ಬಾಂಗ್ಲಾದೇಶದಲ್ಲಿ ಶುಕ್ರವಾರದ ನಮಾಜಿನ ನಂತರ 200 ಕ್ಕೂ ಹೆಚ್ಚು ಮತಾಂಧರಿಂದ ಪುನಃ ಹಿಂದೂಗಳ ಮೇಲೆ ದಾಳಿ

ಕುರಾನ್‍ನ ಅವಮಾನ ಆಗಿದೆ ಎಂಬ ಗಾಳಿಸುದ್ದಿಯ ಪ್ರಕರಣ

ಇಸ್ಕಾನ್‍ನ ದೇವಸ್ಥಾನದ ಮೇಲೆ ದಾಳಿ ಮಾಡಿ 2 ಸಾಧು ಮತ್ತು 1 ಭಕ್ತರ ಹತ್ಯೆ

ಹಿಂದೂ ಕುಟುಂಬದ 3 ಜನರ ಮೇಲೆ ಅತ್ಯಾಚಾರ

ಮದರಸಾದ ವಿದ್ಯಾರ್ಥಿಗಳಿಂದ ಶ್ರೀ ದುರ್ಗಾದೇವಿ ಪೂಜಾ ಮಂಟಪದ ಮೇಲೆ ದಾಳಿ

* ಪ್ರಧಾನಿ ಶೇಖ ಹಸಿನಾ ಇವರು ಈ ಮೊದಲು ‘ಹಿಂಸಾಚಾರ ಮಾಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು’, ಎಂದು ಹೇಳಿದ್ದರು; ಆದರೆ ಅದರ ಬಗ್ಗೆ ಮತಾಂಧರ ಮೇಲೆ ಯಾವುದೇ ಪರಿಣಾಮ ಆಗಲಿಲ್ಲ ಅಥವಾ ಶೇಖ ಹಸಿನಾ ಇವರಿಂದ ಮತಾಂಧರ ಕೂದಲು ಸಹ ಕೊಂಕಿಸಲು ಆಗುವುದಿಲ್ಲ ಎಂಬುದು ಈ ದಾಳಿಯಿಂದ ಗಮನಕ್ಕೆ ಬರುತ್ತದೆ ! ಇದನ್ನು ನೋಡಿಯಾದರೂ ಭಾರತ ಸರಕಾರವು ಹಿಂದೂಗಳ ರಕ್ಷಣೆಗಾಗಿ ಏನಾದರು ಮಾಡಬಹುದೇ ? – ಸಂಪಾದಕರು 

* ಇಸ್ಲಾಮಿ ದೇಶದಲ್ಲಿ ಹಿಂದೂಗಳ ಮೇಲಾಗುವ ದಾಳಿಯ ಬಗ್ಗೆ ಭಾರತದಲ್ಲಿರುವ ಹಾಗೂ ಜಗತ್ತಿನಾದ್ಯಂತ ಜಾತ್ಯತೀತವಾದಿ ಹಾಗೂ ಪ್ರಗತಿ(ಅಧೋಗತಿ)ಪರರು ಚಕಾರವನ್ನೂ ಎತ್ತುವುದಿಲ್ಲ. ತದ್ವಿರುದ್ಧ ಇಂತಹ ಅಸಂಖ್ಯಾತ ದಾಳಿಯಿಂದ ತಪ್ಪಿಸಿಕೊಳ್ಳಲು ತಮ್ಮ ಜೀವವನ್ನು ಬಿಗಿ ಹಿಡಿದು ಭಾರತದಲ್ಲಿ ಆಶ್ರಯ ಪಡೆದ ಹಿಂದೂಗಳಿಗೆ ಶೀಘ್ರವಾಗಿ ಭಾರತಿಯ ನಾಗರಿಕತ್ವ ಸಿಗಲು ಮಾಡಿದ್ದ ‘ಸಿ.ಎ.ಎ’ ಕಾನೂನನ್ನು(ನಾಗರಿಕತ್ವ ತಿದ್ದುಪಡಿ ಕಾನೂನು) ಮಾತ್ರ ವಿರೋಧಿಸುತ್ತಾರೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ ! -ಸಂಪಾದಕರು 

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದ ನೌವಾಖಾಲಿಯಲ್ಲಿ ಶುಕ್ರವಾರದ ನಮಾಜಿನ ನಂತರ ಇಸ್ಕಾನ್‍ನ ಒಂದು ದೇವಸ್ಥಾನದ ಮೇಲೆ 200 ಕ್ಕೂ ಹೆಚ್ಚು ಮತಾಂಧರು ದಾಳಿ ನಡೆಸಿ ಇಸ್ಕಾನ್‍ನ 2 ಸಾಧುಗಳಾದ ನಿತಾಯಿ ದಾಸ ಪ್ರಭು ಮತ್ತು ಜತನ ದಾಸ ಪ್ರಭು, ಅದೇ ರೀತಿ 25 ವಯಸ್ಸಿನ ಭಕ್ತ ಪಾರ್ಥ ದಾಸನ ಹತ್ಯೆ ಮಾಡಿದ್ದಾರೆ. ಪಾರ್ಥ ದಾಸ ಇವರ ಮೃತದೇಹವು ಸರೋವರದ ಬಳಿ ಪತ್ತೆಯಾಗಿದೆ. ಇಸ್ಕಾನ್ ಇವರು ಟ್ವೀಟ್ ಮಾಡುವ ಮೂಲಕ ಈ ಮಾಹಿತಿಯನ್ನು ನೀಡಿದೆ. ಇಸ್ಕಾನ್ ಬಾಂಗ್ಲಾದೇಶದ ಪ್ರಧಾನಿ ಶೇಖ ಹಸಿನಾ ಮತ್ತು ಭಾರತದ ಪ್ರಧಾನಿ ನರೆಂದ್ರ ಮೋದಿಯವರಿಗೆ ಸಹಾಯ ಮಾಡುವಂತೆ ಕೋರಿದೆ. `ಈ ದಾಳಿಯ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು’, ಎಂದು ಇಸ್ಕಾನ್ ಒತ್ತಾಯಿಸಿದೆ. ನವರಾತ್ರಿಯ ಕಾಲಾವಧಿಯಲ್ಲಿ ಕಾಮಿಲಾ ಜಿಲ್ಲೆಯಲ್ಲಿ ಮತಾಂಧರು ಕುರಾನ್‍ನ ಅವಮಾನ ಮಾಡಲಾಗಿದೆ ಎಂಬ ಗಾಳಿ ಸುದ್ದಿಯಿಂದ ಹಿಂದೂಗಳ ಮೇಲೆ ಮತ್ತು ಶ್ರೀ ದುರ್ಗಾದೇವಿಯ 9 ಪೂಜಾ ಮಂಟಪದ ಮೇಲೆ ದಾಳಿ ನಡೆಸಿ 4 ಹಿಂದೂಗಳನ್ನು ಹತ್ಯೆ ಮಾಡಿದ್ದರು.

ಇಸ್ಕಾನ್‍ನ ಉಪಾಧ್ಯಕ್ಷ ಹಾಗೂ ವಕ್ತಾರರಾದ ರಾಧಾರಮಣ ದಾಸ ಇವರು ಟ್ವೀಟ್‍ನಲ್ಲಿ ಮುಂದಿನ ಮಾಹಿತಿಯನ್ನು ನೀಡಿದ್ದಾರೆ. ಪಾರ್ಥ ದಾಸರು ನಾಪತ್ತೆಯಾಗಿದ್ದರು. ನಂತರ ಮಾರನೇ ದಿನ ಆತನ ಮೃತದೇಹ ಸರೋವರದಲ್ಲಿ ತೇಲುತ್ತಿರುವಾಗ ಪತ್ತೆಯಾಯಿತು. ಅವರಿಗೆ ತುಂಬಾ ಚಿತ್ರಹಿಂಸೆ ನೀಡಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ ಎಂಬುದು ಗಮನಕ್ಕೆ ಬಂದಿತು. ಅವರ ಶರೀರದಲ್ಲಿನ ಕೆಲವು ಭಾಗಗಳನ್ನು ತೆಗೆಯಲಾಗಿದ್ದು ಕಂಡು ಬಂದಿದೆ. ಈ ಘಟನೆಯ ಮೊದಲು ಹಬೀಬಗಂಜದಲ್ಲಿ ಮದರಸಾದಲ್ಲಿನ ವಿದ್ಯಾರ್ಥಿಗಳು ಶ್ರೀ ದುರ್ಗಾದೇವಿಯ ಪೂಜಾ ಮಂಟಪದ ಮೇಲೆ ದಾಳಿ ಮಾಡಿದರು. ಇದರಲ್ಲಿ ಓರ್ವ ಪೊಲೀಸು ಸಹಿತ 20 ಹಿಂದೂಗಳು ಗಾಯಗೊಂಡಿದ್ದರು.

ಮತಾಂಧರಿಂದ ಹಿಂದೂ ಕುಟುಂಬದ 3 ಜನರ ಮೇಲೆ ಅತ್ಯಾಚಾರ

‘ಇಸ್ಕಾನ್ ಬಾಂಗ್ಲಾದೇಶ’ವು ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಆಯೋಗಕ್ಕೆ ಟ್ವೀಟ್ ಮಾಡಿ ಈ ದಾಳಿಯಲ್ಲಿ ಒಂದು ಹಿಂದೂ ಕುಟುಂಬದ ಮಹಿಳೆಯರ ಮೇಲೆ ಅತ್ಯಾಚಾರ ಆಗಿರುವ ಬಗ್ಗೆ ಮಾಹಿತಿ ನೀಡಿದೆ. ಚಾಂದಿಪುರದ ಹಾಜಿಗಂಜದಲ್ಲಿ ಮತಾಂಧರು ಓರ್ವ ಹಿಂದೂ ಮಹಿಳೆ, ಆಕೆಯ ಮಗಳು ಮತ್ತು 10 ವರ್ಷದ ಮೊಮ್ಮಗಳ ಮೇಲೆ ಅತ್ಯಾಚಾರ ಆಗಿರುವ ಬಗ್ಗೆ ಟ್ವೀಟ್‍ನಲ್ಲಿ ತಿಳಿಸಲಾಗಿದೆ.

ದೇವಸ್ಥಾನದ ಬಳಿ 18 ಬಾಂಬ್ ಗಳು ಪತ್ತೆ !

ಬಾಂಗ್ಲಾದೇಶದ ಆಂಗ್ಲ ದೈನಿಕ ‘ದ ಡೆಲಿ ಸ್ಟಾರ್’ ಪ್ರಕಟಿಸಿರುವ ವಾರ್ತೆಯಲ್ಲಿ, ಖಲನಾದಲ್ಲಿ ರುಪಸಾ ಉಪಜಿಲ್ಲೆಯ ಒಂದು ದೇವಸ್ಥಾನದ ಬಳಿ 18 ಬಾಂಬ್‍ಗಳು ಪತ್ತೆಯಾಗಿವೆ. ಪೊಲೀಸರು ಈ ಬಾಂಬ್ ಅನ್ನು ನಿಷ್ಕ್ರೀಯಗೊಳಿಸಿದ್ದಾರೆ ಎಂದು ಹೇಳಲಾಗಿದೆ.

ಇಸ್ಕಾನ್‍ನ ಉಪಾಧ್ಯಕ್ಷರ ದಾಳಿಯ ಮಾಹಿತಿ ನೀಡಿದ ಟ್ವೀಟ್‍ಅನ್ನು ‘ಡಿಲೀಟ್’ ಮಾಡಿಸಿದ ಟ್ವಿಟರ್ !

ಕೆಲವು ತಿಂಗಳ ಹಿಂದೆ ಕೇಂದ್ರ ಸರಕಾರಕ್ಕೆ ‘ವಿಚಾರಸ್ವಾತಂತ್ರ್ಯವನ್ನು ಗೌರವಿಸಿ !’, ಎಂದು ಉಪದೇಶವನ್ನು ನೀಡುವ ಟ್ವಿಟರ್‍ನ ಹಿಂದೂದ್ವೇಷದ ದ್ವಿಮುಖನೀತಿ !- ಸಂಪಾದಕರು 

ಶ್ರೀ. ರಾಧಾರಮಣ ದಾಸ

ಇಸ್ಕಾನ್‍ನ ಉಪಾಧ್ಯಕ್ಷ ಹಾಗೂ ವಕ್ತಾರರಾದ ಶ್ರೀ. ರಾಧಾರಮಣ ದಾಸ ಇವರು ಬಾಂಗ್ಲಾದೇಶದ ಇಸ್ಕಾನ್‍ನ ಭಕ್ತರ ಮೇಲಿನ ದಾಳಿಯ ಬಗ್ಗೆ ಮಾಹಿತಿ ನೀಡಿದ್ದ ಟ್ವೀಟ್ ಸಂಬಂಧ ಪಟ್ಟ ಚಿತ್ರಗಳ ಸಹಿತ ಪೋಸ್ಟ ಮಾಡಿದ್ದರು. ಇದಕ್ಕೆ ಟ್ವಿಟರ್ ಆಕ್ಷೇಪಣೆ ನೀಡುತ್ತಾ ಈ ಟ್ವೀಟ್ ಅಂದರೆ `ಗ್ರೆಟ್ಯುಇಟಸ್ ಗೋರ್'(ಅನಾವಶ್ಯಕ ಏನೂ ಕಾರಣವಿಲ್ಲದಿರುವಾಗ ರಕ್ತದಲ್ಲಿ ಮಿಂದ ಜನರ ಚಿತ್ರ ಪೋಸ್ಟ ಮಾಡುವುದು) ಎಂಬ ತಮ್ಮ ಧೋರಣೆಯ ವಿರುದ್ಧ ಇದೆ ಎಂದು ಹೇಳುತ್ತಾ ದಾಸ್ ಇವರನ್ನು ಈ ಟ್ವೀಟ್ ‘ಡಿಲೀಟ್’ ಮಾಡುವಂತೆ ಮಾಡಿತು. (ಹಿಂದೂಗಳ ಮೇಲಿನ ದಾಳಿಯ ಬಗ್ಗೆ ಜಾಗೃತಿ ಮಾಡುವುದು, ಟ್ವಿಟರ್‍ಗೆ ಅನಾವಶ್ಯಕವೆನಿಸುತ್ತದೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ ! ಇಂತಹ ಹಿಂದೂದ್ವೇಷಿ ಟ್ವಿಟರ್ ನ ವಿರುದ್ಧ ಕೇಂದ್ರ ಸರಕಾರವು ಕಠಿಣ ಕ್ರಮ ಕೈಗೊಳ್ಳಬೇಕು, ಎಂದು ಸಂಕಷ್ಟದಲ್ಲಿರುವ ಹಿಂದೂಗಳಿಗೆ ಅನಿಸುತ್ತದೆ. – ಸಂಪಾದಕರು) ಟ್ವಿಟರ್ ಶ್ರೀ. ದಾಸ ಇವರಿಗೆ ಟ್ವೀಟ್‍ಅನ್ನು ಅಳಿಸಿದ ನಂತರವೇ ಟ್ವೀಟ್ ಖಾತೆ ಉಪಯೋಗಿಸಲು ಅನುಮತಿ ನೀಡಲಾಗುವುದು, ಎಂದು ಎಚ್ಚರಿಕೆಯನ್ನು ನೀಡಿದೆ. ಶ್ರೀ. ದಾಸ ಇವರು ಈ ಟ್ವಿಟ್ ಅಳಿಸಿದ ನಂತರ ಟ್ವಿಟರ್‍ನ ಈ ಹಿಂದುದ್ವೇಷದ ಬಗ್ಗೆ ಹೊಸ ಟ್ವೀಟ್ ಮಾಡಿ ಎಲ್ಲರಿಗೆ ಈ ಮಾಹಿತಿಯನ್ನು ನೀಡಿದ್ದಾರೆ. ದಾಸ ಇವರು, ‘ಹಿಂದೂಗಳನ್ನು ನಾಲ್ಕೂ ದಿಕ್ಕುಗಳಿಂದ ಸುತ್ತುವರೆಯಲಾಗಿದೆ. ನಾವು ನಮ್ಮ ಮೇಲಿನ ದಾಳಿಯ ಬಗ್ಗೆ ಮಾಹಿತಿಯನ್ನು ಸಹ ನೀಡಲು ಸಾಧ್ಯವಿಲ್ಲ’, ಎಂದು ಹೇಳಿದ್ದಾರೆ.