ಬಾಂಗ್ಲಾದೇಶದಲ್ಲಿ 12 ಹಿಂದೂಗಳ ಹತ್ಯೆ, 17 ಜನರು ನಾಪತ್ತೆ, 23 ಮಹಿಳೆಯರ ಮೇಲೆ ಬಲಾತ್ಕಾರ ಹಾಗೂ 160 ಪೂಜಾ ಮಂಟಪಗಳು ಹಾಗೂ ದೇವಾಲಯಗಳಿಗೆ ಬೆಂಕಿ

ಬಾಂಗ್ಲಾದೇಶದಲ್ಲಿ ಮತಾಂಧರು ಇಲ್ಲಿಯವರೆಗೂ ಹಿಂದೂಗಳ ಮೇಲೆ ನಡೆಸಿದ ದಾಳಿಗಳು

* ಭಾರತದಲ್ಲಿ ಅಲ್ಪಸಂಖ್ಯಾತರ ವಿಷಯದಲ್ಲಿ ಹೀಗೇನಾದರೂ ಅಪ್ಪಿತಪ್ಪಿ ನಡೆದಿದ್ದರೆ, ಆಗ ಭಾರತದಲ್ಲಿರುವ ಜಾತ್ಯತೀತವಾದಿಗಳು, ಪ್ರಗತಿ(ಅಧೋ)ಪರರು, ಹಿಂದುದ್ವೇಷಿಗಳು ಹಾಗೂ ಪಾಶ್ಚಾತ್ಯ ಪ್ರಚಾರಮಾಧ್ಯಮಗಳು ಇಡೀ ಜಗತ್ತು, ಇಸ್ಲಾಮಿ ದೇಶಗಳು ಹಾಗೂ ಅವರ ಸಂಘಟನೆಗಳು ತಾಂಡವ ನಡೆಸಿ ಭಾರತವನ್ನು ‘ತಾಲಿಬಾನಿ’ಗಳೆಂದು ನಿರ್ಧರಿಸಿ ಕಠಿಣ ಕಾರ್ಯಾಚರಣೆ ಮಾಡುವಂತೆ ಬೇಡಿಕೆ ಮಾಡುತ್ತಿದ್ದರು ! ಬಾಂಗ್ಲಾದೇಶದ ಸಂದರ್ಭದಲ್ಲಿ ಆ ರೀತಿ ಏನೂ ಆಗಲಿಲ್ಲ ಹಾಗೂ ಭಾರತವು ಕೂಡ ಗಾಂಧಿಗಿರಿಯ ನಿಲುವಿನಲ್ಲಿದೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿರಿ !- ಸಂಪಾದಕರು 

* ಯಾವ ನೊವಾಖಾಲೀಯಲ್ಲಿ 1947 ರಲ್ಲಿ ವಿಭಜನೆಯ ಸಮಯದಲ್ಲಾದ ಗಲಭೆಯಲ್ಲಿ ಹಿಂದೂಗಳ ವಂಶ ಸಂಹಾರವಾಯಿತು ಹಾಗೂ ಮೋಹನದಾಸ ಗಾಂಧಿಯವರು ಅಲ್ಲಿನ `ಮುಸಲ್ಮಾನರು ಶಸ್ತ್ರಾಸ್ತ್ರಗಳನ್ನು ಕೆಳಗಿಡಲಿ’, ಎಂಬುದಕ್ಕಾಗಿ ಉಪವಾಸಕ್ಕೆ ಕುಳಿತಿದ್ದರೋ, ಅಲ್ಲಿನ ಸ್ಥಿತಿ ಇನ್ನೂ ಬದಲಾಗಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿರಿ !- ಸಂಪಾದಕರು 

ಬಾಂಗ್ಲಾದೇಶದಲ್ಲಿ ಮತಾಂಧರು ಇಲ್ಲಿಯವರೆಗೂ ಹಿಂದೂಗಳ ಮೇಲೆ ನಡೆಸಿದ ದಾಳಿಗಳು

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿ ಕಳೆದ ಕೆಲವು ದಿನಗಳಲ್ಲಿ ನಡೆದ ಹಿಂದೂಗಳ ಮೇಲಾದ ದಾಳಿಯಲ್ಲಿ 12 ಹಿಂದೂಗಳ ಕೊಲೆ, 17 ಹಿಂದೂಗಳು ಇನ್ನೂ ನಾಪತ್ತೆಯಾಗಿದ್ದು, 23 ಹಿಂದೂ ಹುಡುಗಿಯರು ಹಾಗೂ ಮಹಿಳೆಯರ ಮೇಲೆ ಬಲಾತ್ಕಾರ, ಹಾಗೂ 160 ಪೂಜಾ ಮಂಟಪಗಳು ಹಾಗೂ ದೇವಾಲಯದ ಮೇಲೆ ದಾಳಿ ನಡೆಸಿರುವ ಮಾಹಿತಿ ಬೆಳಕಿಗೆ ಬಂದಿದೆ. ಈ ಅಂಕಿ ಅಂಶವನ್ನು ‘ವಲ್ರ್ಡ ಹಿಂದೂ ಫೆಡರೇಶನ’ನ ಬಾಂಗ್ಲಾದೇಶದ ಶಾಖೆಯು ಜಾಹೀರು ಪಡಿಸಿದೆ.

1. ಇತ್ತೀಚಿನ ದಾಳಿಗಳಲ್ಲಿ ಚಾಂದಪೂರದ ಹಾಜೀಗಂಜದಲ್ಲಿ ಮಾಣಿಕ ಸಾಹಾ; ನೋವಾಖಾಲಿಯ ಚೌಮೋಹನೀಯಲ್ಲಿನ ಅರ್ಚಕರಾದ ಜತನ ಸಾಹಾ, ಇಸ್ಕಾನ ದೇವಾಲಯದ ನಿಮಾಯಿ ಕೃಷ್ಣ, ಹಾಗೂ ಮತ್ತೊಬ್ಬ ಅರ್ಚಕರು; ರಾಮ ಠಾಕುರ ಆಶ್ರಮದ 3 ಅರ್ಚಕರು; ಕ್ಯಾಮಿಲಾದಲ್ಲಿ ಪ್ರಶಾಂತ ದಾಸ ಹಾಗೂ ಕ್ಯಾಕ್ಸ್ ಬಾಜಾರದಲ್ಲಿನ ರಾಮೂ ದುರ್ಗಾ ದೇವಾಲಯದಲ್ಲಿ ಓರ್ವ ಹಿಂದು ಹೀಗೆ 9 ಹಿಂದೂಗಳನ್ನು ಕೊಲ್ಲಲಾಯಿತು.

2. ಕ್ಯಾಮಿಲಾ ಜಿಲ್ಲೆಯಲ್ಲಿ ನರಸಿಂಹ ದೇವ ಮಂದಿರ, ದಶಭುಜಾ ಕಾಲೀ ದೇವಸ್ಥಾನ, ಋಷಿಪರಾ ದೇವಸ್ಥಾನ, ರಾಜೇಶ್ವರೀ ಕಾಲೀ ದೇವಸ್ಥಾನ ಸೇರಿದಂತೆ 14 ದೇವಾಲಯಗಳು ಹಾಗೂ ಪೂಜಾ ಮಂಟಪಗಳ ಮೇಲೆ ದಾಳಿ ನಡೆಸಿ ಅದನ್ನು ಧ್ವಂಸ ಮಾಡಿ ಸುಟ್ಟುಹಾಕಲಾಗಿದೆ.

3. ಚಟಗಾವ ಜಿಲ್ಲೆಯಲ್ಲಿ 15 ಪೂಜಾ ಮಂಟಪಗಳನ್ನು ಧ್ವಂಸ ಮಾಡಲಾಯಿತು. ಅದೇ ರೀತಿ ಕಾಲಿ ದೇವಾಲಯದ ಮೇಲೆ ಆಕ್ರಮಣ ನಡೆಸಲಾಯಿತು.

4. ನೋವಾಖಾಲೀಯಲ್ಲಿರುವ ಇಸ್ಕಾನ ದೇವಾಲಯ, ರಾಮ ಠಾಕುರ ಆಶ್ರಮ ಸೇರಿದಂತೆ 10 ದೇವಸ್ಥಾನಗಳನ್ನು ಧ್ವಂಸಗೊಳಿಸಿ ಸುಡಲಾಗಿದೆ. ಚೌಮೋಹನೀಯಲ್ಲಿ 9 ದೇವಸ್ಥಾನಗಳ ಮೇಲೆ ಆಕ್ರಮಣ ನಡೆಸಲಾಯಿತು. ನಲಚಿರಾದಲ್ಲಿ 5 ದೇವಸ್ಥಾನಗಳ ಮೇಲೆ ದಾಳಿ ನಡೆಸಲಾಯಿತು. ಹಾಗೂ ಅಲ್ಲಿರುವ 20 ಹಿಂದೂಗಳ ಮನೆಗಳನ್ನು ಬೆಂಕಿ ಹಚ್ಚಿ ಸುಡಲಾಗಿದೆ. ಚಯನೀಬಾಜಾರ, ಬೆಗಮಗಂಜ, ಚೌಮೋಹನಿ ಹಾಗೂ ಸೊನೈಮರೀಯಲ್ಲಿ ಎಲ್ಲ ಹಿಂದೂಗಳ ಮನೆಗಳನ್ನು ಸುಡಲಾಗಿದೆ.