20 ವರ್ಷಗಳಿಂದ ಅಣೆಕಟ್ಟಿನ ಬಳಿ ಅಕ್ರಮ ಮಸೀದಿಯಿರುವುದು, ಇಲ್ಲಿಯವರೆಗಿನ ಸರ್ವಪಕ್ಷೀಯ ಆಡಳಿತಗಾರರಿಗೆ ನಾಚಿಕೆಗೇಡು !- ಸಂಪಾದಕರು
ಗಢವಾಲ (ಉತ್ತರಾಖಂಡ) – ರಾಜ್ಯದಲ್ಲಿನ ಟಿಹರಿ ಅಣೆಕಟ್ಟಿನ ಸಮೀಪ ಅಕ್ರಮವಾಗಿ ಕಟ್ಟಲಾಗಿದ್ದ ಮಸೀದಿಯನ್ನು ಆಡಳಿತವು ನೆಲಸಮಗೊಳಿಸಿದೆ. ರಾಜ್ಯದ ಹಿಂದುತ್ವನಿಷ್ಠ ಸಂಘಟನೆಗಳು ಹಾಗೂ ಸ್ಥಳೀಯ ನಾಗರಿಕರು ಅವರ ವಿರುದ್ಧ ದೂರುಗಳನ್ನು ದಾಖಲಿಸಿದ್ದರು. (ಅಣೆಕಟ್ಟಿನ ಸಮೀಪ ಅಕ್ರಮವಾಗಿ ಮಸೀದಿ ಕಟ್ಟುತ್ತಿರುವಾಗ ಪೊಲೀಸರು ಹಾಗೂ ಆಡಳಿತವು ನಿದ್ರಿಸುತ್ತಿತ್ತೇ? ಸ್ಥಳೀಯ ನಾಗರಿಕರ ಹಾಗೂ ಹಿಂದುತ್ವನಿಷ್ಠರ ಗಮನಕ್ಕೆ ಬರುವಂತಹ ವಿಷಯಗಳು ಎಲ್ಲಾ ವ್ಯವಸ್ಥೆ(ಸೌಲಭ್ಯ)ಗಳು ಕೈಯ್ಯಲ್ಲಿರುವವರ ಗಮನಕ್ಕೆ ಏಕೆ ಬರುವುದಿಲ್ಲ, ಎಂದು ಹೇಳಲು ಸಾಧ್ಯವಿದೆಯೇನು? ಅದಕ್ಕೆ ಹೊಣೆಯಾದವರ ಮೇಲೆ ಕ್ರಮ ಕೈಗೊಳ್ಳಲೇ ಬೇಕು ! – ಸಂಪಾದಕರು) 20 ವರ್ಷಗಳಿಂದ ಇರುವ ಈ ಅಕ್ರಮ ಮಸೀದಿಯನ್ನು ಕೆಡವಲು ದೊಡ್ಡ ಆಂದೋಲನವನ್ನು ಸಹ ನಡೆಸಲಾಯಿತು, ಅದೇ ರೀತಿ ಟ್ವಿಟರನಲ್ಲಿ ‘ಟ್ರೆಂಡ್’ (ಚರ್ಚೆಯಲ್ಲಿರುವ ವಿಷಯ) ನಡೆಸಲಾಯಿತು. (ಭಾಜಪದ ಸರಕಾರವಿರುವಾಗ ಅಕ್ರಮ ಮಸೀದಿಯನ್ನು ಕೆಡವಲು ಇಷ್ಟು ವಿರೋಧ ಮಾಡಬೇಕಾಗಿರುವುದು ಅಪೇಕ್ಷಿತವಲ್ಲ, ಎಂದು ಹಿಂದೂಗಳಿಗೆ ಅನಿಸುತ್ತದೆ ! – ಸಂಪಾದಕರು)
Uttarakhand: Illegal mosque built near Tehri dam finally removed by authoritieshttps://t.co/IXXbYvo4SQ
— OpIndia.com (@OpIndia_com) September 30, 2021
ಇಸವಿ 2000 ದಲ್ಲಿ ಟಿಹರಿ ಅಣೆಕಟ್ಟು ಕಟ್ಟಲು ಬಂದ ಮುಸಲ್ಮಾನ ಕಾರ್ಮಿಕರಿಗಾಗಿ ನಿರ್ಮಾಣ ಕಂಪನಿಯು ಈ ತಾತ್ಕಾಲಿಕ ಮಸೀದಿಯನ್ನು ನಿರ್ಮಿಸಿತ್ತು. ಅಣೆಕಟ್ಟು ಕಟ್ಟಿದ ಬಳಿಕ ಸದರಿ ಕಂಪನಿ ಹಾಗೂ ಕಾರ್ಮಿಕರು ಅಲ್ಲಿಂದ ಹೊರಟು ಹೋದರು;ಆದರೆ ಮಸೀದಿ ಮಾತ್ರ ಹಾಗೆಯೇ ಉಳಿದುಕೊಂಡಿತು. ಪ್ರತಿ ಶುಕ್ರವಾರ ಇಲ್ಲಿ ನೂರಾರು ಸಂಖ್ಯೆಯಲ್ಲಿ ಮುಸಲ್ಮಾನರು ನಮಾಜ ಪಠಿಸಲು ಬರುತ್ತಿದ್ದರು. ಹಲವರು ಅಲ್ಲಿನ ರಸ್ತೆಯ ಮೇಲೆ ನಮಾಜಪಠಣ ಮಾಡುತ್ತಿದ್ದರು. ನಮಾಜ ಪಠಣದ ದಿನದಂದು ಸ್ಥಳೀಯ ಮಹಿಳೆಯರನ್ನು ಚುಡಾಯಿಸುವ ಘಟನೆಗಳು ಕೂಡ ನಡೆಯುತ್ತಿದ್ದವು.