ಬಂಧಿಸಲ್ಪಟ್ಟಿರುವ ಪಾಕಿಸ್ತಾನಿ ಉಗ್ರಗಾಮಿಯ ಸ್ವೀಕೃತಿ !

ಪಾಕಿಸ್ತಾನ ಸೈನ್ಯವು ಹಣದ ಆಮಿಷವೊಡ್ಡಿ ನನ್ನನ್ನು ಉಗ್ರಗಾಮಿಯಾಗಿಸಿತು !

ನವ ದೆಹಲಿ – ನನಗೆ ಬಡತನದಿಂದ ಮೇಲಕ್ಕೆತ್ತಲು ಹಣದ ಆಮಿಷ ತೋರಿಸಿ ಲಷ್ಕರ-ಎ-ತೊಯಬಾಗೆ ಹೋಗಲು ಹೇಳಲಾಯಿತು. ನನಗೆ ಪಾಕಿಸ್ತಾನಿ ಸೈನ್ಯವು ತರಬೇತಿ ನೀಡಿ ಪಾಕಿಸ್ತಾನ ಗುಪ್ತಚರ ಸಂಸ್ಥೆಯಾದ ಐ.ಎಸ್.ಐ.ಗೆ ಒಪ್ಪಿಸಿತು. ಪಾಕಿಸ್ತಾನದ ಸೈನ್ಯದ ಸಹಾಯವಿಲ್ಲದೆ ಯಾರೂ ಕೂಡ ಭಾರತದೊಳಗೆ ನುಗ್ಗಲು ಸಾಧ್ಯವಿಲ್ಲ. ನಾನು ಲಷ್ಕರ-ಎ-ತೊಯಬಾಗೆ ಸೇರಿದ ಬಳಿಕ ನನಗೆ ೨೦ ಸಾವಿರ ರೂ. ಹಣವನ್ನು ನೀಡಲಾಯಿತು. ನನ್ನನ್ನು ಕಾಶ್ಮೀರಕ್ಕೆ ಕಳುಹಿಸಿದ ಬಳಿಕ ನನ್ನ ಕುಟುಂಬದವರಿಗೆ ೩೦ ಸಾವಿರ ಹಣ ಸಿಗಲಿಕ್ಕಿತ್ತು, ಎಂದು ಕಾಶ್ಮೀರದಲ್ಲಿ ಬಂಧಿಸಲ್ಪಟ್ಟ ೧೯ ವರ್ಷದ ಪಾಕಿಸ್ತಾನೀ ಉಗ್ರಗಾಮಿ ಅಲೀ ಬಾಬರ ಎಂಬುವವನು ವಿಚಾರಣೆಯ ಸಮಯದಲ್ಲಿ ಮಾಹಿತಿ ನೀಡಿದನು. ಬಾಬರನ ತಂದೆಯು ತೀರಿಕೊಂಡಿದ್ದು ಅವನು ತಾಯಿ ಹಾಗೂ ಸಹೋದರಿಯೊಂದಿಗೆ ವಾಸಿಸುತ್ತಿದ್ದನು. ತಾಯಿಯ ಉಪಚಾರಕ್ಕಾಗಿ ಅವನಿಗೆ ಹಣದ ಆಮಿಷ ಒಡ್ಡಲಾಗಿತ್ತು. ಇದರಿಂದ ಅಲೀ ಬಾಬರ ಹಾಗೂ ಅವನಂತಹ ಅನೇಕ ಯುವಕರನ್ನು ಪಾಕಿಸ್ತಾನೀ ಸೈನ್ಯವು ಹಣದ ಆಮಿಷವೊಡ್ಡಿ ದಾರಿ ತಪ್ಪಿಸುತ್ತಿದೆ.. ಅದೇ ರೀತಿ ಉಗ್ರಗಾಮಿ ತರಬೇತಿಯನ್ನು ಕೂಡ ನೀಡುತ್ತಿದೆ, ಎಂಬ ಮಾಹಿತಿಯನ್ನು ಭಾರತೀಯ ಸೈನ್ಯವು ನೀಡಿದೆ.

ಕಾಶ್ಮೀರಿ ಮುಸಲ್ಮಾನರು ಸಂತೋಷದಲ್ಲಿರುವುದು ಕಂಡಿತು ! ಉಗ್ರಗಾಮಿ ಅಲೀ ಬಾಬರ

ಅಲೀ ಬಾಬರನು ಮುಂದೆ ಹೀಗೆಂದನು, ಕಾಶ್ಮೀರದಲ್ಲಿ ಭಾರತೀಯ ಸೈನ್ಯವು ಮುಸಲ್ಮಾನರ ಮೇಲೆ ಅತ್ಯಾಚಾರ ನಡೆಸುತ್ತಿದೆ ಎಂದು ನನಗೆ ಹೇಳಲಾಯಿತು. ಆದರೆ ನನಗೇನು ಆ ರೀತಿ ಕಾಣಿಸುವುದಿಲ್ಲ. ಭಾರತೀಯ ಸೈನ್ಯವು ನನ್ನೊಂದಿಗೆ ನನ್ನೊಂದಿಗೆ ಚೆನ್ನಾಗಿ ವ್ಯವಹರಿಸಿತು. ನನಗೇನೂ ಅವರು ಹೊಡೆದಿಲ್ಲ ಅಥವಾ ನನಗೆ ಕಿರುಕುಳವನ್ನೂ ಕೊಟ್ಟಿಲ್ಲ. ನನಗೆ ಕಾಣಿಸಿದ ಜನರು ಆನಂದವಾಗಿದ್ದರು. ಜಿಹಾದ್ ಬಹಳ ಕೆಟ್ಟದು ಎಂದು ನಾನು ಪಾಕಿಸ್ತಾನದಲ್ಲಿರುವ ನನ್ನಂತಹ ಯುವಕರಿಗೆ ನಾನು ಹೇಳಲು ಬಯಸುತ್ತೇನೆ.