‘ಮೂಗು ಮುಚ್ಚಿದರೆ ಬಾಯಿ ತೆರೆಯುವುದು’, ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆಯಾಗಿದೆ ! ಭಾರತವು ಇಂತಹ ಖಂಡತುಂಡ ನೀತಿಯನ್ನೇ ನಿರಂತರ ಅನುಸರಿಸಿದರೆ ಭಾರತವು ಮಹಾಶಕ್ತಿ ಆಗಲು ಸಮಯ ತಗಲುವುದಿಲ್ಲ ! – ಸಂಪಾದಕರು
ಲಂಡನ(ಬ್ರಿಟನ್) – ಭಾರತವು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ ಬ್ರಿಟನ್ ತನ್ನ ದೇಶಕ್ಕೆ ಭಾರತದಿಂದ ಬಂದಿರುವ ನಾಗರಿಕರಿಗೆ ವಿಧಿಸಿದ್ದ ಹತ್ತು ದಿನದ ಪ್ರತ್ಯೇಕೀಕರಣದ ಷರತ್ತನ್ನು ರದ್ದು ಪಡಿಸಿದೆ. ಕೊರೊನಾದ ಲಸಿಕೆಯ 2 ಡೋಸ್ ತೆಗೆದು ತೆಗೆದುಕೊಂಡಿರುವ ಭಾರತೀಯರಿಗೂ ಬ್ರಿಟನ್‍ಗೆ ಬಂದನಂತರ ಹತ್ತು ದಿನ ಪ್ರತ್ಯೇಕಿಕರಣದ ಷರತ್ತನ್ನು ವಿಧಿಸಿತ್ತು. ಅದಕ್ಕೆ ಭಾರತವು ‘ಪ್ರತ್ಯುತ್ತರ’ ನೀಡುತ್ತಾ ಬ್ರಿಟಿಷ್ ನಾಗರಿಕರು ಭಾರತಕ್ಕೆ ಬಂದ ನಂತರ ಹತ್ತು ದಿನ ಪ್ರತ್ಯೇಕಿಕರಣದಲ್ಲಿರಬೇಕೆಂಬ ಷರತ್ತು ವಿಧಿಸಿತ್ತು. ಈ ಮೊದಲು ಬ್ರಿಟನ್ ಭಾರತದ ಲಸಿಕೆಯ ಪ್ರಮಾಣಪತ್ರಕ್ಕೂ ಮಾನ್ಯತೆ ನೀಡಲು ನಿರಾಕರಿಸಿತ್ತು.
UK relaxes travel restrictions for fully vaccinated Indians https://t.co/VzOlBvOlyL
— BBC News (World) (@BBCWorld) October 8, 2021