ಕಾಶ್ಮೀರದಲ್ಲಿ ಒಂದೂವರೆ ಗಂಟೆಯಲ್ಲಿ ಇಬ್ಬರು ಹಿಂದೂ ಹಾಗೂ ಓರ್ವ ಮುಸಲ್ಮಾನನನ್ನು ಹತ್ಯೆಗೈದ ಭಯೋತ್ಪಾದಕರು

ಪಾಕಿಸ್ತಾನವನ್ನು ನಾಶಗೊಳಿಸದೇ ಕಾಶ್ಮೀರದಲ್ಲಿ ಜಿಹಾದಿ ಭಯೋತ್ಪಾದನೆಯು ನಾಶವಾಗುವುದಿಲ್ಲ ಮತ್ತು ಅಲ್ಲಿ ಹಿಂದೂಗಳು ಸುರಕ್ಷಿತರಾಗಿರುವುದು ಸಾಧ್ಯವಿಲ್ಲ, ಇದೇ ವಸ್ತುಸ್ಥಿತಿಯಾಗಿದೆ ಎಂಬುದನ್ನು ಗಮನದಲ್ಲಿಡಿ ! – ಸಂಪಾದಕರು 

ಶ್ರೀನಗರ (ಜಮ್ಮು-ಕಾಶ್ಮೀರ) – ಜಮ್ಮು-ಕಾಶ್ಮೀರದಲ್ಲಿ ಜಿಹಾದಿ ಭಯೋತ್ಪಾದನೆಯು ಇಳಿಮುಖವಾಗುತ್ತಿದೆ ಎನ್ನುತ್ತಿರುವಾಗಲೇ ಅಕ್ಟೋಬರ್ 5 ರಂದು ಭಯೋತ್ಪಾದಕರು ಒಂದೂವರೆ ಗಂಟೆಯಲ್ಲಿ ನಡೆಸಿದ 3 ವಿವಿಧ ಆಕ್ರಮಣಗಳಲ್ಲಿ 2 ಕಡೆಗಳಲ್ಲಿ ಹಿಂದೂಗಳನ್ನು ಗುರಿಯಾಗಿಸಿದರು. ಮೊದಲನೇ ಘಟನೆಯಲ್ಲಿ ಶ್ರೀನಗರದಲ್ಲಿ ಒಂದು ಪ್ರತಿಷ್ಠಿತ ಔಷಧಿ ಅಂಗಡಿಯ ಮಾಲೀಕ ಮಾಖನಲಾಲ ಬಿಂದ್ರುರವರನ್ನು ಭಯೋತ್ಪಾದಕರು ಅವರ ಅಂಗಡಿಯಲ್ಲಿ ನುಗ್ಗಿ ಹತ್ಯೆ ಮಾಡಿದರು. 68 ವರ್ಷದ ಬಿಂದ್ರುರವರು 1990 ರ ಹಿಂದೂಗಳ ಮೇಲಿನ ಆಕ್ರಮಣದ ಸಮಯದಲ್ಲಿಯೂ ಕಾಶ್ಮೀರವನ್ನು ಬಿಟ್ಟಿರಲಿಲ್ಲ. ಇನ್ನೊಂದು ಘಟನೆಯಲ್ಲಿ ಲಾಲ ಬಾಜಾರ ಭಾಗದಲ್ಲಿ ಬಿಹಾರದ ಓರ್ವ ಹಿಂದೂ ವ್ಯಕ್ತಿಯನ್ನು ಗುಂಡಿಕ್ಕಿ ಕೊಲ್ಲಲಾಯಿತು. ಮೂರನೇ ಘಟನೆಯಲ್ಲಿ ಬಾಂದಿಪೊರಾದ ಟ್ಯಾಕ್ಸಿ ಯೂನಿಯನ್ನಿನ ಅಧ್ಯಕ್ಷರನ್ನು ಕೊಲ್ಲಲಾಯಿತು. ‘ಹೊರಗಿನ ಜನರು ಕಾಶ್ಮೀರದಲ್ಲಿ ಸ್ಥಳೀಯರ ಉದ್ಯೋಗವನ್ನು ಕಸಿದುಕೊಳ್ಳಬಾರದು’ ಎಂದು ಭಯೋತ್ಪಾದಕರು ಎಚ್ಚರಿಕೆ ನೀಡಿದ್ದಾರೆ.

1. ಈ ಹತ್ಯೆಗಳ ಬಗ್ಗೆ ಉಪರಾಜ್ಯಪಾಲರಾದ ಮನೋಜ ಸಿನ್ಹಾರವರು ತೀವ್ರ ದುಃಖ ವ್ಯಕ್ತಪಡಿಸಿದ್ದು ‘ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’, ಎಂದು ಹೇಳಿದ್ದಾರೆ. ಮಾಜಿ ಮುಖ್ಯಮಂತ್ರಿ ಉಮರ ಅಬ್ದುಲ್ಲಾ ಮತ್ತು ಮೆಹಬೂಬಾ ಮುಫ್ತಿಯವರೂ ಈ ಹತ್ಯೆಗಳನ್ನು ತೀವ್ರವಾಗಿ ಖಂಡಿಸಿದ್ದಾರೆ.

2. ಭಯೋತ್ಪಾದಕರು ಅವಂತಿಪೋರಾದಲ್ಲಿ ಬಿಹಾರದ ವೀರೇಂದ್ರ ಪಾಸ್ವಾನರ ಹತ್ಯೆ ಮಾಡಿದ್ದಾರೆ. ವೀರೇಂದ್ರ ಇವರು ಭೇಲ್‍ಪುರಿ ಮತ್ತು ಪಾನಿಪುರಿಯ ಗಾಡಿಯನ್ನು ನಡೆಸುತ್ತಿದ್ದರು. ಅವರನ್ನು ಗಾಡಿಯ ಹತ್ತಿರವೇ ಕೊಲ್ಲಲಾಯಿತು.

3. ಅವಂತಿಪೋರಾದ ಘಟನೆಯ ನಂತರ ಕೆಲವೇ ನಿಮಿಷಗಳಲ್ಲಿ ಭಯೋತ್ಪಾದಕರು ಸ್ಥಳೀಯ ಟ್ಯಾಕ್ಸಿ ಯೂನಿಯನ್ನಿನ ಅಧ್ಯಕ್ಷರಾದ ಮಹಮ್ಮದ ಶಫಿಯವರು ಟ್ಯಾಕ್ಸಿ ಸ್ಟ್ಯಾಂಡ ಬಳಿ ನಡೆದು ಹೋಗುತ್ತಿರುವಾಗ ಅವರ ಹತ್ಯೆ ಮಾಡಿದರು.