ರೈತರಿಗೆ ಪ್ರತಿಭಟನೆಯ ಅಧಿಕಾರವಿದೆ, ಆದರೆ ರಸ್ತೆಗಳನ್ನು ಅಡ್ಡಗಟ್ಟಲಿಕ್ಕಲ್ಲ ! – ಸರ್ವೋಚ್ಚ ನ್ಯಾಯಾಲಯದಿಂದ ರೈತರಿಗೆ ಚಾಟಿ ಏಟು


ನವದೆಹಲಿ – ನೀವು (ರೈತರಿಗೆ) ನಿಮಗೆ ಬೇಕಾದ ಪದ್ಧತಿಯಲ್ಲಿ ನಿಷೇದವನ್ನು ವ್ಯಕ್ತಪಡಿಸಬಹುದು; ಆದರೆ ಈ ರೀತಿ ರಸ್ತೆಗಳನ್ನು ಅಡ್ಡಗಟ್ಟಿಯಲ್ಲ ಎಂಬ ಶಬ್ದಗಳಲ್ಲಿ ಸರ್ವೋಚ್ಚ ನ್ಯಾಯಾಲಯವು ರೈತ ಸಂಘಗಳನ್ನು ತರಾಟೆಗೆ ತೆಗೆದುಕೊಂಡಿದೆ. ಜೊತೆಗೆ ಅವರಿಗೆ ಅವರ ಆಂದೋಲನದ ಬಗ್ಗೆ ಮೂರು ವಾರಗಳಲ್ಲಿ ತಮ್ಮ ನಿಲುವನ್ನು ಸ್ಪಷ್ಟಪಡಿಸುವಂತೆ ಆದೇಶಿಸಿದೆ. ಕೇಂದ್ರೀಯ ಕೃಷಿ ಕಾನೂನಿನ ವಿರುದ್ಧ ಸುಮಾರು 11 ತಿಂಗಳಿನಿಂದ ರೈತ ಸಂಘಟನೆಗಳು ದೆಹಲಿಯ ಗಡಿಯಲ್ಲಿ ಆಂದೋಲನ ನಡೆಸುತ್ತಿವೆ. ನೋಯ್ಡಾ ಪ್ರದೇಶದ ನಿವಾಸಿ ಮೋನಿಕಾ ಅಗರವಾಲ್ ಇವರು ಸರ್ವೋಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಸಲ್ಲಿಸಿದ್ದು ಅದರಲ್ಲಿ ದೆಹಲಿ ಗಡಿಯಲ್ಲಿ ರೈತರು ಆಂದೋಲನ ನಡೆಸುತ್ತಿರುವುದರಿಂದ ಸಾಕಷ್ಟು ಪ್ರಮಾಣದಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತಿದೆ ಎಂದು ದೂರಿದ್ದರು. (ನಾಗರಿಕರು ಈ ರೀತಿಯ ದೂರನ್ನು ನ್ಯಾಯಾಲಯಕ್ಕೆ ಹೋಗಿ ಏಕೆ ಸಲ್ಲಿಸಬೇಕಾಗುತ್ತದೆ ? ಈ ವಿಷಯ ಆಡಳಿತ, ಪೊಲೀಸರು ಮತ್ತು ಸರಕಾರ ಇವರ ಗಮನಕ್ಕೆ ಏಕೆ ಬರುವುದಿಲ್ಲ ? ಅಥವಾ ಅವರು ಅದನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿ ಜನರನ್ನು ಸಂಕಷ್ಟಕ್ಕೆ ಸಿಲುಕಿಸುತ್ತಾರೆಯೇ ? – ಸಂಪಾದಕರು) ಅದೇ ರೀತಿ ರೈತರನ್ನು ರಸ್ತೆಯಿಂದ ಸರಿಸಲು ಈ ಅರ್ಜಿಯಲ್ಲಿ ಒತ್ತಾಯಿಸಲಾಗಿದೆ.

ಈ ಹಿಂದೆ ನಡೆದ ಅರ್ಜಿಯ ವಿಚಾರಣೆಯ ಸಮಯದಲ್ಲಿ ‘ರೈತರ ಆಂದೋಲನದಿಂದ ದೆಹಲಿ-ಉತ್ತರಪ್ರದೇಶ ಗಡಿಯಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಈ ರೀತಿ ಸಂಚಾರ ದಟ್ಟಣೆ ಮಾಡಲು ಸಾಧ್ಯವಿಲ್ಲ. ಕೇಂದ್ರ ಮತ್ತು ಉತ್ತರಪ್ರದೇಶ ಸರಕಾರ ಈ ಬಗ್ಗೆ ಪರಿಹಾರವನ್ನು ತೆಗೆಯಬೇಕು’, ಎಂದು ಸರ್ವೋಚ್ಚ ನ್ಯಾಯಾಲಯ ಸ್ಪಷ್ಟ ಪಡಿಸಿದೆ. (ಹೀಗೆ ಹೇಳಿದರೂ, ಸರಕಾರವು ಇದನ್ನು ನಿರ್ಲಕ್ಷಿಸುತ್ತಿರುವುದು ಗಂಭೀರವಾಗಿದೆ. ನ್ಯಾಯಾಲಯವು ಇದನ್ನು ಗಮನಿಸಬೇಕು ಎಂದು ಜನರಿಗೆ ಅನಿಸುತ್ತದೆ ! – ಸಂಪಾದಕರು)