ಉತ್ತರಪ್ರದೇಶದ ಗಾಜಿಯಾಬಾದನಲ್ಲಿ ತಂದೂರಿ ರೋಟಿಗೆ ಎಂಜಲು ಹಚ್ಚುವ ಮತಾಂಧನ ಬಂಧನ !

‘ಇಂತಹ ವಿಕೃತಿ ಮತಾಂಧರಲ್ಲಿ ಎಲ್ಲಿಂದ ಬರುತ್ತದೆ ?’ ಇದನ್ನು ಜಾತ್ಯತೀತರು ಮತ್ತು ಪ್ರಗತಿ(ಅಧೋಗತಿ)ಪರರು ಕಂಡು ಹಿಡಿಯುವರೇ?- ಸಂಪಾದಕರು 

(ಎಡದಲ್ಲಿ) ಬಂಧಿತ ಆರೋಪಿ ತಮಿಜುದ್ದಿನ

ಗಾಜಿಯಾಬಾದ (ಉತ್ತರಪ್ರದೇಶ) – ಇಲ್ಲಿ ಪ್ರಸಾರವಾಗಿರುವ ಒಂದು ವಿಡಿಯೋದಲ್ಲಿ ತಂದೂರಿ ರೋಟಿ ಮಾಡುವ ವ್ಯಕ್ತಿಯು ಹಸಿ ರೊಟ್ಟಿಯ ಮೇಲೆ ಉಗುಳುತ್ತಾನೆ ಮತ್ತು ಅದನ್ನು ಬೇಯಿಸಲು ಭಟ್ಟಿಯಲ್ಲಿ ಇಡುತ್ತಿರುವುದು, ಕಂಡು ಬರುತ್ತದೆ. ಈ ವಿಡಿಯೋ ನೋಡಿ ಪೊಲೀಸರು ಕಾರ್ಯಾಚರಣೆ ಮಾಡಿ ಗಾಜಿಯಾಬಾದ್‍ನ ಸಿಹಾನಿಗೇಟ್ ಪರಿಸರದಲ್ಲಿನ ಚಿಕನ್ ಕಾರ್ನರ್ ದಲ್ಲಿನ ತಮಿಜುದ್ದಿನ ಎಂಬ ಕೆಲಸಗಾರನನ್ನು ಬಂಧಿಸಿದ್ದಾರೆ. ಅವನು ರೊಟ್ಟಿಯ ಮೇಲೆ ಉಗುಳಿ ತಯಾರಿಸುತ್ತಿದ್ದನು. ಮೊದಲು ವಿಡಿಯೋ ಪ್ರಸಾರವಾದ ನಂತರ ಜನರು ಗಲಾಟೆ ನಡೆಸಿದರು ಮತ್ತು ಚಿಕನ್ ಕಾರ್ನರ್ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ದೇಶದಲ್ಲಿ ಈ ಮೊದಲು ಸಹ ಇದೇ ರೀತಿ ಅನೇಕ ಘಟನೆಗಳು ಬೆಳಕಿಗೆ ಬಂದಿವೆ.