ಪೊಲೀಸರು ಈ ಅಂಕಣಕ್ಕನುಸಾರ ತೆಗೆದುಕೊಳ್ಳಬೇಕುಗೂಂಡಾಗಿರಿ ಮಾಡುವ ಪೊಲೀಸರು ! |
ಇಂಥ ಪೊಲೀಸರನ್ನು ಕೇವಲ ಅಮಾನತುಗೊಳಿಸುವುದಲ್ಲ, ತಕ್ಷಣ ಬಂಧಿಸಿ ಅವರ ಎಲ್ಲ ಸಂಪತ್ತನ್ನು ಜಪ್ತು ಮಾಡಬೇಕು. ಅವರ ಮೇಲಿನ ಖಟ್ಲೆಯನ್ನು ನ್ಯಾಯಾಲಯದಲ್ಲಿ ಶೀಘ್ರಗತಿಯಲ್ಲಿ ನಡೆಸಿ ಅವರಿಗೆ ಅಜೀವನ ಜೈಲು ಶಿಕ್ಷೆಯಾಗುವಂತೆ ಸರಕಾರವು ಪ್ರಯತ್ನಿಸಬೇಕು ! – ಸಂಪಾದಕರು
ಬುಲಂದಶಹರ (ಉತ್ತರಪ್ರದೇಶ) – ಹಿರಿಯ ಅಧಿಕಾರಿಗಳ ಅನುಮತಿ ಇಲ್ಲದೆ ಇಲ್ಲಿನ ಹೆಚ್ಚುವರಿ ಪೊಲೀಸ್ ನಿರೀಕ್ಷಕರಾದ ಅಜಯ ಕುಮಾರ ಇವರು ಬೀಗ ತಯಾರಿಸುವ ವ್ಯಾಪಾರಿಯ ಸಂಸ್ಥೆಯ ಮೇಲೆ ದಾಳಿ ನಡೆಸಿ ಅವನನ್ನು ಅಪಹರಿಸಿ ಥಳಿಸಿದ್ದರು. ಅವರ ಬಾಯಿಯಲ್ಲಿ ಪಿಸ್ತೂಲು ಹಾಕಿ ಅವನನ್ನು ಬೆದರಿಸಿದರು. ಈ ವಿಷಯದಲ್ಲಿ ಪೊಲೀಸರಲ್ಲಿ ದೂರನ್ನು ನೋಂದಾಯಿಸಿದಾಗ ಅಜಯ ಕುಮಾರನನ್ನು ಅಮಾನತುಗೊಳಿಸಲಾಗಿದೆ. ಈ ಘಟನೆಯ ವಿಚಾರಣೆ ನಡೆಸಲಾಗುತ್ತಿದೆ.
Police inspector Ajay Kumar, posted at Bulandshahr had picked up a businessman in a cheating case without informing his seniorshttps://t.co/GZXKmwYm1P
— Mirror Now (@MirrorNow) October 2, 2021
ಅಲಿಗಡದಲ್ಲಿನ ಅಭಿಷೇಕ್ ತಿವಾರಿಯ ವಿರುದ್ಧ ಸೆಪ್ಟೆಂಬರ್ 16 ರಂದು ರಾಜೀವ ಕುಮಾರ ಎಂಬ ಹೆಸರಿನ ವ್ಯಕ್ತಿಯು ಬುಲಂದಶಹರ ಸಿಟಿ ಕೋತವಾಲಿ ಪೊಲೀಸ್ ಠಾಣೆಯಲ್ಲಿ 6 ಲಕ್ಷದ 60 ಸಾವಿರ ರೂಪಾಯಿಗಳ ಚೆಕ್ ಬೌನ್ಸ್ ಆಗಿರುವ ಬಗ್ಗೆ ದೂರನ್ನು ನೋಂದಾಯಿಸಿದ್ದರು. ಈ ಪ್ರಕರಣದಲ್ಲಿ ಹಿರಿಯ ಅಧಿಕಾರಿಗಳ ಅನುಮತಿಯಿಲ್ಲದೆ ಹೆಚ್ಚುವರಿ ನಿರೀಕ್ಷಕ ಅಜಯ ಕುಮಾರ ಇವರು ಅಲಿಗಡದಲ್ಲಿನ ತಿವಾರಿ ಅವರನ್ನು ಬಂಧಿಸಲು ಹೋಗಿದ್ದರು. ಚೆಕ್ ಬೌನ್ಸ್ ಆದರೆ ಪೊಲೀಸರು ಬಂಧಿಸಲು ಸಾಧ್ಯವಿಲ್ಲ, ಹೀಗಿರುವಾಗಲೂ ಅಜಯ ಕುಮಾರ ಇವರು ಬಂಧಿಸಲು ಹೋಗಿದ್ದರು.