ಒಡಿಶಾದಲ್ಲಿ ಹಿಂದೂಗಳನ್ನು ಮತಾಂತರಿಸುವ ಕ್ರೈಸ್ತ ಮತಪ್ರಸಾರಕನಿಗೆ ಗ್ರಾಮ ಪ್ರವೇಶ ನಿಷೇಧ !

ಮತಾಂತರವನ್ನು ತಡೆಗಟ್ಟಲು ಹಿಂದೂಗಳಿಂದಾದ ಶ್ಲಾಘನೀಯ ಕೃತಿ ! ಹಿಂದೂ ಸಮಾಜವು ಎಚ್ಚೆತ್ತುಕೊಂಡರೆ, ಹಿಂದೂಗಳನ್ನು ಮತಾಂತರಿಸುವ ಕ್ರೈಸ್ತ ಮತಪ್ರಚಾರಕರ ಪಿತೂರಿಯನ್ನು ತಡೆಗಟ್ಟಬಹುದು, ಎಂಬುದನ್ನು ಅರಿತುಕೊಳ್ಳಿ ! – ಸಂಪಾದಕರು

ಕ್ರೈಸ್ತ ಮತಪ್ರಸಾರಕ ಮಹೇಂದ್ರ ಸಾಹು

ಸುಂದರಗಢ (ಒಡಿಶಾ) – ಇಲ್ಲಿಯ ತಂಗರದಿಹಿ ಗ್ರಾಮದಲ್ಲಿ ಕ್ರೈಸ್ತ ಮತಪ್ರಸಾರಕನಿಗೆ ಗ್ರಾಮದೊಳಗೆ ಪ್ರವೇಶವನ್ನು ನಿಷೇಧಿಸಲಾಗಿದೆ. ಹಿಂದೂಗಳನ್ನು ಮತಾಂತರಿಸುವ ಕ್ರೈಸ್ತ ಮತಪ್ರಚಾರಕನ ಪಿತೂರಿಯನ್ನು ತಡೆಗಟ್ಟಲು ಗ್ರಾಮಸ್ಥರು ಈ ನಿರ್ಧಾರವನ್ನು ಕೈಗೊಂಡಿದ್ದಾರೆ.


ಸ್ಥಳಿಯರು ನೀಡಿದ ಮಾಹಿತಿಗನುಸಾರ ಪದೇ ಪದೇ ವಿರೋಧಿಸಿದರೂ ಹಿಂದೂಗಳನ್ನು ಮತಾಂತರಿಸಲು ಮಹೇಂದ್ರ ಸಾಹು ಎಂಬ ಹೆಸರಿನ ಕ್ರೈಸ್ತ ಮತಪ್ರಸಾರಕನು ತಂಗರದಿಹಿ ಗ್ರಾಮಕ್ಕೆ ನಿರಂತರವಾಗಿ ಬರುತ್ತಿದ್ದನು. (ಮತಾಂತರಿತ ಹಿಂದೂಗಳು ತಮ್ಮ ಹೆಸರುಗಳನ್ನು ಬದಲಾಯಿಸುವುದಿಲ್ಲ ಏಕೆಂದರೆ ಇತರ ಹಿಂದೂಗಳನ್ನು ಮತಾಂತರಿಸಲು ಅವರಿಗೆ ಹಿಂದೂ ಸಮಾಜದಲ್ಲಿ ಸುಲಭವಾಗಿ ಒಡನಾಟ ಇಟ್ಟುಕೊಳ್ಳಲು ಅನುಕೂಲವಾಗಬೇಕೆಂಬ ಉದ್ದೇಶವೇ ಇದರ ಹಿಂದಿದೆ ! – ಸಂಪಾದಕರು) ಇದು ಗಮನಕ್ಕೆ ಬಂದನಂತರ ಹಿಂದೂ ಗ್ರಾಮಸ್ಥರು ಗ್ರಾಮದಲ್ಲಿ ಸಭೆ ಕರೆದರು. ಅದರಲ್ಲಿ ಸಾಹುನಿಂದ `ನಾನು ಮತ್ತೆ ಗ್ರಾಮಕ್ಕೆ ಬರುವುದಿಲ್ಲ’ ಎಂಬ ಪ್ರಮಾಣಪತ್ರವನ್ನು ಬರೆಸಿಕೊಳ್ಳಲಾಯಿತು. ಹಿಂದೂಗಳನ್ನು ಮತಾಂತರಿಸಲು ಸುಂದರಗಢ ಜಿಲ್ಲೆಯು ಖಾಯಂಸ್ವರೂಪಿಯಾಗಿ ಕ್ರೈಸ್ತ ಮಿಷನರಿಗಳ ಗುರಿಯಾಗಿದೆ. `ರಾಜ್ಯದಲ್ಲಿ ಮತಾಂತರ ವಿರೋಧಿ ಕಾನೂನು ಇದ್ದರೂ ಕೂಡ ರಾಜ್ಯ ಸರಕಾರವು ಯೋಗ್ಯರೀತಿಯಲ್ಲಿ ಕ್ರಮಕೈಗೊಳ್ಳುತ್ತಿಲ್ಲ’, ಎಂದು ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾ ಸಚಿವ ರಾಮಚಂದ್ರ ನಾಯಿಕ ಇವರು ಹೇಳಿದರು. (ಮತಾಂತರ ನಿಷೇಧ ಕಾನೂನು ಇದ್ದರೂ ಕ್ರೈಸ್ತ ಮತಪ್ರಸಾರಕರು ಹಿಂದೂಗಳನ್ನು ಮತಾಂತರಿಸಲು ಪ್ರಯತ್ನಿಸುತ್ತಾರೆ, ಇದರರ್ಥ ಅವರು ಕಾನೂನಿಗೆ ಭಯಪಡುವುದಿಲ್ಲ, ಎಂಬುದೇ ಗಮನಕ್ಕೆ ಬರುತ್ತದೆ ! ಈ ಕಾನೂನನ್ನು ಪರಿಣಾಮಕಾರಿಯಾಗಿ ಜ್ಯಾರಿಗೆ ತರದಿರುವ ಬಿಜೂ ಜನತಾ ದಳ ಸರಕಾರವೇ ಇದಕ್ಕೆ ಜವಾಬ್ದಾರವಾಗಿದೆ ! – ಸಂಪಾದಕರು)