ಭಾರತದ ಮಂದಗತಿಯ ನಿಲುವಿನಿಂದಾಗಿಯೇ ಚೀನಾವು ಇಂತಹ ಕೃತ್ಯಗಳನ್ನು ಮಾಡುವ ದುಃಸಾಹಸ ತೋರುತ್ತಿದೆ, ಇದು ಭಾರತಕ್ಕೆ ನಾಚಿಕೆಗೇಡು ! ಚೀನಾಗೆ ಈಗ ಪ್ರತ್ಯುತ್ತರ ನೀಡಲು ಖಂಡತುಂಡ ಕೃತ್ಯ ಮಾಡುವುದು ಭಾರತಕ್ಕೆ ಆವಶ್ಯಕವಾಗಿದೆ. ಇಲ್ಲದಿದ್ದರೆ ‘ಭಾರತವು ಒಂದು ದುರ್ಬಲ ರಾಷ್ಟ್ರ’, ಹೀಗೆಂದು ಚೀನಾದ ಮತ್ತು ಪ್ರಪಂಚದ ಧೋರಣೆಯಾಗುವುದು !- ಸಂಪಾದಕರು
ನವದೆಹಲಿ – ಚೀನಿ ಸೈನಿಕರು ಉತ್ತರಾಖಂಡದ ಬಾರಾಹೊತಿ ಭಾಗದಲ್ಲಿ ನುಗ್ಗಿ ಅಲ್ಲಿಯ ಸೇತುವೆ ಧ್ವಂಸ ಮಾಡಿರುವ ಆಘಾತಕರ ವಾರ್ತೆಯು ಸಿಕ್ಕಿದೆ. 100 ಕ್ಕೂ ಹೆಚ್ಚು ಚೀನಿ ಸೈನಿಕರು ಆ ಸಮಯದಲ್ಲಿ ಉಪಸ್ಥಿತರಿದ್ದರು. ನುಸುಳುವಿಕೆಯ ನಂತರ ಹಿಂತಿರುಗುವಾಗ ಚೀನಿ ಸೈನಿಕರು ಈ ಸೇತುವೆಯನ್ನು ಧ್ವಂಸ ಮಾಡಿದ್ದಾರೆಂದು ಅಲ್ಲಿಯ ಒಬ್ಬ ಅಧಿಕಾರಿಯು ತಿಳಿಸಿದ್ದಾರೆ.
Over 100 Chinese soldiers transgress into #Uttarakhand, damage bridge in Barahoti: Report.https://t.co/z3LLVwFE4n
— TIMES NOW (@TimesNow) September 28, 2021
1. ಈ ಘಟನೆ ಆಗಸ್ಟ್ 30 ರಂದು ನಡೆದಿದೆ ಎಂದು ಹೇಳಲಾಗುತ್ತಿದೆ. ಭಾರತೀಯ ಸೈನ್ಯಕ್ಕೆ ಇದರ ಮಾಹಿತಿ ಸಿಗುವುದರೊಳಗೆ ಚೀನಿ ಸೈನಿಕರು ವಾಪಾಸು ಹೋಗಿಯಾಗಿತ್ತು. ‘ತುಂತುನ್ ಲಾ ಪಾಸ’ ದಾಟಿ 55 ರಿಂದ 100 ಕ್ಕೂ ಹೆಚ್ಚು ಚೀನಿ ಸೈನಿಕರು ಭಾರತದ ಗಡಿಯೊಳಗೆ 5 ಕಿಲೋಮೀಟರ್ ಕ್ಕಿಂತ ಹೆಚ್ಚು ಒಳಗೆ ನುಗ್ಗಿದ್ದರು. ಈ ಸೈನಿಕರು ಹೆಚ್ಚುಕಡಿಮೆ ಮೂರು ಗಂಟೆಗಳ ಕಾಲ ಈ ಭಾಗದಲ್ಲಿ ಇದ್ದರು. ಇದು ಸೈನ್ಯ ಇಲ್ಲದಿರುವ ಪ್ರದೇಶವಾಗಿದೆ. ಆದ್ದರಿಂದ ಇಷ್ಟು ದೊಡ್ಡ ಪ್ರಮಾಣದ ಚೀನಿ ಸೈನಿಕರು ಒಳಗೆ ನುಗ್ಗಿದ್ದಾರೆ. ಈ ವಿಷಯವಾಗಿ ಸ್ಥಳೀಯರು ಇಂಡೋ-ತಿಬೆಟ್ ಬಾರ್ಡರ್ ಪೊಲೀಸರಿಗೆ ಇದರ ಬಗ್ಗೆ ಮಾಹಿತಿ ನೀಡಿದರು. ಭಾರತೀಯ ಸೈನ್ಯ ಇಲ್ಲಿ ಬರುವುದರೊಳಗೆ ಚೀನಿ ಸೈನಿಕರು ಅಲ್ಲಿ ನಾಶ ಮಾಡಿ ಹಿಂತಿರುಗಿದ್ದರು.
2. ಬಾರಾಹೋತಿ ಭಾಗದಲ್ಲಿ ಈ ಮೊದಲು ಚೀನಿ ಸೈನಿಕರು ಒಳನುಸುಳಿದ್ದರು. 1954 ರಲ್ಲಿ ಚೀನಾವು ಭಾರತದಲ್ಲಿ ಮೊದಲ ಬಾರಿ ಇಲ್ಲಿ ನುಗ್ಗಿತ್ತು. ಅದರ ನಂತರ ಎರಡನೆಯ ಭಾಗದಲ್ಲಿ ನಿಯಂತ್ರಣ ಪಡೆಯುವ ಪ್ರಯತ್ನಿಸಿತ್ತು. ಸಪ್ಟೆಂಬರ್ 2018 ರಲ್ಲಿ ಈ ರೀತಿ ಮೂರು ಸಲ ನುಸುಳಲಾಗಿತ್ತು ಎಂದು ಹೇಳಲಾಗುತ್ತಿದೆ. (ಈ ಮೊದಲು ಸಹ ಈ ಭಾಗದಲ್ಲಿ ಈ ರೀತಿಯ ನುಸುಳುವಿಕೆಯಾಗಿರುವಾಗ ಇನ್ನೂ ಅಲ್ಲಿ ಸೈನಿಕರನ್ನು ನೇಮಕ ಮಾಡದಿರುವುದು, ಇದು ಆತ್ಮ ಘಾತಕವೇ ಆಗಿದೆ ಎಂದು ಹೇಳ ಬೇಕಾಗಬಹುದು ! ಇನ್ನಾದರೂ ಸೈನಿಕರನ್ನು ಇಲ್ಲಿ ಸೈನಿಕರ ನಿಯೋಜಿಸಲಾಗುವುದೋ ಇಲ್ಲವೋ ಇದನ್ನು ಜನರಿಗೆ ಸ್ಪಷ್ಟಪಡಿಸಬೇಕು. – ಸಂಪಾದಕರು)