ಸರಕಾರಿ ನೌಕರಿಯಿಂದ ಜಮ್ಮೂ-ಕಾಶ್ಮೀರದ ಪ್ರತ್ಯೇಕತಾವಾದಿ ಮುಖಂಡ ಸಯ್ಯದ ಗಿಲಾನೀಯವರ ಮೊಮ್ಮಗನ ವಜಾ !

ಭಯೋತ್ಪಾದಕ ಚಟುವಟಿಕೆಗಳಿಗೆ ಸಹಾಯ ಮಾಡಿದ ಆರೋಪ

* ಒಂದು ಕಡೆ ಕಾಶ್ಮೀರದಲ್ಲಿನ ಯೋಧರು ಭಯೋತ್ಪಾದಕರೊಂದಿಗೆ ಹಗಲು ರಾತ್ರಿ ಹೋರಾಡುತ್ತಿರುವಾಗ ಮತ್ತೊಂದು ಕಡೆ ಕಾಶ್ಮೀರದ ಸರಕಾರದಲ್ಲಿಇಷ್ಟು ವರ್ಷಗಳ ಕಾಲ ಭಯೋತ್ಪಾದಕರ ಬೆಂಬಲಿಗರು ಕಾರ್ಯನಿರತರಿರುವುದು ಇಲ್ಲಿಯವರೆಗಿನ ಎಲ್ಲಾ ಪಕ್ಷದ ಆಡಳಿತಗಾರರಿಗೆ ಲಜ್ಜಾಸ್ಪದವಾಗಿದೆ !- ಸಂಪಾದಕರು

* ಇದು ಇಷ್ಟು ವರ್ಷ ಗೂಢಚರ ಇಲಾಖೆಗೆ ಹೇಗೆ ತಿಳಿಯಲಿಲ್ಲ ?- ಸಂಪಾದಕರು

(ಎಡದಿಂದ ) ಸಯ್ಯದ ಗಿಲಾನೀ ಮತ್ತು ಅವರ ಮೊಮ್ಮಗ ಅನೀಸ-ಉಲ್- ಇಸ್ಲಾಮ್‍

ಶ್ರೀನಗರ (ಜಮ್ಮೂ-ಕಾಶ್ಮೀರ) – ಭಯೋತ್ಪಾದಕ ಚಟುವಟಿಕೆಗಳಿಗೆ ಸಹಾಯ ಮಾಡಿದ ಆರೋಪದ ಮೇರೆಗೆ ಜಮ್ಮೂ-ಕಾಶ್ಮೀರ ಸರಕಾರವು ಪ್ರತ್ಯೇಕತಾವಾದಿ ಮುಖಂಡ ಸಯ್ಯದ ಅಲೀ ಶಾಹ ಗಿಲಾನೀಯವರ ಮೊಮ್ಮಗ ಅನೀಸ-ಉಲ್- ಇಸ್ಲಾಮ್‍ನನ್ನು ಸರಕಾರಿ ಕೆಲಸದಿಂದ ವಜಾ ಮಾಡಿದೆ. ಸಂವಿಧಾನದ ಕಲಂ 311 ಅಡಿಯಲ್ಲಿರುವ ವಿಶೇಷ ಎರ್ಪಾಡುಗಳನ್ನು ಬಳಸಿಕೊಂಡು ಈ ಕ್ರಮ ಕೈಗೊಳ್ಳಲಾಯಿತು. ‘ಸಯ್ಯದ ಗಿಲಾನೀಯವರು ತಮ್ಮ ಮೊಮ್ಮಗನನ್ನು ಸರಕಾರಿ ನೌಕರಿಯಲ್ಲಿ ಸೇರಿಸಿಕೊಳ್ಳಲು ಒತ್ತಾಯಿಸಿ ಹಿಂಸಾಚಾರ ಮಾಡಿದ್ದರು. 2016 ರಲ್ಲಿ ತಮ್ಮ ಮೊಮ್ಮಗನ ಆಯ್ಕೆಯಾದ ತಕ್ಷಣ ಅಲ್ಲಿನ ಪರಿಸ್ಥಿತಿ ಶಾಂತವಾಯಿತು’, ಎಂಬ ಮಾಹಿತಿಯನ್ನು ಸರಕಾರಿ ಮೂಲಗಳು ನೀಡಿದ್ದವು.

ಸರಕಾರಿ ಸೇವೆಗೆ ಆಯ್ಕೆಯಾಗುವ ಕೆಲವು ತಿಂಗಳ ಹಿಂದೆ ಅನೀಸ ಪಾಕಿಸ್ತಾನಕ್ಕೆ ಹೋಗಿ ಬಂದಿದ್ದನು. ಸಯ್ಯದ ಗಿಲಾನಿಯವರ ಹೇಳಿಕೆಯ ಮೇರೆಗೆ ಅಲ್ಲಿಯ ಐ.ಎಸ್.ಐ.ನ ಕರ್ನಲ ಯಾಸೀರನನ್ನು ಅನಿಸ ಭೇಟಿಯಾಗಿದ್ದನು, ಹಾಗೂ ಸರಕಾರಿ ನೌಕರಿಗೆ ಆಯ್ಕೆಯಾಗುವ ಮೊದಲು ಅನಿಸ ಶ್ರೀನಗರ ಹಾಗೂ ಅಕ್ಕಪಕ್ಕದಲ್ಲಿ ಕಾಯಿದೆ ಹಾಗೂ ಸುವ್ಯವಸ್ಥೆಯ ಘಟನೆಗಳು ಹಾಗೂ ಇತರ ಘಟನೆಗಳ ವೀಡಿಯೋ ತಯಾರಿಸಲು `ಡ್ರೋನ್’ ಹಾರಿಸುವ ವ್ಯವಸ್ಥೆಯನ್ನು ಮಾಡುತ್ತಿದ್ದನು ಹಾಗೂ ಅದರ ಚಿತ್ರೀಕರಣವನ್ನು ಐ.ಎಸ್.ಐ.ಗೆ ಕಳುಹಿಸುತ್ತಿದ್ದನು. ಅನಿಸ ಸಂಯುಕ್ತ ಅರಬ ಅಮಿರಾತ ಹಾಗೂ ಸೌದಿ ಅರೇಬಿಯಾದಲ್ಲಿ 3 ಸಂಶಯಿತ ಭಯೋತ್ಪಾದಕರ ಸಂಪರ್ಕದಲ್ಲಿದ್ದ ಎಂಬ ಮಾಹಿತಿ ಸಿಕ್ಕಿರುವುದಾಗಿ ಮೂಲಗಳು ಹೇಳಿವೆ.