ಉದ್ದೇಶಪೂರ್ವಕವಾಗಿ ಕುರಾನನ್ನು ಅವಮಾನಿಸಿ ಹಿಂದೂಗಳ ಮೇಲೆ ಅದರ ದೋಷಾರೋಪಣೆ !
|
ಕಾಮಿಲಾ (ಬಾಂಗ್ಲಾದೇಶ) – ಇಲ್ಲಿನ ನನುಆ ದಿಘಿ ಈ ಪ್ರದೇಶದಲ್ಲಿನ ಶ್ರೀ ದುರ್ಗಾದೇವಿ ಪೂಜೆಯ ಮಂಟಪದ ಮೇಲೆ ಮತಾಂಧರು ದಾಳಿ ಮಾಡಿದರು. ಆ ಸಮಯದಲ್ಲಿ ಮತಾಂಧರು ಮಂಟಪವನ್ನು ಧ್ವಂಸ ಮಾಡಿದರು, ಹಾಗೆಯೇ ಮಂಟಪದಲ್ಲಿನ ದೇವತೆಗಳ ಮೂರ್ತಿಗಳನ್ನು ಒಡೆದು ಹಾಕಿದರು. ಕುರಾನವನ್ನು ಅವಮಾನಿಸದ ಗಾಳಿಸುದ್ದಿಯ ನಂತರ ಈ ದಾಳಿಯನ್ನು ಮಾಡಲಾಯಿತು.
೧. ಈ ಘಟನೆಯ ಬಗ್ಗೆ ಖ್ಯಾತ ಬಾಂಲ್ಗಾದೇಶಿ ಲೇಖಕಿ ತಸ್ಲಿಮಾ ನಸರೀನ್ ಇವರು ಟ್ವಿಟ್ ಮಾಡಿ, ಕೆಲವು ಹಿಂದೂವಿರೋಧಿ ಕಟ್ಟರವಾದಿ ಮತಾಂಧರು ಸದ್ದಿಲ್ಲದೇ ಕುರಾನನ್ನು ತಂದು ಶ್ರೀ ದುರ್ಗಾಪೂಜಾ ಮಂಟಪದಲ್ಲಿನ ಶ್ರೀ ಹನುಮಂತನ ಮೂರ್ತಿಯ ಕಾಲಿನಡಿಯಲ್ಲಿ ಇಟ್ಟರು. ಹಿಂದೂಗಳ ಮೇಲೆ ದಾಳಿ ಮಾಡಲು ಅವರಿಗೆ ಕಾರಣ ಬೇಕಿತ್ತು. ಧಾರ್ಮಿಕ ಭಾವನೆಯನ್ನು ನೋಯಿಸಿದ ಕಾರಣವು ಅವರಿಗೆ ಸಿಕ್ಕಿತು. ಈ ಘಟನೆಯ ನಂತರ ಬಾಂಗ್ಲಾದೇಶ ಸರಕಾರವು ಅಲ್ಪಸಂಖ್ಯಾತ ಸಮುದಾಯವನ್ನು ಕಾಪಾಡಲಿದೆ ಎಂಬ ಅಪೇಕ್ಷೆ ಇದೆ ಎಂದು ಹೇಳಿದ್ದಾರೆ. (ಇಂತಹ ಅಪೇಕ್ಷೆಯನ್ನಿಟ್ಟುಕೊಂಡು ಬದುಕುವುದನ್ನು ಹಿಂದೂಗಳು ಬಿಟ್ಟುಬಿಡಬೇಕು; ಏಕೆಂದರೆ ಯಾವುದೇ ಇಸ್ಲಾಮಿ ದೇಶಗಳಲ್ಲಿನ ಸರಕಾರಗಳು ಹಿಂದೂಗಳ ರಕ್ಷಣೆಯನ್ನು ಎಂದಿಗೂ ಮಾಡುವುದಿಲ್ಲ. ‘ನಾವು ಏನಾದರೂ ಮಾಡುತ್ತಿದ್ದೇವೆ’, ಎಂದು ಒಂದು ಸಲ ತೋರಿಸುವ ಪ್ರಯತ್ನಮಾಡಲಾಗುವುದು; ಆದರೆ ರಕ್ಷಣೆಯಾಗುವುದಿಲ್ಲ. ಹೀಗಿದ್ದರೆ, ಬಾಂಗ್ಲಾದೇಶ, ಪಾಕಿಸ್ತಾನ, ಅಫಘಾನಿಸ್ತಾನದಲ್ಲಿನ ಹಿಂದೂಗಳ ವಂಶಸಂಹಾರವು ನಿಲ್ಲುತ್ತಿತ್ತು ಮತ್ತು ಅವರ ಜನಸಂಖ್ಯೆಯಲ್ಲಿ ಏರಿಕೆಯಾಗುತ್ತಿತ್ತು. ! – ಸಂಪಾದಕರು)
Some anti-Hindu Muslim fanatics secretly put the Quran on the feet of Hanuman statue at Durga puja pandal in Comilla, Bangladesh. It is just for an excuse to attack Hindus in the name of hurting religious feelings. Hope govt will save the minority community.
— taslima nasreen (@taslimanasreen) October 13, 2021
೨. ಈ ಬಗ್ಗೆ ‘ಬಾಂಗ್ಲಾದೇಶ ಹಿಂದೂ ಯುನಿಟಿ ಕೌನ್ಸಿಲ್’, ಇಲ್ಲಿನ ಎಲ್ಲ ಹಿಂದೂಗಳು ಜಾಗರೂಕತೆಯಿಂದರುವ ಆವಶ್ಯಕತೆಯಿದೆ. ನಾವು ಹಿಂದೂಗಳ ಸಂರಕ್ಷಣೆಯಾಗಲು ಪೊಲೀಸರ ಸಂಪರ್ಕದಲ್ಲಿದ್ದೇವೆ. (ಭಾರತದ್ದು ಆಗಿರಲಿ ಅಥವಾ ಬಾಂಗ್ಲಾದೇಶದ, ಪೊಲೀಸರು ಹಿಂದೂಗಳ ರಕ್ಷಣೆ ಮಾಡುವರು, ಎಂಬುದರ ಮೇಲೆ ಎಂದಿಗೂ ವಿಶ್ವಾಸವಿಡಲು ಸಾಧ್ಯವಿಲ್ಲ ! – ಸಂಪಾದಕರು)
Spreading rumors of insulting the Qur’an, the puja mandapa of Nanua Dighi par in Comilla was attacked. https://t.co/KmljSISWFu pic.twitter.com/4oM1gS46yJ
— Bangladesh Hindu Unity Council (@UnityCouncilBD) October 13, 2021
೩. ಈ ಹಿಂದೆ ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿನ ಟಿಪ್ಪು ಸುಲ್ತಾನ ರಸ್ತೆಯ ಮೇಲಿನ ಹಿಂದೂಗಳ ದೇವಾಲಯದ ಶ್ರೀ ದುರ್ಗಾದೇವಿಯ ಮೂರ್ತಿಯನ್ನು ಸ್ಥಾಪಿಸಿ ಪೂಜೆ ಮಾಡಲು ಮತಾಂಧರು ವಿರೋಧಿಸಿದ್ದರು. ಇದರಿಂದ ಹಿಂದೂಗಳು ಸರಕಾರ ನೀಡಿದ ತಾತ್ಕಾಲಿಕ ಸ್ಥಳದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯನ್ನು ಸ್ಥಳಾಂತರಿಸಿ ಪೂಜೆ ಮಾಡಬೇಕಾಗಿ ಬಂದಿತ್ತು.