ರಾಮಲೀಲಾದಲ್ಲಿ ಪುತ್ರವಿಯೋಗದ ಪ್ರಸಂಗದಲ್ಲಿ, ನಟಿಸುತ್ತಿದ್ದ ರಾಜ ದಶರಥನ ಪಾತ್ರಧಾರಿಯಿಂದ ಪ್ರತ್ಯಕ್ಷದಲ್ಲಿ ತನ್ನ ಪ್ರಾಣ ತ್ಯಾಗ !

ರಾಜೇಂದ್ರ ಸಿಂಗ್ ರಾಮಲೀಲಾದಲ್ಲಿ ರಾಜ ದಶರಥನ ಪಾತ್ರವನ್ನು ನಿರ್ವಹಿಸುತ್ತಿದ್ದರು

ಬಿಜನೌರ್ (ಉತ್ತರಪ್ರದೇಶ) – ರಾಮಾಯಣದಲ್ಲಿ ಹೇಗೆ ಪುತ್ರವಿಯೋಗದ ಸಮಯದಲ್ಲಿ ಕಂಗೆಟ್ಟಿದ್ದ ರಾಜ ದಶರಥರು ತನ್ನ ಪ್ರಾಣವನ್ನು ಬಿಡುತ್ತಾರೆ, ಅದೇ ರೀತಿ ರಾಮಲೀಲಾ ನಾಟಕ ಪ್ರಸ್ತುತಿಯಲ್ಲಿಯೂ ಸಂಭವಿಸಿದೆ ಇಲ್ಲಿಯ ಹಸನಪುರದಲ್ಲಿ ರಾಮಲೀಲಾ ನಡೆಯುತ್ತಿರುವಾಗ ಪುತ್ರ ವಿಯೋಗದ ಪ್ರಸಂಗದಲ್ಲಿ ರಾಜ ದಶರಥನ ಪಾತ್ರವನ್ನು ನಿರ್ವಹಿಸುತ್ತಿದ್ದ ರಾಜೇಂದ್ರ ಸಿಂಗ್ ಇವರು ಪ್ರತ್ಯಕ್ಷದಲ್ಲಿ ಪ್ರಾಣ ತ್ಯಾಗ ಮಾಡಿರುವ ಘಟನೆ ನಡೆದಿದೆ. ಮೊದಲ ಬಾರಿಗೆ ‘ಅವರು ನಿಜವಾಗಿಯೂ ಪ್ರಾಣತ್ಯಾಗ ಮಾಡಿದ್ದಾರೆ’, ಎಂದು ಯಾರಿಗೂ ಅರ್ಥವಾಗಲಿಲ್ಲ. ಪ್ರಸಂಗ ಮುಗಿದ ನಂತರ, ಅವರ ಸಹೋದ್ಯೋಗಿಗಳು ರಾಜೇಂದ್ರ ಸಿಂಗ್ ಅವರನ್ನು ಎಬ್ಬಿಸಲು ಪ್ರಯತ್ನಿಸಿದಾಗ ಅವರು ಮೃತಪಟ್ಟಿದ್ದಾರೆ ಎಂದು ಗಮನಕ್ಕೆ ಬಂದಿತು. ಅವರು ಕಳೆದ 20 ವರ್ಷಗಳಿಂದಲೂ ಈ ಪಾತ್ರವನ್ನು ನಿರ್ವಹಿಸುತ್ತಿದ್ದರು.