ಕೊನೆಗೂ ‘ಏರ್ ಇಂಡಿಯಾ’ದ ಮಾಲಕತ್ವ ಟಾಟಾ ಸಮೂಹಕ್ಕೆ ! – ಅಧಿಕೃತವಾಗಿ ಘೋಷಿಸಿದ ಕೇಂದ್ರ ಸರಕಾರ


ನವ ದೆಹಲಿ – ಸರಕಾರದ ವಿಮಾನ ಯಾನ ಸಂಸ್ಥೆ ‘ಏರ್ ಇಂಡಿಯಾ’ದ ಮಾಲಕತ್ವವು ಇನ್ನು ಟಾಟಾ ಸಮೂಹದ ವಶದಲ್ಲಿರಲಿದೆ ಎಂದು ಕೇಂದ್ರ ಸರಕಾರದಿಂದ ಅಧಿಕೃತವಾಗಿ ಘೋಷಿಸಲಾಗಿದೆ. ಏರ್ ಇಂಡಿಯಾ ಖರೀದಿಗಾಗಿ ಟಾಟಾ ಸಮೂಹ ಮತ್ತು ‘ಸ್ಪೈಸ್ ಜೆಟ್’ ಕಂಪನಿಗಳು ಹರಾಜಿನಲ್ಲಿದ್ದವು. ಟಾಟಾ ಸಮೂಹವು ಇದಕ್ಕಾಗಿ ಎಲ್ಲಕ್ಕಿಂತ ಹೆಚ್ಚು 18 ಸಾವಿರ ಕೋಟಿ ರೂಪಾಯಿಯ ಬೆಲೆ ಹೇಳಿತ್ತು. ಈ ಮೊದಲ ‘ಏರ್ ಇಂಡಿಯಾ’ದ ಮಾಲಕತ್ವ ಟಾಟಾ ಸಮೂಹದ ತೆಕ್ಕೆಗೆ ಹೋಗುವ ವಿಷಯವನ್ನು ಖಂಡಿಸಲಾಗಿತ್ತು.1953 ರಲ್ಲಿ ಭಾರತ ಸರಕಾರವು ಟಾಟಾ ಸಂಸ್ಥೆಯ ಬಳಿಯೇ ಇದ್ದ ಏರ್ ಇಂಡಿಯಾ ಸಂಸ್ಥೆಯನ್ನು ತನ್ನ ಅಧಿಕಾರ ಕ್ಷೇತ್ರಕ್ಕೆ ತೆಗೆದುಕೊಂಡಿತ್ತು.