ಅಕ್ಟೋಬರ 1 ರೊಳಗೆ ಭಾರತವನ್ನು ‘ಹಿಂದೂ ರಾಷ್ಟ್ರ ‘ ಎಂದು ಘೋಷಣೆ ಮಾಡದಿದ್ದಲ್ಲಿ ಅಕ್ಟೋಬರ್ ಎರಡರಂದು ಜಲಸಮಾಧಿ ತೆಗೆದುಕೊಳ್ಳುವೆ ! – ಅಯೋಧ್ಯೆಯ ಮಹಂತ ಪರಮಹಂಸ ದಾಸ ಇವರ ಎಚ್ಚರಿಕೆ

ಜಲಸಮಾಧಿ ತೆಗೆದುಕೊಳ್ಳುವುದರಿಂದಲ್ಲ, ಸಂಘರ್ಷ ಮಾಡಿಯೇ ಹಿಂದೂರಾಷ್ಟ್ರ ಬರಬಲ್ಲದು, ಇದನ್ನು ಪ್ರತಿಯೊಬ್ಬ ಹಿಂದೂಗಳು ಗಮನದಲ್ಲಿಟ್ಟು ಅದಕ್ಕಾಗಿ ಕೃತಿ ಶೀಲರಾಗಬೇಕು ! – ಸಂಪಾದಕರು 

ಮಹಂತ ಪರಮಹಂಸ ದಾಸ

ಅಯೋಧ್ಯೆ – ಅಕ್ಟೋಬರ 1 ರಂದು ದೇಶದಲ್ಲಿ ಒಂದು ದೊಡ್ಡ ಧರ್ಮಸಭೆಯ ಆಯೋಜನೆ ಮಾಡಲಾಗುವುದು. ಅದರಲ್ಲಿ ಭಾರತವನ್ನು ‘ಹಿಂದೂ ರಾಷ್ಟ್ರ’ವೆಂದು ಘೋಷಣೆ ಮಾಡಲಾಗುವುದು; ಆದರೆ ಅಲ್ಲಿವರೆಗೆ ಕೇಂದ್ರ ಸರಕಾರವು ಯಾವುದೇ ನಿರ್ಣಯ ತೆಗೆದುಕೊಳ್ಳದಿದ್ದರೆ ನಾನು ಶರಯೂ ನದಿಯಲ್ಲಿ ಅಕ್ಟೋಬರ್ 2 ರಂದು ಸಮಾಧಿ ತೆಗೆದುಕೊಳ್ಳುವೆ, ಎಂಬ ಎಚ್ಚರಿಕೆಯನ್ನು ಮಹಂತ ಪರಮಹಂಸ ದಾಸ ಇವರು ನೀಡಿದರು. ಅಯೋಧ್ಯೆಯಲ್ಲಿ ನಡೆದ ಸನಾತನ ಧರ್ಮ ಪರಿಷತ್ತಿನಲ್ಲಿ ಅವರು ಈ ಎಚ್ಚರಿಕೆಯನ್ನು ನೀಡಿದರು.

1. ಯಾವ ರೀತಿ ಕಾಶ್ಮೀರದಲ್ಲಿ ಧರ್ಮದ ಆಧಾರದ ಮೇಲೆ ಘೋಷಣೆ ನೀಡಲಾಗುವುದನ್ನು ನೋಡಿದಾಗ ಭಾರತವನ್ನು ‘ಹಿಂದು ರಾಷ್ಟ್ರ’ವೆಂದು ಘೋಷಣೆ ಮಾಡದಿದ್ದಲ್ಲಿ, ಹಿಂದೂಗಳು ಅಲ್ಪಸಂಖ್ಯಾತರಾಗುವರು. ಇದನ್ನು ತಪ್ಪಿಸಲು `ಹಿಂದು ರಾಷ್ಟ್ರ’ದ ಘೋಷಣೆ ಮಾಡುವುದು ಅತ್ಯಾವಶ್ಯಕವಾಗಿದೆ ಎಂದು ಮಹಂತ ಪರಮಹಂಸ ದಾಸ ಇವರು ಹೇಳಿದರು.

2. ಕೆಲವು ತಿಂಗಳ ಹಿಂದೆ ಮಹಂತ ಪರಮಹಂಸ ದಾಸ ಇವರು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರೀಯ ಗೃಹ ಸಚಿವ ಅಮಿತ ಶಾ ಇವರಿಗೆ ಒಂದು ಪತ್ರ ಬರೆದು ಭಾರತಕ್ಕೆ ‘ಹಿಂದೂ ರಾಷ್ಟ್ರ’ ಘೋಷಣೆ ಮಾಡದೇ ಇದ್ದರೆ ನಾನು ಆತ್ಮ ದಹನ ಮಾಡುತ್ತೇನೆ’, ಎಂದು ಎಚ್ಚರಿಕೆ ನೀಡಿದ್ದರು. ಅದಾದನಂತರ ಅವರು ಪ್ರತ್ಯಕ್ಷ ಆತ್ಮ ದಹನದ ಸಿದ್ಧತೆ ಮಾಡಿಕೊಂಡಿದ್ದರು; ಆದರೆ ಸರಿಯಾದ ಸಮಯಕ್ಕೆ ಪೊಲೀಸರು ಸ್ಥಳಕ್ಕೆ ಬಂದು ಈ ಪ್ರಕರಣವನ್ನು ತಡೆಗಟ್ಟಿದ್ದರು.