ಉತ್ತರಪ್ರದೇಶದ ಅಲಿಗಡದಲ್ಲಿನ ಮಸೀದಿಯಲ್ಲಿ ಕುರಾನ ಕಲಿಯಲು ಹೋದ 12 ವರ್ಷದ ಹುಡುಗನನ್ನು ಲೈಂಗಿಕ ಶೋಷಣೆಗೈದ ಮೌಲ್ವಿ

ಚರ್ಚ್ ಮತ್ತು ಮಸೀದಿಗಳಲ್ಲಿ ಮಕ್ಕಳ ಮೇಲೆ ದೊಡ್ಡ ಪ್ರಮಾಣದಲ್ಲಿ ಲೈಂಗಿಕ ಶೋಷಣೆಯಾಗುವ ಘಟನೆಗಳು ಬೆಳಕಿಗೆ ಬರುತ್ತಿದ್ದರೂ ಈ ವಿಷಯವಾಗಿ ಪ್ರಸಾರಮಾಧ್ಯಮಗಳು ಎಂದಿಗೂ ಚರ್ಚೆಗಳನ್ನು ಆಯೋಜಿಸುವುದಿಲ್ಲ. ಅಥವಾ ಪ್ರಗತಿ(ಅಧೋಗತಿ)ಪರರು ಮತ್ತು ಜಾತ್ಯತೀತವಾದಿಗಳು ಬಾಯಿ ಬಿಡುವುದಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ ! – ಸಂಪಾದಕರು 

ಅಲಿಗಡ (ಉತ್ತರ ಪ್ರದೇಶ) – ಅಲಿಗಡನ ರೋರಾವರ ಪ್ರದೇಶದ ಒಂದು ಮಸೀದಿಯಲ್ಲಿ ಕುರಾನ ಕಲಿಯಲು ಹೋಗುತ್ತಿದ್ದ 12 ವರ್ಷದ ಹುಡುಗನನ್ನು ಅಲ್ಲಿಯ ಮೌಲ್ವಿ ಲೈಂಗಿಕ ಶೋಷಣೆಗೈದ ಘಟನೆ ನಡೆದಿದೆ. ಆ ಹುಡುಗನು ಮನೆಗೆ ಹೋಗಿ ನಡೆದಿರುವ ಘಟನೆಯ ಬಗ್ಗೆ ಮಾಹಿತಿ ನೀಡಿದ ಮೇಲೆ ಮೌಲ್ವಿಯ ವಿರುದ್ಧ ಪೊಲೀಸರಲ್ಲಿ ದೂರು ದಾಖಲಿಸಲಾಗಿದೆ. ನಂತರ ಮೌಲ್ವಿಯನ್ನು ಬಂಧಿಸಲಾಯಿತು. ಈ ಪ್ರಕರಣದ ನಂತರ ನಾಗರಿಕರಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಘಟನೆಯ ವಿಚಾರಣೆಯ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.