ಪ್ರಯಾಗರಾಜನಲ್ಲಿರುವ ಹುತಾತ್ಮ ಚಂದ್ರಶೇಖರ ಆಝಾದ ಪಾರ್ಕ್‍ನಲ್ಲಿ ಎಲ್ಲ ಅತಿಕ್ರಮಣಗಳನ್ನು ತೆರವು ಮಾಡಿ ! – ಅಲಹಾಬಾದ್ ಉಚ್ಚ ನ್ಯಾಯಾಲಯದ ಆದೇಶ

ಗೋರಿ ಹಾಗೂ ಮಸೀದಿಗಳನ್ನೂ ತೆರವು ಮಾಡಲಾಗುವುದು

* ಪಾರ್ಕ್‍ನಲ್ಲಿ ಅತಿಕ್ರಮಣವಾಗುವ ತನಕ ಆಡಳಿತ ವ್ಯವಸ್ಥೆ ನಿದ್ರಿಸುತ್ತಿತ್ತೇ? ಈ ರೀತಿಯ ಅತಿಕ್ರಮಣ ತೆರವಿಗೆ ನ್ಯಾಯಾಲಯಕ್ಕೆ ಏಕೆ ಹೋಗಬೇಕಾಗುತ್ತದೆ? ಆಡಳಿತ ಅದನ್ನೇಕೆ ಮಾಡುವುದಿಲ್ಲ? ಆಡಳಿತದಲ್ಲಿರುವ ಇಂತಹ ಮೈಗಳ್ಳರು ಹಾಗೂ ನಿಷ್ಕ್ರಿಯರ ಮೇಲೆ ಕ್ರಮ ಜರುಗಿಸಬೇಕು ! – ಸಂಪಾದಕರು 

* ಪಾರ್ಕ್‍ನಲ್ಲಿ ಮುಸಲ್ಮಾನರು ಅತಿಕ್ರಮಣವಿತ್ತೆಂದು ಆಡಳಿತವು ಬಾಲ ಬಿಚ್ಚಲಿಲ್ಲವೇ? ಅಲ್ಲೇನಾದರೂ ಒಂದು ವೇಳೆ ಅಕ್ರಮ ದೇವಸ್ಥಾನವಿದ್ದಿದ್ದರೆ, ಆಗ ಆಡಳಿತವು ಅದನ್ನು ತಕ್ಷಣ ನೆಲಸಮ ಮಾಡಿರುತ್ತಿತ್ತು, ಎಂದು ಹಿಂದೂಗಳಿಗೆ ಅನಿಸುತ್ತದೆ ! -ಸಂಪಾದಕರು 

ಪ್ರಯಾಗರಾಜನಲ್ಲಿರುವ ಹುತಾತ್ಮ ಚಂದ್ರಶೇಖರ ಆಝಾದ ಪಾರ್ಕ್

ಪ್ರಯಾಗರಾಜ (ಉತ್ತರಪ್ರದೇಶ) – ಅಲಹಾಬಾದ ಉಚ್ಚ ನ್ಯಾಯಾಲಯವು ಪ್ರಯಾಗರಾಜದಲ್ಲಿನ ಹುತಾತ್ಮ ಚಂದ್ರಶೇಖರ ಆಝಾದ ಪಾರ್ಕ್‍ನಲ್ಲಿರುವ ಎಲ್ಲ ಅತಿಕ್ರಮಣಗಳನ್ನು ತೆರವು ಮಾಡಲು ಆದೇಶ ನೀಡಿದೆ. ಅದರಲ್ಲಿ ಒಂದು ಮಸೀದಿ ಹಾಗೂ ಒಂದು ಗೋರಿಯ (ಇಸ್ಲಾಮಿ ಪೀರ್ ಅಥವಾ ಫಕೀರರ ಸಮಾಧಿ) ಸಮಾವೇಶವಿದೆ. 1975 ನೇ ಇಸವಿಯ ಬಳಿಕ ಪಾರ್ಕ್‍ನಲ್ಲಾದ ಎಲ್ಲ ಕಾಮಗಾರಿಗಳು ಅಕ್ರಮವಾಗಿದ್ದು ಅದನ್ನು ನೆಲಸಮ ಮಾಡಬೇಕು ಹಾಗೂ ಈ ಆದೇಶದ ಕಾರ್ಯಾಚರಣೆಯ ವರದಿಯನ್ನು ಅಕ್ಟೋಬರ್ 8 ರ ವರೆಗೆ ನ್ಯಾಯಾಲಯಕ್ಕೆ ಸಲ್ಲಿಸಬೇಕು. ಪಾರ್ಕ್ ಅತಿಕ್ರಮಣದಿಂದ ಮುಕ್ತವಾಗಿರಬೇಕು ಎಂದು ನ್ಯಾಯಾಲಯಕ್ಕೆ ಅನಿಸುತ್ತದೆ ಎಂದು ಕೂಡ ಆದೇಶದಲ್ಲಿ ಹೇಳಿದೆ.

ಜಿತೇಂದ್ರ ಸಿಂಹರವರು ಈ ವಿಷಯದ ಬಗ್ಗೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಅಲ್ಲಿ ಕೃತಕ ಗೋರಿಗಳನ್ನು ಕಟ್ಟಿ ಆ ಸ್ಥಳವನ್ನು ಕಬಳಿಸುವ ಸಂಚಿತ್ತು, ಎಂದು ಆ ಅರ್ಜಿಯಲ್ಲಿ ಆರೋಪಿಸಲಾಗಿದೆ. ‘ಹಿಂದೂ ಫ್ರಂಟ್ ಫಾರ್ ಜಸ್ಟೀಸ್’ನ ವಕ್ತಾರರು ಹಾಗೂ ಹಿಂದುತ್ವನಿಷ್ಠ ನ್ಯಾಯವಾದಿಗಳಾದ ವಿಷ್ಣುಶಂಕರ ಜೈನರವರು ಸಿಂಹರವರ ವತಿಯಿಂದ ನ್ಯಾಯಾಲಯದಲ್ಲಿ ವಾದವನ್ನು ಮಂಡಿಸಿದರು. ಆ ಪಾರ್ಕಿನಲ್ಲಿ ವ್ಯಾಯಾಮಶಾಲೆಯೂ ಇದೆ. ಅದರ ಹೊಣೆ ಕ್ರೀಡಾ ಇಲಾಖೆಯ ಬಳಿಯಿದೆ. ಅದನ್ನು ಕೂಡ ಅಲ್ಲಿಂದ ತೆರವು ಮಾಡಲಾಗುವುದು.