ಅಸ್ಸಾಂನಲ್ಲಿರುವ ಹೆಚ್ಚಿನ ಮುಸಲ್ಮಾನರು ಮತಾಂತರಗೊಂಡವರಾಗಿದ್ದಾರೆ ! – ಹಿಮಂತ ಬಿಸ್ವ ಸರಮಾ, ಅಸ್ಸಾಂ ಮುಖ್ಯಮಂತ್ರಿ

ಮತಾಂತರದ ಅಪಾಯವನ್ನು ಅರಿತುಕೊಂಡು, ಕೇಂದ್ರ ಸರಕಾರವು ಈಗಲಾದರೂ ಮತಾಂತರ ವಿರೋಧಿ ಕಾನೂನನ್ನು ಜಾರಿಗೆ ತರುತ್ತದೆಯೇ ? – ಸಂಪಾದಕರು 

ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ

ನವದೆಹಲಿ : ರಾಜ್ಯದ ಹೆಚ್ಚಿನ ಮುಸಲ್ಮಾನರು ಮತಾಂತರಗೊಂಡವರಾಗಿದ್ದಾರೆ. ಅವರ ಪೂರ್ವಜರು ಹಿಂದೂಗಳಾಗಿದ್ದರು ಮತ್ತು ಅವರು ಗೋಮಾಂಸ ತಿನ್ನುತ್ತಿರಲಿಲ್ಲ, ಎಂದು ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಇವರು ‘ಇಂಡಿಯಾ ಟುಡೆ ಕಾನ್ ಕ್ಲೇವ್’ನಲ್ಲಿ ಹೇಳಿದರು.

(ಸೌಜನ್ಯ: India Today)

‘ಇಂಡಿಯಾ ಟುಡೇ’ ವಾರ್ತಾ ವಾಹಿನಿಯ ವತಿಯಿಂದ ಒಂದು ಚರ್ಚಾಕೂಟವನ್ನು ಆಯೋಜಿಸಲಾಗಿದೆ. ಈ ಸಮಯದಲ್ಲಿ ಅಸ್ಸಾಂನಲ್ಲಿ ಬಾಂಗ್ಲಾದೇಶದ ನುಸುಳುಕೋರರ ಕಾನೂನುಬಾಹಿರ ಅತಿಕ್ರಮಣ ವಿರೋಧಿ ಅಭಿಯಾನದ ಕುರಿತು ಮಾತನಾಡಿದ ಮುಖ್ಯಮಂತ್ರಿ ಸರಮಾರವರು ಮುಂದಿನಂತೆ ಹೇಳಿದರು.

1. ಬಾಂಗ್ಲಾದೇಶಿ ಮುಸಲ್ಮಾನರು ಇಲ್ಲಿ ನುಸುಳಿದರು ಮತ್ತು ಅತಿಕ್ರಮಿಸಿದರು, ಇದು ಹೆಚ್ಚಿನ ಜನರಿಗೆ ತಿಳಿದಿದೆ. ನಾನು ಯಾವಾಗಲೂ ಅಸ್ಸಾಂನ ಮುಸಲ್ಮಾನರಿಗೆ ನೆನಪಿಸುತ್ತೇನೆಂದರೆ ನಿಮ್ಮ ಪೂರ್ವಜರು ಗೋ ಮಾಂಸವನ್ನು ಸೇವಿಸುತ್ತಿರಲಿಲ್ಲ. ಆದ್ದರಿಂದ ಕನಿಷ್ಠ ನೀವಾದರೂ ಅದನ್ನು ಪ್ರೋತ್ಸಾಹಿಸಬೇಡಿ.

2. ಈ ದೇಶದ ಸಂಪ್ರದಾಯದ ಬಗ್ಗೆ ಮಾತನಾಡಿದರೆ ಅನೇಕ ಜನರು ಬೇಸರ ಪಡುತ್ತಾರೆ. ನಮ್ಮ ಸಂಸ್ಕೃತಿಯ ಮೌಲ್ಯಗಳಿಂದ ಅಧಿಕಾರಗಳು ಪ್ರಾಪ್ತಿಯಾಗಿವೆ. ಆದ್ದರಿಂದ ಅವುಗಳನ್ನು ಸ್ವತಂತ್ರ ದೃಷ್ಟಿಯಿಂದ ನೋಡಬಾರದು.

3. ಧಾರ್ಮಿಕ ಸ್ಥಳಗಳ 5 ಕಿಮೀ ಪ್ರದೇಶದಲ್ಲಿ ಗೋಮಾಂಸ ನಿಷೇಧದಿಂದ ಮುಸಲ್ಮಾನರು ಸಂತೋಷಗೊಂಡಿದ್ದಾರೆ ಮತ್ತು ಇದರಿಂದ ಪರಸ್ಪರರಲ್ಲಿ ಸಾಮರಸ್ಯವನ್ನು ಹೆಚ್ಚಿಸಿದೆ. ಗೋಮಾಂಸ ಸೇವನೆಯ ಬಗ್ಗೆ ಮಾಡಲಾಗಿರುವ ಹೊಸ ನಿಯಮಗಳಿಗೆ ಮುಸ್ಲಿಂ ಸಂಘಟನೆಗಳಿಂದಲ್ಲ; ಆದರೆ ಕಮ್ಯುನಿಸ್ಟ್ ಸಂಘಟನೆಗಳ ವಿರೋಧವಿದೆ.

4. ಸರ್ವೋಚ್ಚ ನ್ಯಾಯಾಲಯದ ಆದೇಶಕ್ಕನುಸಾರ ರಾಜ್ಯದಲ್ಲಿ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (‘ಎನ್.ಆರ್.ಸಿ’) ಕಾಯ್ದೆಯನ್ನು ಜಾರಿಗೊಳಿಸಲಾಗಿದೆ ಮತ್ತು ಯಾವುದೇ ಧಾರ್ಮಿಕ ಉದ್ವಿಗ್ನತೆಯು ನಿರ್ಮಾಣವಾಗುವುದಿಲ್ಲ. ಧಾರ್ಮಿಕ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಈ ಕಾನೂನನ್ನು ಜಾರಿಗೊಳಿಸಲಾಗಿದೆ.