ಚರ್ಚ್ ಇದು ದೇವರ ನಿವಾಸಸ್ಥಾನವಾಗಿರುವುದರಿಂದ ಅದು ಯುದ್ಧ ಸ್ಥಾನವಾಗಬಾರದು ! – ಕೇರಳ ಉಚ್ಚ ನ್ಯಾಯಾಲಯ

‘ಆರ್ಥೊಡಾಕ್ಸ್‌’ (ಸಂಪ್ರದಾಯವಾದಿ) ಚರ್ಚ್ ಹಾಗೂ ‘ಜ್ಯಾಕೊಬಾಯೀಟ್‌’ (ಪ್ರತ್ಯೇಕತಾವಾದಿ) ಚರ್ಚನ ನಡುವೆ ಗುಂಪುಗಾರಿಕೆಯ ಪ್ರಕರಣಗಳು

ದೇವಾಲಯಗಳಲ್ಲಿ ಅವ್ಯವಹಾರವಾಗುತ್ತದೆ’, ‘ಆಡಳಿತ ಸರಿಯಾಗಿ ಆಗುವುದಿಲ್ಲ’, ಎಂದು ಕಾರಣ ನೀಡಿ ಅದನ್ನು ಸರಕಾರೀಕರಣ ಮಾಡುವ ಆಡಳಿತಗಾರರು ಗುಂಪುಗಾರಿಕೆಯಿರುವ ಚರ್ಚಗಳನ್ನು ಸರಕಾರೀಕರಣ ಮಾಡುವುದಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿರಿ !- ಸಂಪಾದಕರು 

ತಿರುವನಂತಪುರಮ್‌ (ಕೇರಳ) – ಚರ್ಚ್ ಇದು ದೇವರ ನಿವಾಸ ಸ್ಥಾನವಾಗಿರುವುದರಿಂದ ಅದು ಯುದ್ಧದ ಸ್ಥಾನವಾಗಬಾರದು. ಅಲ್ಲಿ ನಡೆಯುವ ಗುಂಪುಗಾರಿಕೆಯ ಮೇಲೆ ನಿಯಂತ್ರಣ ತರಬೇಕು ಎಂದು ಕೇರಳದ ಉಚ್ಚ ನ್ಯಾಯಾಲಯವು ಒಂದು ಅರ್ಜಿಯ ಬಗ್ಗೆ ವಿಚಾರಣೆ ನಡೆಸುವಾಗ ಹೇಳಿದೆ. ಕಾನೂನನ್ನು ಪಾಲಿಸುವಾಗ ‘ಆರ್ಥೋಡಾಕ್ಸ್‌’ ಚರ್ಚ್ ಹಾಗೂ ‘ಜ್ಯಾಕೊಬಾಈಟ್‌’ ಚರ್ಚನ ನಡುವಿನ ಗುಂಪುಗಾರಿಕೆಯಿಂದ ಮಲಂಕಾರಾ ಸಿರಿಯನ್‌ ಆರ್ಥೋಡಾಕ್ಸ್‌ನ ಚರ್ಚಗೆ ಸಂಬಂಧಪಟ್ಟ ಧಾರ್ಮಿಕ ಸೇವೆಗಳ ಸಮಯದಲ್ಲಿ ಪೊಲೀಸು ಸಂರಕ್ಷಣೆ ಒದಗಿಸಬೇಕು, ಎಂದು ಬೇಡಿಕೆ ಸಲ್ಲಿಸಿದ ಅರ್ಜಿಯ ವಿಚಾರಣೆಯ ಸಮಯದಲ್ಲಿ ನ್ಯಾಯಾಲಯವು ಮೇಲಿನಂತೆ ಹೇಳಿಕೆ ನೀಡಿದೆ.

ಮಲಂಕಾರಾ ಸಿರಿಯನ್‌ ಆರ್ಥೊಡಾಕ್ಸ್‌ ಚರ್ಚನೊಂದಿಗೆ ಸಂಬಂಧಿತರೆಲ್ಲರೂ ಸಂವಿಧಾನವನ್ನು ಪಾಲಿಸಬೇಕು. ಯಾವುದೇ ರೀತಿಯ ಆದೇಶದ ಪಾಲನೆ ಮಾಡಿಸಲು ಚರ್ಚಗೆ ಪೊಲೀಸ್ ಅಥವಾ ಇತರ ದಳದವರನ್ನು ಕಳುಹಿಸಲು ನಮಗೆ ಆನಂದವಾಗುವುದಿಲ್ಲ; ಆದರೆ ಒಂದು ವೇಳೆ ನಮ್ಮನ್ನು ಅದಕ್ಕಾಗಿ ಬಾಧ್ಯಗೊಳಿಸಿದರೆ, ಆಗ ಆ ರೀತಿಯ ಆದೇಶ ನೀಡಬೇಕಾಗುವುದು ಎಂದು ನ್ಯಾಯಾಲಯವು ನುಡಿಯಿತು.