ನವರಾತ್ರೋತ್ಸವದ ನಿಮಿತ್ತ ತೆಲಂಗಣಾ ಹಾಗೂ ಆಂಧ್ರಪ್ರದೇಶದಲ್ಲಿನ ಕನ್ಯಕಾ ಪರಮೇಶ್ವರೀ ದೇವಿಯ ದೇವಸ್ಥಾನದಲ್ಲಿ ಕೋಟಿಗಟ್ಟಲೆ ರೂಪಾಯಿ ನೋಟುಗಳಿಂದ ಅಲಂಕಾರ !

ದೇವಸ್ಥಾನವನ್ನು ಅಲಂಕರಿಸಲು ನೋಟುಗಳನ್ನು ಬಳಸುವುದು ಅತ್ಯಂತ ಅಯೋಗ್ಯವಾಗಿದೆ. ಹಿಂದೂಗಳಿಗೆ ಧರ್ಮಶಿಕ್ಷಣ ಹಾಗೂ ಸಾಮಾಜಿಕ ತಿಳುವಳಿಕೆಯಿಲ್ಲದ ಕಾರಣ ಕ್ಷುಲ್ಲಕ ಜನಪ್ರಿಯತೆಗೋಸ್ಕರ ಈ ರೀತಿ ಏನಾದರೂ ಕೃತ್ಯ ಮಾಡುತ್ತಿರುತ್ತಾರೆ !

ಮಹಬೂಬನಗರ (ತೆಲಂಗಣಾ) – ನವರಾತ್ರೋತ್ಸವದ ನಿಮಿತ್ತ ಕನ್ಯಕಾ ಪರಮೇಶ್ವರಿ ದೇವಿಯ ದೇವಾಲಯದಲ್ಲಿ ಕೋಟಿಗಟ್ಟಲೆ ರೂಪಾಯಿ ನೋಟುಗಳ ಅಲಂಕಾರ ಮಾಡಲಾಯಿತು. ಅದಕ್ಕಾಗಿ ಒಟ್ಟು ೪ ಕೋಟಿ ೪೪ ಲಕ್ಷ ೪೪ ಸಾವಿರ ೪೪೪ ರೂಪಾಯಿ ನಗದಿನ ಅಸಲೀ ನೋಟುಗಳನ್ನು ಬಳಸಲಾಗಿದೆ. ಭಾವಿಕರಿಂದ ದೇಣಗಿಯ ಸ್ವರೂಪದಲ್ಲಿ ಸಿಕ್ಕಿರುವ ನೋಟುಗಳನ್ನು ಬಳಸಲಾಗಿದೆ. ದೇವಾಲಯದಲ್ಲಿರುವ ಮೂರ್ತಿ ಹಾಗೂ ಗೋಡೆಯ ಮೇಲೆ ನೋಟುಗಳನ್ನು ಅಂಟಿಸಿ ದೇವಾಲಯವನ್ನು ಅಲಂಕರಿಸಲಾಗಿತ್ತು..

ನೆಲ್ಲೂರು (ಆಂಧ್ರಪ್ರದೇಶ)ನಲ್ಲಿಯೂ ನೋಟುಗಳ ಅಲಂಕಾರ

ಆಂಧ್ರಪ್ರದೇಶದಲ್ಲಿನ ನೆಲ್ಲೂರು ಜಿಲ್ಲೆಯಲ್ಲಿನ ಸ್ಟೋನ ಹೌಸ್ ಪೇಟಾ ಭಾಗದಲ್ಲಿ ಕೂಡ ಕನ್ಯಕಾ ಪರಮೇಶ್ವರೀ ದೇವಿಯ ದೇವಾಲಯವಿದೆ. ಈ ದೇವಾಲಯವನ್ನು ಕೂಡ ಅದೇ ರೀತಿ ಅಸಲಿ ರೂಪಾಯಿ ನೋಟುಗಳನ್ನು ಬಳಸಿ ಅಲಂಕರಿಸಲಾಗಿದೆ. ಅದೇ ರೀತಿ ಅಲಂಕಾರಕ್ಕೆಂದು ಚಿನ್ನ-ಬೆಳ್ಳಿಯನ್ನು ಕೂಡ ಬಳಸಲಾಗಿದೆ. ನೋಟುಗಳಿಂದ ಹೂವು ಹಾಗೂ ಹಾರವನ್ನು ತಯಾರಿಸಲಾಗಿದೆ. ಅದಕ್ಕಾಗಿ ಭಾವಿಕರು ದಾನ ಮಾಡಿರುವ ೫ ಕೋಟಿ ೧೬ ಲಕ್ಷ ನೋಟುಗಳನ್ನು ಬಳಸಲಾಗಿದೆ.