ದೇಶದಲ್ಲಿ ಮಾದಕ ದ್ರವ್ಯಗಳ ವ್ಯಸನದಿಂದ ಕಳೆದ 3 ವರ್ಷಗಳಲ್ಲಿ, ಸರಾಸರಿ 112 ಜನರ ಸಾವು

ಇದು ಸಮಾಜಕ್ಕೆ ಸಾಧನೆಯನ್ನು ಕಲಿಸದೇ ಇದ್ದುದರ ಹಾಗೂ ಮಾದಕ ದ್ರವ್ಯಗಳ ಕಳ್ಳಸಾಗಾಣಿಕೆಯ ಮೇಲೆ ಕಠಿಣ ಕ್ರಮ ಕೈಗೊಳ್ಳದೆ ಇದ್ದುದರ ಪರಿಣಾಮವಾಗಿದೆ. ಇದಕ್ಕೆಲ್ಲ ಇಲ್ಲಿಯವರೆಗಿನ ಎಲ್ಲಾ ಪಕ್ಷದ ಆಡಳಿತಗಾರರು ಹೊಣೆಗಾರರಾಗಿದ್ದಾರೆ ! ಹಿಂದೂ ರಾಷ್ಟ್ರದಲ್ಲಿ ಈ ರೀತಿಯ ಸ್ಥಿತಿಯಿರುವುದಿಲ್ಲ ! – ಸಂಪಾದಕರು 

ನವದೆಹಲಿ : ಭಾರತದಲ್ಲಿ ಕಳೆದ ಮೂರು ವರ್ಷಗಳಲ್ಲಿ ಮಾದಕ ಪದಾರ್ಥಗಳ ವ್ಯಸನದಿಂದ ಸರಾಸರಿ 112 ಜನರ ಸಾವು ಸಂಭವಿಸಿರುವುದು ವರದಿಯಾಗಿವೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ವಿಭಾಗದಿಂದ ಅಂಕಿಅಂಶದ ಮೂಲಕ ಮಾಹಿತಿ ನೀಡಲಾಗಿದೆ. ವಿಶೇಷವೆಂದರೆ ಔಷಧಗಳ ಮಿತಿಮೀರಿದ ಸೇವನೆಯಿಂದ ಆಗಿರುವ ಸಾವಿನ ಸಂಖ್ಯೆ ಶೇ. 20 ರಷ್ಟು ಕಡಿಮೆಯಾಗಿದೆ.

1. ಈ ಅಂಕಿಅಂಶಗಳ ಪ್ರಕಾರ, 2017 ರಿಂದ 2019 ರವರೆಗಿನ ಮೂರು ವರ್ಷಗಳಲ್ಲಿ ಮಹಾರಾಷ್ಟ್ರದಲ್ಲಿ ಮಾದಕ ದ್ರವ್ಯಗಳ ವ್ಯಸನದಿಂದ ಒಟ್ಟು 102 ಜನರು ಸಾವನ್ನಪ್ಪಿದ್ದಾರೆ.

2. ರಾಜಸ್ಥಾನದಲ್ಲಿ 2017 ರಲ್ಲಿ 125, 2018 ರಲ್ಲಿ 153 ಮತ್ತು 2019 ರಲ್ಲಿ 60 ಜನರು ಮಾದಕ ದ್ರವ್ಯಗಳ ಮತ್ತು ಇತರ ವ್ಯಸನಗಳಿಂದ ಸಾವನ್ನಪ್ಪಿದ್ದಾರೆ. ಉತ್ತರಪ್ರದೇಶದಲ್ಲಿ 2017 ರಿಂದ 2019 ರ ನಡುವೆ ಈ ವ್ಯಸನಗಳಿಂದ ಒಟ್ಟು 236 ಜನರು ಸಾವನ್ನಪ್ಪಿದರೆ, ಮಧ್ಯಪ್ರದೇಶದಲ್ಲಿ ಅದೇ ಅಂಕಿ ಅಂಶ 140 ರಷ್ಟಿತ್ತು.