ಆಜಮ್‍ಗಡ (ಉತ್ತರಪ್ರದೇಶ) ದಲ್ಲಿ ಶ್ರೀ ದುರ್ಗಾದೇವಿಯ ಪೂಜಾ ಮಂಟಪದಲ್ಲಿ ನುಗ್ಗಿ ಬಂದೂಕನ್ನು ತೋರಿಸಿ ಮೂರ್ತಿಯನ್ನು ತೆಗೆಯಲು ಹೇಳಿದ್ದ ಮತಾಂಧನ ಬಂಧನ

ಉತ್ತರಪ್ರದೇಶವೇನು ಪಾಕಿಸ್ತಾನದಲ್ಲಿದೆಯೇ ? ಉತ್ತರಪ್ರದೇಶದಲ್ಲಿ ಭಾಜಪ ಸರಕಾರವಿರುವಾಗ ಮತಾಂಧರಿಗೆ ಇಂತಹ ಧೈರ್ಯ ಹೇಗೆ ಬರುತ್ತದೆ ? ಎಂಬ ಪ್ರಶ್ನೆಯು ಹಿಂದೂಗಳ ಮನಸ್ಸಿನಲ್ಲಿ ಉದ್ಭವಿಸುತ್ತದೆ ! – ಸಂಪಾದಕರು 

ಬಂಧಿತ ಆರೋಪಿ ಅಂಸಾರ್ ಅಹಮದ್ ಅಲಿಯಾಸ್ ಮಿಂಟು

ಆಜಮ್‍ಗಡ (ಉತ್ತರಪ್ರದೇಶ) – ಉಚಹುವಾಂ ಗ್ರಾಮದಲ್ಲಿನ ಅಂಸಾರ್ ಅಹಮದ್ ಅಲಿಯಾಸ್ ಮಿಂಟು ಬಂದೂಕನ್ನು ತೆಗೆದುಕೊಂಡು ಗ್ರಾಮದ ಶ್ರೀ ದುರ್ಗಾದೇವಿಯ ಪೂಜಾ ಮಂಟಪದಲ್ಲಿ ನುಗ್ಗಿ ಅಲ್ಲಿಯ ವಿಗ್ರಹವನ್ನು ತೆಗೆಯುವಂತೆ ಬೆದರಿಕೆ ಹಾಕಿದನು. ಈ ಬಗ್ಗೆ ಪೂಜಾ ಸಮಿತಿಯು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ನಂತರ, ಅಂಸಾರ್ ವಿರುದ್ಧ ದೂರು ದಾಖಲಿಸಲಾಗಿದೆ. ನಂತರ ಪೊಲೀಸರು ಆತನನ್ನು ಬಂಧಿಸಿದರು.