ದುಷ್ಕರ್ಮಿಗಳಿಂದ ಜಮ್ಮು-ಕಾಶ್ಮೀರದ ಅನಂತನಾಗದಲ್ಲಿನ ಪ್ರಸಿದ್ಧ ಬರಘಶಿಖಾ ಭವಾನಿ ದೇವಾಲಯ ಧ್ವಂಸ!

* ಕಾಶ್ಮೀರವು ಇಂದಿಗೂ ಹಿಂದೂಗಳು ಹಾಗೂ ಅವರ ಧಾರ್ಮಿಕ ಸ್ಥಳಗಳಿಗೆ ಅಸುರಕ್ಷಿತವಾಗಿದೆ, ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ! ಇಲ್ಲಿಯವರೆಗಿನ ಸರ್ವಪಕ್ಷೀಯ ಆಡಳಿತಗಾರರು ಕಾಶ್ಮೀರದಲ್ಲಿನ ಹಿಂದೂಗಳ ಹಾಗೂ ಅವರ ಧಾರ್ಮಿಕ ಸ್ಥಳಗಳ ರಕ್ಷಣೆಗೋಸ್ಕರ ಏನೂ ಮಾಡಲಿಲ್ಲ, ಎಂಬ ವಿಷಯವು ಹಿಂದೂ ರಾಷ್ಟ್ರ ಸ್ಥಾಪನೆಯನ್ನು ಅನಿವಾರ್ಯಗೊಳಿಸುತ್ತದೆ ! – ಸಂಪಾದಕರು 

* ಜಮ್ಮು-ಕಾಶ್ಮೀರವು ಕೇಂದ್ರದ ಭಾಜಪ ಸರಕಾರದ ನಿಯಂತ್ರಣದಲ್ಲಿರುವಾಗ ಈ ರೀತಿಯ ಘಟನೆಗಳಾಗುವುದು ಹಿಂದೂಗಳಿಗೆ ಅಪೇಕ್ಷಿತವಿಲ್ಲ ! – ಸಂಪಾದಕರು 

ಮೇಲಿನ ಚಿತ್ರ ಪ್ರಕಟಿಸುವುದರ ಉದ್ದೇಶ ಯಾರ ಭಾವನೆಗೆ ನೋವನುಂಟು ಮಾಡುವುದಾಗಿರದೆ, ಮಾಹಿತಿಯನ್ನು ನೀಡುವ ಉದ್ದೇಶದಿಂದ ಪ್ರಕಟಿಸಲಾಗಿದೆ – ಸಂಪಾದಕ

ಅನಂತನಾಗ (ಜಮ್ಮು-ಕಾಶ್ಮೀರ) – ಇಲ್ಲಿನ ಮಟ್ಟನ ಭಾಗದಲ್ಲಿನ ಬರಘಶಿಖಾ ಭವಾನಿ ದೇವಾಲಯದ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿ ಭವಾನಿ ದೇವಾಲಯವನ್ನು ಧ್ವಂಸಗೊಳಿಸಿದ ಘಟನೆಯು ಅಕ್ಟೋಬರ್ 2 ರಂದು ಮಧ್ಯಾಹ್ನ ನಡೆದಿದೆ. ಈ ಪ್ರಕರಣದಲ್ಲಿ ವಿಚಾರಣೆಗೋಸ್ಕರ ಒಂದು ವಿಶೇಷ ಅನ್ವೇಷಣಾ ಪಡೆಯನ್ನು ಸ್ಥಾಪಿಸಲಾಗಿದೆ.

೧. ಪೊಲೀಸ್ ಉಪಾಯುಕ್ತ ಪಿಯೂಶ ಸಿಂಗಲಾರವರು ಇದರ ಬಗ್ಗೆ ಮುಂದಿನಂತೆ ಹೇಳಿದರು, ಇಲ್ಲಿನ ಸಾಮಾಜಿಕ ಹಾಗೂ ಧಾರ್ಮಿಕ ಸಾಮರಸ್ಯವನ್ನು ಕಾಪಾಡಲು ಪ್ರಯತ್ನಿಸಲಾಗುವುದು. ಈ ರೀತಿಯ ಘಟನೆಗಳನ್ನು ಸಹಿಸಿಕೊಳ್ಳಲಾಗುವುದಿಲ್ಲ. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ. (ಮೂಲದಲ್ಲಿ ಈ ರೀತಿಯ ಘಟನೆಗಳೇ ಆಗದಂತೆ ಪೊಲೀಸರು ಪ್ರಯತ್ನಿಸುವುದು ಅಗತ್ಯ ! – ಸಂಪಾದಕರು)

. ನ್ಯಾಶನಲ ಕಾನ್ಫರೆನ್ಸ್‍ನ ಮುಖಂಡರು ಹಾಗೂ ಮಾಜಿ ಮುಖ್ಯಮಂತ್ರಿ ಉಮರ ಅಬ್ದುಲ್ಲಾರವರು ಟ್ವಿಟ್ ಮಾಡಿ ಈ ಘಟನೆಯನ್ನು ವಿರೋಧಿಸಿದ್ದಾರೆ. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು, ಎಂದು ಕೂಡ ಅವರು ಹೇಳಿದ್ದಾರೆ.

೩. ಪಿಡಿಪಿಯ ಮುಖಸ್ಥೆ ಹಾಗೂ ಮಾಜಿ ಉಪಮುಖ್ಯಮಂತ್ರಿ ಮೆಹಬೂಬಾ ಮುಫ್ತಿರವರು ಟ್ವಿಟ್ ಮಾಡಿ ತಮ್ಮ ದುಃಖವನ್ನು ವ್ಯಕ್ತ ಪಡಿಸಿದರು. ನಾವು ಕಾಶ್ಮೀರಿ ಪಂಡಿತರ ಸುಕರ್ಷತೆಯ ಖಾತ್ರಿ ನೀಡಲು ಪ್ರಯತ್ನಿಸಬೇಕು, ಎಂದು ಕೂಡ ಅವರು ನುಡಿದರು. (ಹಿಂದೂ ಹಿತದ ಕಾಳಜಿಯಿರುವಂತೆ ನಾಟಕ ಮಾಡುವ ಉಮರ ಅಬ್ದುಲ್ಲಾ ಹಾಗೂ ಮೆಹಬೂಬಾ ಮುಫ್ತಿ ಇವರಿಬ್ಬರೂ ಒಂದೇ ಸರದ ಮಣಿಗಳಾಗಿದ್ದಾರೆ ! – ಸಂಪಾದಕರು)