಗ್ಡೆ ಅವರಿಂದ ಸಿಯಟ್ ಟಯರ್ ಸಂಸ್ಥೆಗೆ ಪತ್ರ

* ಹಿಂದೂಗಳಿಗೆ ಕೇವಲ ಪುಕ್ಕಟ್ಟೆ ಸಲಹೆಯನ್ನು ನೀಡುವ ಮತ್ತು ತನ್ನದೇ ಧರ್ಮದ ಮತಾಂಧತೆಯ ಬಗ್ಗೆ ಚಕಾರವನ್ನೂ ಎತ್ತದ ಅಮೀರ್ ಖಾನ್‍ನಂತಹ ಮತಾಂಧ ನಟರ ಚಲನಚಿತ್ರಗಳ ಮೇಲೆ ಮತ್ತು ಅವರು ಮಾಡುತ್ತಿರುವ ಜಾಹೀರಾತಿನ ಉತ್ಪನ್ನಗಳನ್ನು ಬಹಿಷ್ಕರಿಸುವ ಮೂಲಕ ಹಿಂದೂಗಳು ಅವರಿಗೆ ತಕ್ಕ ಪಾಠ ಕಲಿಸಬೇಕು ! – ಸಂಪಾದಕರು

* ‘ಭಾರತದಲ್ಲಿ ಅಸುರಕ್ಷತೆ ಅನಿಸುತ್ತಿದೆ’ ಎಂದು ಹೇಳುವವರಿಗೆ ಹಿಂದೂಗಳ ಹಬ್ಬಗಳ ಬಗ್ಗೆ ಮಾತನಾಡಲು ಏನು ಅಧಿಕಾರವಿದೆ ? -ಸಂಪಾದಕರು

(ಎಡದಿಂದ) ಭಾಜಪದ ಸಂಸದ ಅನಂತ್ ಕುಮಾರ್ ಹೆಗ್ಡೆ ಮತ್ತು ಅಮೀರ್ ಖಾನ್

ಬೆಂಗಳೂರು – ಚಲನಚಿತ್ರ ನಟ ಅಮೀರ ಖಾನ್ ಇವರು `ಸಿಯೆಟ್’ ಟೈರ್‍ಗಳ ಒಂದು ಜಾಹೀರಾತಿನ ಮೂಲಕ ಜನರಿಗೆ ರಸ್ತೆಗಳಲ್ಲಿ ಪಟಾಕಿಗಳನ್ನು ಸಿಡಿಸದಂತೆ ಸಲಹೆ ನೀಡಿದ್ದಾರೆ. ಈ ಬಗ್ಗೆ ಭಾಜಪದ ಸಂಸದ ಅನಂತ್ ಕುಮಾರ್ ಹೆಗ್ಡೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಾ ಅಮೀರ್ ಖಾನ್ ಅವರನ್ನು ಟೀಕಿಸಿದ್ದಾರೆ.

ಸಂಸದ ಹೆಗ್ಡೆಯವರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಮತ್ತು ವಿಶೇಷ ಕಾರ್ಯಕಾರಿ ಅಧಿಕಾರಿ ಅನಂತವರ್ಧನ್ ಗೋಯೆಂಕಾ ಅವರಿಗೆ ಪತ್ರವನ್ನು ಕಳುಹಿಸಿ ಜಾಹೀರಾತಿನ ಬಗ್ಗೆ ಗಮನ ಹರಿಸುವಂತೆ ವಿನಂತಿಸಿದ್ದಾರೆ. `ಇತ್ತೀಚಿನ ದಿನಗಳಲ್ಲಿ ಹಿಂದೂ ವಿರೋಧಿ ನಟರ ಗುಂಪು ಯಾವಾಗಲೂ ಹಿಂದೂಗಳ ಭಾವನೆಗಳಿಗೆ ಧಕ್ಕೆ ತರಲು ಪ್ರಯತ್ನಿಸುತ್ತಿದೆ; ಆದರೆ ಈ ನಟರು ತಮ್ಮದೇ ಧರ್ಮದ ತಪ್ಪುಗಳ ಬಗ್ಗೆ ಎಂದಿಗೂ ಪ್ರತಿಕ್ರಿಯಿಸುವುದಿಲ್ಲ’, ಎಂದು ಅವರು ಹೇಳಿದರು.

ಈ ಪತ್ರದಲ್ಲಿ ಅನಂತ್ ಹೆಗ್ಡೆಯವರು,

1. ಅಮೀರ್ ಖಾನ್ ಜನರಿಗೆ ಬೀದಿಗಳಲ್ಲಿ ಪಟಾಕಿ ಸಿಡಿಸದಂತೆ ಮನವಿ ಮಾಡುತ್ತಿದ್ದಾನೆ, ಎಂದು ನಿಮ್ಮ ಸಂಸ್ಥೆಯ ಹೊಸ ಜಾಹಿರಾತು ಉತ್ತಮ ಸಂದೇಶವನ್ನು ನೀಡುತ್ತಿದೆ. ಈ ಸಮಸ್ಯೆಯ ಬಗ್ಗೆ ನೀವು ವ್ಯಕ್ತಪಡಿಸಿದ ಕಾಳಜಿ ಶ್ಲಾಘನೀಯವಾಗಿದೆ. ಅದರಂತೆ ನಾನು ನಿಮಗೆ ಇನ್ನೊಂದು ಸಮಸ್ಯೆಯನ್ನು ಮಂಡಿಸುವಂತೆ ವಿನಂತಿಸುತ್ತೇನೆ. ಅಂದರೆ ಶುಕ್ರವಾರ ಮತ್ತು ಮುಸಲ್ಮಾನರ ಇತರ ಹಬ್ಬಗಳಲ್ಲಿ ನಮಾಜ್ ಹೆಸರಿನಲ್ಲಿ ರಸ್ತೆಗಳನ್ನು ಬಂದ್ ಮಾಡುವುದಿರಬಹುದು, ಅಲ್ಲದೆ, ಅಜಾನ್ ಸಮಯದಲ್ಲಿ ಮಸೀದಿಗಳಿಂದಾಗುವ ಶಬ್ದ ಮಾಲಿನ್ಯದ ಸಮಸ್ಯೆಯನ್ನು ಪರಿಹರಿಸಬೇಕು.

2. ಈ ಶಬ್ದ ಮಾಲಿನ್ಯದಿಂದಾಗಿ ರೋಗಿಗಳು, ವೃದ್ಧರು, ಶಿಕ್ಷಕರು, ಮುಂತಾದವರಿಗೆ ತೊಂದರೆ ಅನುಭವಿಸಬೇಕಾಗುತ್ತದೆ. ರಸ್ತೆ ಬಂದ್ ಮಾಡಿದ್ದರಿಂದ ಆಂಬ್ಯುಲೆನ್ಸ್ ಮತ್ತು ಅಗ್ನಿಶಾಮಕ ದಳದ ವಾಹನಗಳ ಸಂಚಾರಕ್ಕೆ ಅಡತಡೆಯಾಗಿ ಗಂಭೀರ ಹಾನಿ ಉಂಟು ಮಾಡುತ್ತದೆ.

3. ತಾವು ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಂವೇದನೆಯನ್ನು ಹೊಂದಿದ್ದೀರಿ ಮತ್ತು ನೀವು ಹಿಂದೂ ಆಗಿದ್ದೀರಿ. ಕಳೆದ ಹಲವು ಶತಮಾನಗಳಿಂದ ನಡೆಯುತ್ತಿರುವ ಹಿಂದೂಗಳ ವಿರುದ್ಧದ ತಾರತಮ್ಯದ ಬಗ್ಗೆ ನಿಮಗೆ ತಿಳಿದಿರುತ್ತದೆ ಎಂದು ನಾನು ಭಾವಿಸುತ್ತೇನೆ. ಹಾಗಾಗಿ ಈ ಜಾಹೀರಾತಿನಿಂದಾಗಿ ಹಿಂದೂಗಳಲ್ಲಿ ಆಕ್ರೋಶ ನಿರ್ಮಾಣವಾಗಿದೆ. ನೀವು ಹಿಂದೂಗಳ ಭಾವನೆಗಳನ್ನು ಗೌರವಿಸುತ್ತೀರಿ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.