ಇನ್ನೂ ಸಂಪಾದಕರನ್ನು ಬಂಧಿಸಿಲ್ಲವೆಂದು ಹಿಂದುತ್ವನಿಷ್ಠ ಸಂಘಟನೆಗಳ ಆಂದೋಲನ !ಸಂಪಾದಕರ ಸಮರ್ಥನೆಗಾಗಿ ಹಿಂದೂದ್ವೇಷಿ ಸಿಖ್ ಸಂಘಟನೆಗಳ ಆಂದೋಲನ ! |
* ಪಂಜಾಬಿನಲ್ಲಿ ಕಾಂಗ್ರೆಸ ಸರಕಾರವಿರುವುದರಿಂದ ಲಕ್ಷಗಟ್ಟಲೆ ಹಿಂದೂಗಳ ಧಾರ್ಮಿಕ ಭಾವನೆಗೆ ಶೂನ್ಯ ಬೆಲೆ ನೀಡಲಾಗುತ್ತಿರುವುದರಿಂದ ಸಂಪಾದಕರ ಮೇಲೆ ಕಾರ್ಯಾಚರಣೆಯಾಗುವುದಿಲ್ಲ. ಬದಲಾಗಿ ಅನ್ಯ ಮತದವರ ಶ್ರದ್ಧಾಸ್ಥಾನಗಳ ಅವಮಾನವಾಗಿದ್ದರೆ, ಯಾರಾದರೂ ತಕರಾರು ನೀಡಿದ ತಕ್ಷಣ ಅದರ ಮೇಲೆ ಕಾರ್ಯಾಚರಣೆ ನಡೆಸುತ್ತಿದ್ದರು, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿರಿ ! – ಸಂಪಾದಕರು * ಹಿಂದೂಗಳ ದೇವತೆಗಳ ಅವಮಾನಿಸುವವರನ್ನು ಬೆಂಬಲಿಸುವ ಹಿಂದೂದ್ವೇಷಿ ಸಿಕ್ಖ ಸಂಘಟನೆಗಳು ದೇಶದ್ರೋಹಿ ಖಲಿಸ್ತಾನದವರೇ? ಎಂಬದನ್ನು ಸಂಶೋಧಿಸಿ ಅವರ ಮೇಲೆ ಕಾರ್ಯಾಚರಣೆ ನಡೆಸಬೇಕು ! -ಸಂಪಾದಕರು * ಸಿಕ್ಖ್ ಮತವು ಹಿಂದೂ ಧರ್ಮದಿಂದಲೇ ಉತ್ಪತ್ತಿ ಆಗಿದೆ;’ ಆದರೆ ಸ್ವಾತಂತ್ರ್ಯ ಸಿಕ್ಕಿದ ಬಳಿಕ ಅದನ್ನು ಕಲಿಸಿಕೊಡಲಿಲ್ಲವಾದ್ದರಿಂದ ಅವರು ಹಿಂದೂ ಧರ್ಮದಿಂದ ದೂರ ಸರಿದರು. ಈಗಂತೂ ಅವರು ಹಿಂದೂ ಧರ್ಮವನ್ನೇ ದ್ವೇಷಿಸುತ್ತಾರೆ ಎಂಬುದು ಸರ್ವಪಕ್ಷೀಯ ಆಡಳಿತಗಾರರಿಗೆ ಲಜ್ಜಾಸ್ಪದವಾಗಿದೆ.- ಸಂಪಾದಕರು |
ಲುಧಿಯಾನಾ (ಪಂಜಾಬ್) – ಹರಿಯಾಣಣಾದಲ್ಲಿ ದೇವತೆಗಳ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಪ್ರಕರಣದಲ್ಲಿ ಇಲ್ಲಿನ ದೈನಿಕ ‘ರೋಜಾನಾ ಪೆಹರೆದಾರ’ನ ಸಂಪಾದಕರಾದ ಜಸಪಾಲಸಿಂಹ ಹೇರಾರವರ ವಿರುದ್ಧ ಹಿಂದುತ್ವನಿಷ್ಠರು ತಕರಾರು ನೀಡಿದರು; ಆದರೆ ಪೊಲೀಸರು ಮಾತ್ರ ಇನ್ನೂ ಅವರನ್ನು ಬಂಧಿಸಿಲ್ಲ, ಪೊಲೀಸರು ಧಾರ್ಮಿಕ ಭಾವನೆಗಳನ್ನು ನೋಯಿಸುವುದಕ್ಕಾಗಿನ ಕಲಂ ‘೨೯೫ ಅ’ನ ಅಂತರ್ಗತವಾಗಿ ಅಪರಾಧ ನೋಂದಾಯಿಸಿಕೊಂಡಿದ್ದರೂ ಕೂಡ ಹೇರಾರವರು ಬಂಧಿಸಲು ಹಿಂದುಮುಂದು ಮಾಡುತ್ತಿದೆ. ಆದ್ದರಿಂದ ಹಿಂದೂಗಳು ಆಂದೋಲನ ನಡೆಸಿದರು, ಅದೇ ರೀತಿ ಮೆರವಣಿಗೆ ನಡೆಸಿ ರೈಲ್ವೇ ಸೇತುವೆಯ ಮೇಲೆ ಆಂಧೋಲನ ನಡೆಸಿದರು.
Shutdown in Jagraon: Hindu groups seek arrest of chief editor of Punjabi daily https://t.co/FbxXlZDhPc
— Hindustan Times (@HindustanTimes) October 11, 2021
೧. ಕೆಲವು ದಿನಗಳ ಹಿಂದೆ ಅಕಾಲೀ ದಳದ ಅಧ್ಯಕ್ಷರಾದ ಸುಖಬೀರ ಸಿಂಹ ಬಾದಲರವರು ಶ್ರೀ ಚಿಂತಪೂರ್ಣೀ ದೇವಿಯ ದೇವಾಲಯಕ್ಕೆ ಹೋಗಿ ದರ್ಶನ ಪಡೆದುಕೊಂಡಿದ್ದರು. ಅದಕ್ಕೆ ‘ರೋಜಾನ ಪಹರೆದಾರ’ನ ಸಂಪಾದಕರಾದ ಹೆರಾರವರು ಬರೆದ ಲೇಖನದ ಮುಖ್ಯ ಶೀರ್ಷಿಕೆಯಲ್ಲಿ ದೇವಿಯನ್ನು ‘ಬೆಗಾನೀ ದೇವಿ’ (ಅಪರಿಚಿತವಾಗಿರುವ ದೇವಿ) ಎಂದು ಆಕ್ಷೇಪಾರ್ಹವಾಗಿ ಉಲ್ಲೇಖಿಸಿದ್ದಾರೆ.
೨. ಹಿಂದೂಗಳು ಪ್ರದರ್ಶನ ನಡೆಸಿದ ಬಳಿಕ ಸಂಪಾದಕರಿಗೆ ಬೆಂಬಲ ನೀಡಲು ಸಿಖ್ ಸಂಘಟನೆಗಳ ಕಾರ್ಯಕರ್ತರು ಪೊಲೀಸು ಅಧೀಕ್ಷಕರ ಕಛೇರಿಯನ್ನು ಸುತ್ತುಗಟ್ಟಿದರು. ಅವರು ಸಂಪಾದಕರ ವಿರುದ್ಧ ನೋಂದಾಯಿಸಲಾದ ಅಪರಾಧವನ್ನು ಹಿಂದೆಗೆದುಕೊಳ್ಳುವ ಬೇಡಿಕೆ ಮಾಡಿದರು.