ದೇವಸ್ಥಾನಗಳಲ್ಲಿ ಕೇವಲ ಹಿಂದೂ ಸಿಬ್ಬಂದಿಗಳಿಗೇ ನೇಮಕ
ಹಿಮಾಚಲ ಪ್ರದೇಶ ಸರಕಾರವು ಕೈಗೊಂಡ ಈ ನಿರ್ಣಯವನ್ನು ಭಾಜಪ ಅಧಿಕಾರ ಇರುವ ಎಲ್ಲ ಸರ್ಕಾರಗಳು ತೆಗೆದುಕೊಳ್ಳಬೇಕು, ಹಾಗೆಯೇ ಕೇಂದ್ರ ಸರಕಾರವೂ ಇದಕ್ಕಾಗಿ ಪ್ರಯತ್ನಿಸಬೇಕು, ಎಂದು ಹಿಂದೂಗಳ ಅನ್ನಿಸುತ್ತದೆ ! – ಸಂಪಾದಕರು
ಶಿಮ್ಲಾ – ಹಿಮಾಚಲ ಪ್ರದೇಶದ ಭಾಷೆ, ಕಲೆ ಮತ್ತು ಸಂಸ್ಕೃತಿ ಇಲಾಖೆಯ ‘ಹಿಂದೂ ಸಾರ್ವಜನಿಕ ಧಾರ್ಮಿಕ ಸಂಸ್ಥೆ ಮತ್ತು ನ್ಯಾಸ ಮಸೂದೆ – ೧೯೮೪’ ರ ಕಲಂ ೨೭ ಇದರ ಅಂತರ್ಗತ ದೇವಸ್ಥಾನಗಳು, ಶಕ್ತಿಪೀಠಗಳು ಮತ್ತು ಧಾರ್ಮಿಕ ಸಂಸ್ಥೆಗಳಿಗೆ ಅರ್ಪಣೆ ರೂಪದಲ್ಲಿ ಸಿಗುವ ಹಣ, ಬಂಗಾರ, ಬೆಳ್ಳಿ ಈಗ ಹಿಂದೂಯೇತರರಿಗಾಗಿ ಖರ್ಚು ಮಾಡಲು ನಿರ್ಬಂಧ ಹೇರಲಾಗಿದೆ. ದೇವಸ್ಥಾನಗಳ ಸುರಕ್ಷೆ ಹಾಗೂ ಇತರ ಕೆಲಸಗಳಿಗಾಗಿ ನೇಮಿಸುವ ಸಿಬ್ಬಂದಿಗಳು ಮತ್ತು ಅಧಿಕಾರಿಗಳು ಕೇವಲ ಹಿಂದೂಗಳೇ ಇರಲಿದ್ದಾರೆ. ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಆರ್.ಡಿ. ಧಿಮಾನ ಇವರು ಈ ವಿಷಯವಾಗಿ ಅಧಿಸೂಚನೆ ಹೊರಡಿಸಿದ್ದಾರೆ.
मंदिरों में केवल हिन्दू कर्मचारी, गैर-हिन्दुओं पर खर्च नहीं होगा चढ़ावे का पैसा व सोना-चाँदी: हिमाचल सरकार का बड़ा फैसला#HimachalPradesh #Templeshttps://t.co/X1FbuGb2aI
— ऑपइंडिया (@OpIndia_in) October 2, 2021
ಪ್ರಸ್ತುತ ದೇವಸ್ಥಾನಗಳ ಹಣವನ್ನು ಬ್ಯಾಂಕ್‌ಗಳಲ್ಲಿ ಸ್ಥಿರ ಠೇವಣಿಯಲ್ಲಿಡಲಾಗಿದೆ. ಅರ್ಪಣೆಯಲ್ಲಿ ಪಡೆದಿರುವ ಹಣದಿಂದ ದೇವಸ್ಥಾನದ ಅರ್ಚಕರು ಮತ್ತು ಸಿಬ್ಬಂದಿಗಳ ಸಂಬಳವನ್ನು ಕೊಡಲಾಗುತ್ತದೆ. ಅದೇ ರೀತಿ ಬಂಗಾರ ಹಾಗೂ ಬೆಳ್ಳಿ ಇವುಗಳನ್ನು ತಿಜೋರಿ (ಲಾಕರ್ ಅಲ್ಲಿ) ಯಲ್ಲಿ ಜಮೆ ಮಾಡಲಾಗುತ್ತದೆ. ಅದನ್ನು ಕರಗಿಸಿ ಅದರ ನಾಣ್ಯಗಳನ್ನು ಮಾಡಿ ಮಾರಾಟ ಮಾಡುವ ಪ್ರಸ್ತಾವನೆಯನ್ನು ಈ ಮೊದಲೇ ತಿರಸ್ಕರಿಸಲಾಗಿದೆ.