ಕಾಶ್ಮೀರದಲ್ಲಿ ನಡೆದ ೨ ಪ್ರತ್ಯೇಕ ಗುಂಡಿನ ದಾಳಿಯಲ್ಲಿ ೪ ಭಯೋತ್ಪಾದಕರು ಹತ

೫ ಎಕೆ-೪೭ ರೈಫಲ, ೫ ಪಿಸ್ತೂಲ ಮತ್ತು ೭೦ ಗ್ರೆನೆಡ ಜಪ್ತ

೩-೪ ಭಯೋತ್ಪಾದಕರನ್ನು ಕೊಲ್ಲುವುದರಿಂದ) ಮೂಲಕ ಭಯೋತ್ಪಾದನೆ ಮುಗಿಯುವದಿಲ್ಲ, ಆದರೆ ಅದರ ನಿರ್ಮಾಪಕನಾಗಿರುವ ಪಾಕಿಸ್ತಾನವನ್ನು ನಾಶಗೊಳಿಸುವುದು ಅವಶ್ಯಕ!

ಸಾಂದರ್ಭಿಕ ಚಿತ್ರ

ಉರಿ (ಜಮ್ಮು-ಕಾಶ್ಮೀರ) – ಇಲ್ಲಿಯ ರಾಮಪುರ ಸೆಕ್ಟರ ಹತ್ತಿರವಿರುವ ಗಡಿಯಲ್ಲಿ ಒಳ ನುಸುಳುತ್ತಿದ್ದ ೩ ಜಿಹಾದಿ ಭಯೋತ್ಪಾದಕರನ್ನು ಭಾರತೀಯ ಸೈನ್ಯವು ಕೊಂದುಹಾಕಿದೆ. ಅವರಿಂದ ೫ ಎಕೆ-೪೭ ರೈಫಲ, ೫ ಪಿಸ್ತೂಲ ಮತ್ತು ೭೦ ಗ್ರೆನೆಡ ಜಫ್ತಿ ಮಾಡಲಾಗಿದೆ. ಇಲ್ಲಿಯ ಅರಣ್ಯದಲ್ಲಿ ೬ ಭಯೋತ್ಪಾದಕರು ಅಡಗಿರುವ ಬಗ್ಗೆ ಮಾಹಿತಿ ಸೈನ್ಯಕ್ಕೆ ಸಿಕ್ಕ ನಂತರ ನಡೆಸಿದ ಶೋಧಕಾರ್ಯದ ಸಮಯದಲ್ಲಿ ಭಯೋತ್ಪಾದಕರು ಸೈನ್ಯದ ಮೇಲೆ ಗುಂಡಿನ ದಾಳಿ ನಡೆಸಿದಾಗ ಆದ ಚಕಮಕಿಯಲ್ಲಿ ಈ ಭಯೋತ್ಪಾದಕರು ಹತರಾದರು. ಇತರ ೩ ಭಯೋತ್ಪಾದಕರು ಅಲ್ಲಿಂದ ಪಲಾಯನಗೈದಿದ್ದಾರೆ. ಸೈನಿಕರು ಅವರನ್ನು ಹುಡುಕುತ್ತಿದ್ದಾರೆ. ಈ ಚಕಮಕಿಯಾಗುವ ಮೊದಲು ಶೋಪಿಯಾದಲ್ಲಿಯ ಚಿತ್ರಾಗಾಮ ಎಂಬ ಊರಿನಲ್ಲಾದ ಇತರ ಒಂದು ಚಕಮಕಿಯಲ್ಲಿ ಅನಾಯತ ಅಹಮದ ಡಾರ ಎಂಬ ಭಯೊತ್ಪಾದಕನು ಹತನಾಗಿದ್ದಾನೆ.