ಅರುಣಾಚಲ ಪ್ರದೇಶದ ಗಡಿಯಲ್ಲಿ ಚೀನಾದ ೨೦೦ ಸೈನಿಕರಿಂದ ನುಸುಳುವ ಪ್ರಯತ್ನ !

ಚೀನಿ ಸೈನಿಕರನ್ನು ವಶ ಪಡಿಸಿಕೊಂಡ ಭಾರತ !

ಎರಡೂ ಸೈನ್ಯಗಳ ಚರ್ಚೆಯ ಬಳಿಕ ಚೀನಾದ ಸೈನಿಕರ ಬಿಡುಗಡೆ

ಚೀನಾಗೆ ತಕ್ಕ ಪ್ರತ್ಯುತ್ತರ ನೀಡಿದರೂ ಅದು ತನ್ನ ಬಾಲ ಬಿಚ್ಚುತ್ತದೆ, ಎಂಬುದನ್ನು ಗಮನದಲ್ಲಿರಿಸಿಕೊಂಡು ಭಾರತವು ಶಾಶ್ವತ‌ ಸ್ವರೂಪದಲ್ಲಿ ಇದೇ ಭೂಮಿಕೆಯಲ್ಲಿರಬೇಕು ! – ಸಂಪಾದಕರು 

ಹೊಸ ದೆಹಲಿ – ಲಡಾಖನಲ್ಲಿ ಸಂಘರ್ಷದ ಬಳಿಕ ಈಗ ಚೀನಾವು ಅರುಣಾಚಲ ಪ್ರದೇಶದೊಳಗೆ ನುಗ್ಗಲು ಪ್ರಯತ್ನಿಸಿತು. ಅದನ್ನು ಭಾರತೀಯ ಸೈನಿಕರು ವಿರೋಧಿಸಿದ ಘಟನೆಯು ಇತ್ತೀಚೆಗಷ್ಟೇ ಬೆಳಕಿಗೆ ಬಂದಿದೆ. ಅರುಣಾಚಲ ಪ್ರದೇಶದ ತವಾಂಗ ಭಾಗದಲ್ಲಿ ಭಾರತೀಯ ಗಡಿಯೊಳಗೆ ನುಸುಳುತ್ತಿದ್ದ ಚೀನಿ ಸೈನಿಕರನ್ನು ಭಾರತವು ವಶ ಪಡಿಸಿಕೊಂಡಿರುವ ಮಾಹಿತಿಯು ಬಹಿರಂಗವಾಗಿದೆ. ೨೦೦ ಚೀನೀ ಸೈನಿಕರು ಟಿಬೇಟಿನ ಗಡಿಯ ಬಳಿಯಿಂದ ಭಾರತೀಯ ಗಡಿಯೊಳಗೆ ನುಗ್ಗಿದರು ಹಾಗೂ ಸೈನಿಕರ ನೇಮಕಾತಿಯಿಲ್ಲದ ಸ್ಥಳದಲ್ಲಿನ ಬಂಕರ್ಸ್ ಗಳನ್ನು ಧ್ವಂಸಗೊಳಿಸಿದರು. ಪ್ರತ್ಯಕ್ಷವಾಗಿ ನಿಯಂತ್ರಣ ರೇಖೆಯ ಬಳಿ ಇರುವ ‘ಬೂಮ ಲಾ’ ಹಾಗೂ ‘ಯಾಂಗತ್ಸೆ’ ಎಂಬ ಪ್ರದೇಶದಲ್ಲಿ ಕಳೆದ ವಾರ ಒಳನುಗ್ಗುವ ಪ್ರಸಂಗ ನಡೆದಿತ್ತು. ಅನಂತರ ಭಾರತವು ಅವರಿಗೆ ಯೋಗ್ಯ ಉತ್ತರ ನೀಡುತ್ತಾ ಚೀನಾದ ವಿಭಾಗದ ಕೆಲವು ಸೈನಿಕರನ್ನು ವಶಕ್ಕೆ ತೆಗೆದುಕೊಂಡಿತು. ಆ ಪ್ರಕರಣವನ್ನು ನಂತರ ಸ್ಥಳೀಯ ಕಮಾಂಡರ‍್ಸಗಳ ಮಟ್ಟದಲ್ಲಿ ನಿವಾರಿಸಲಾಯಿತು. ಅನಂತರ ಚೀನಿ ಸೈನಿಕರನ್ನು ಬಿಡಲಾಯಿತು. ಆ ಘಟನಾಕ್ರಮದ ಸಂದರ್ಭದಲ್ಲಿ ಭಾರತೀಯ ಸೈನ್ಯದಿಂದ ಯಾವುದೇ ರೀತಿಯ ಅಧಿಕೃತ ಹೇಳಿಕೆ ಬಂದಿಲ್ಲ; ಆದರೆ ಸುರಕ್ಷಾದಳದ ಅಧಿಕಾರಿಗಳು ಭಾರತೀಯ ಸಂರಕ್ಷಣಾ ದಳಕ್ಕೆ ಹಾನಿಯಾಗಲಿಲ್ಲ ಎಂದು ಹೇಳಿದೆ.

( ಸೌಜನ್ಯ : India Today )

. ರಕ್ಷಣಾ ಸಚಿವಾಲಯದ ಮೂಲಗಳ ಪ್ರಕಾರ ಭಾರತ ಹಾಗೂ ಚೀನಾದ ಗಡಿಯನ್ನು ಔಪಚಾರಿಕವಾಗಿ ಸ್ಥಾಪಿಸಿಲ್ಲ. ಎರಡೂ ದೇಶಗಳ ನಿಯಂತ್ರಣ ರೇಖೆಯನ್ನು ವೈಯಕ್ತಿಕ ತಿಳುವಳಿಕೆಯ ಮೇಲೆ ನಿರ್ಧರಿಸಲಾಗಿದೆ ಹಾಗೂ ಎರಡೂ ದೇಶಗಳ ತಿಳುವಳಿಕೆಯಲ್ಲಿ ವ್ಯತ್ಯಾಸವಿದೆ. ಆದ್ದರಿಂದ ಆ ಭಾಗದಲ್ಲಿ ಮೇಲಿಂದ ಮೇಲೆ ಆ ರೀತಿಯ ಘಟನೆಗಳು ನಡೆಯಬಹುದು. ಎರಡೂ ದೇಶಗಳು ತಮ್ಮ ತಮ್ಮ ಗ್ರಹಿಕೆಗೆ ಅನುಸಾರವಾಗಿ ಗಡಿಯನ್ನು ಗಸ್ತು ಹಾಕುತ್ತವೆ. ಎರಡೂ ದೇಶಗಳ ನಡುವೆ ಯಾವುದೇ ರೀತಿಯ ತಪ್ಪು ಗ್ರಹಿಕೆ ತಿಳಿದು ಬಂದರೆ, ಆಗ ಶಿಷ್ಟಾಚಾರದ ಅನುಸಾರವಾಗಿ ಶಾಂತಿಯುತ ಮಾರ್ಗದಿಂದ ಚರ್ಚೆ ನಡೆಸಿ ಪರಿಹಾರವನ್ನು  ಮಾಡಲಾಗುತ್ತದೆ.

ಕಳೆದ ವಾರ ಈ ಘಟನೆ ನಡೆದಿದ್ದರೂ ಕೂಡ ಗಡಿಯಲ್ಲಿ ಶಾಂತಿ ನೆಲಸಿದೆ. (ಧೂರ್ತ ಚೀನಾವು ಪಾಕಿಸ್ತಾನಕ್ಕಾಗಿ ಮೊದಲೇ ಕಾಶ್ಮೀರದ ದೊಡ್ಡ ಭೂಭಾಗವನ್ನು ಸ್ವಾಧೀನ ಪಡಿಸಿಕೊಂಡಿದೆ, ಅದೇ ರೀತಿ ಅರುಣಾಚಲ ಪ್ರದೇಶದ ಮೇಲೆ ಕೂಡ ತನ್ನ ಹಕ್ಕಿರುವುದಾಗಿ ಚೀನಾದ ಆಡಳಿತಗಾರರು, ಸೈನ್ಯಾಧಿಕಾರಿಗಳು ಹಾಗೂ ವರ್ತಮಾನ ಪತ್ರಿಕೆಯವರು ಮೇಲಿಂದ ಮೇಲೆ ವಿಷಕಾರುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ಭಾರತವು ಮೊದಲೇ ಎಚ್ಚರಗೊಂಡು ಗಡಿ ನಿಯಂತ್ರಣ ರೇಖೆಯನ್ನು ಖಚಿತಗೊಳಿಸಿಕೊಳ್ಳಲು ಮುಂದಾಳತ್ವ ವಹಿಸಬೇಕು. ಅದನ್ನು ಸರ್ವಪಕ್ಷೀಯ ಆಡಳಿತಗಾರರಿಂದ ಇನ್ನು ಆಗಿಲ್ಲ ಎಂಬುದು ಭಾರತಕ್ಕಾಗಿ ಲಜ್ಜಾಸ್ಪದವಾಗಿದೆ ! – ಸಂಪಾದಕರು)

. ಎರಡೂ ಕಡೆಯಿಂದ ಗಸ್ತು ಮಾಡುವ ಪಡೆಗಳು ಪ್ರತ್ಯಕ್ಷವಾಗಿ ಭೇಟಿಯಾದಾಗ, ನಿರ್ಧರಿಸಿದ ನಿಯಮಗಳಂತೆ ಅವರು ನಡೆದುಕೊಳ್ಳುತ್ತಾರೆ. ಆ ಪ್ರದೇಶದಲ್ಲಿ ಚೀನಾವು ಆ ರೀತಿಯಲ್ಲಿ ಒಳನುಗ್ಗುವುದು ಹೊಸತೇನಲ್ಲ. ವರ್ಷ ೨೦೧೬ರಲ್ಲಿ ೨೦೦ಕ್ಕೂ ಹೆಚ್ಚು ಚೀನಾದ ಸೈನಿಕರು ಗಡಿಯೊಳಗೆ ನುಗ್ಗಿದರು; ಆದರೆ ಕೆಲವು ಗಂಟೆಗಳ ಬಳಿಕ ಅವರು ತಮ್ಮ ದೇಶಕ್ಕೆ ಮರಳಿದರು.

. ಈ ಹಿಂದೆ ಆಗಸ್ಟ್‌ ೩೦ ರಂದು ಉತ್ತರಾಖಂಡದ ಬಾರಾಹೊತೀಯಲ್ಲಿ ಹೆಚ್ಚು ಕಡಿಮೆ ಚೀನಾದ ೧೦೦ ಸೈನಿಕರು ಗಡಿ ನಿಯಂತ್ರಣ ರೇಖೆಯನ್ನು ಪಾರು ಮಾಡಿ ಭಾರತೀಯ ಕ್ಷೇತ್ರದಲ್ಲಿ ೫ ಕಿಲೋಮೀಟರ್ ಒಳಗೆ ಒಳನುಗ್ಗಿದರು; ವಾಪಾಸು ಹೋಗುವಾಗ ಒಂದು ಸೇತುವೆಯನ್ನು ಸಹ ಧ್ವಂಸಗೊಳಿಸಿದ್ದರು ಎಂಬ ಮಾಹಿತಿಯು ಬೆಳಕಿಗೆ ಬಂದಿತ್ತು. ಆದರೆ ಸೈನ್ಯವು ಆ ರೀತಿಯ ಘಟನೆ ನಡೆದಿರುವ ಸುದ್ದಿಯನ್ನು ತಳ್ಳಿ ಹಾಕಿದೆ.