ಸನಾತನದ ಸಾಧಕರಿಂದ ಮಹಾಸ್ವಾಮೀಜಿಯವರ ಭೇಟಿ
ಚಿಕ್ಕಮಗಳೂರು (ಕರ್ನಾಟಕ) : ಹಿಂದೂ ಧರ್ಮದ ಮೇಲಾಗುತ್ತಿರುವ ಆಘಾತಗಳ ಮೇಲೆ ಮೊಟ್ಟಮೊದಲು ಸನಾತನ ಸಂಸ್ಥೆಯು ಧ್ವನಿಯೆತ್ತುತ್ತದೆ ಎಂದು ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಕೊಪ್ಪ ತಾಲೂಕಿನ ಶಕಟಪುರದ ‘ಶ್ರೀ ಜಗದ್ಗುರು ಬದರೀ ಶಂಕರಾಚಾರ್ಯ ಸಂಸ್ಥಾನಮ್, ಶಕಟಪುರಮ್ ಶ್ರೀ ವಿದ್ಯಾಪೀಠಮ್’ನ ೩೩ರನೇ ಪೀಠಾಧಿಪತಿ ಶ್ರೀ ಶ್ರೀ ಕೃಷ್ಣಾನಂದ ತೀರ್ಥ ಮಹಾಸ್ವಾಮಿಗಳು ಗೌರವೋದ್ಗಾರ ತೆಗೆದರು. ಸನಾತನದ ಸಾಧಕರು ಇತ್ತೀಚೆಗಷ್ಟೇ ಅವರನ್ನು ಭೇಟಿಯಾಗಿದ್ದರು. ಆಗ ಅವರು ಮಾತನಾಡುತ್ತಿದ್ದರು.
‘ಸನಾತನ ಸಂಸ್ಥೆಯ ಕಾರ್ಯವು ತುಂಬಾ ಚೆನ್ನಾಗಿದೆ. ದೈನಿಕ ಹಾಗೂ ಸಾಪ್ತಾಹಿಕ ಸನಾತನ ಪ್ರಭಾತ’, ಹಾಗೂ ಸನಾತನ ಗ್ರಂಥಗಳು ತುಂಬಾ ಚೆನ್ನಾಗಿವೆ’, ಎಂದು ಕೂಡ ಅವರು ಹೇಳಿದರು. ಈ ಸಂದರ್ಭದಲ್ಲಿ ’ಸನಾತನ ಧರ್ಮದ ಜ್ಞಾನಶಕ್ತಿ ಪ್ರಚಾರ ಅಭಿಯಾನದ’ ವಿಷಯದ ಬಗ್ಗೆ ಮಹಾಸ್ವಾಮಿಜಿಗಳಿಗೆ ಮಾಹಿತಿ ನೀಡಲಾಯಿತು. ಅವರು ಪರಾತ್ಪರ ಗುರು ಡಾ. ಆಠವಲೆಯವರ ಬಗ್ಗೆಯೂ ತಿಳಿದುಕೊಂಡರು. ಸನತನ ಸಂಸ್ಥೆಯ ಸೌ. ಶಾರದಾ ಯೋಗೀಶ, ಶ್ರೀಮತಿ ಲಲಿತಮ್ಮ ತಿಮ್ಮಪ್ಪರಾಯಾ ಹಾಗೂ ಧರ್ಮಪ್ರೇಮಿ ಡಾ. ಯೋಗೀಶರವರು ಉಪಸ್ಥಿತರಿದ್ದರು.