ಮೇರಠ (ಉತ್ತರಪ್ರದೇಶ)ದಲ್ಲಿನ ಮತಾಂತರದ ಪ್ರಕರಣದಲ್ಲಿ ಖ್ಯಾತ ಮೌಲಾನಾ ಕಲೀಮ ಸಿದ್ದಿಕಿ ಇವರ ಬಂಧನ

ಹವಾಲಾ ಪದ್ಧತಿಯಿಂದ ಸಂಗ್ರಹಿಸಿದ ಹಣವನ್ನು ಮತಾಂತರಕ್ಕಾಗಿ ಬಳಸಿರುವ ಆರೋಪ !

ದೇಶದಲ್ಲಿನ ಪ್ರತಿಯೊಬ್ಬ ಮೌಲಾನಾ, ಮೌಲ್ವಿ ಮತ್ತು ಇಮಾಮರ ಮೇಲೆ ಗಮನವಿಡುವುದು ಅವಶ್ಯಕತೆಯಿದೆ, ಎಂದು ಯಾರಾದರೂ ಮನವಿ ಮಾಡಿದರೆ ಅದರಲ್ಲಿ ಆಶ್ಚರ್ಯ ಪಡಬೇಕಾಗಿಲ್ಲ!

ಮೇರಠ (ಉತ್ತರಪ್ರದೇಶ) – ಮತಾಂತರದ ಪ್ರಕರಣದಲ್ಲಿ ಉತ್ತರಪ್ರದೇಶದ ಭಯೋತ್ಪಾದನಾ ವಿರೋಧಿ ಘಟಕವು ೬೪ ವರ್ಷದ ಮೌಲಾನಾ (ಇಸ್ಲಾಮೀ ಅಧ್ಯಯನಕಾರ) ಕಲೀಮ ಸಿದ್ಧಿಕಿ ಇವರನ್ನು ಬಂಧಿಸಿದೆ. ಮೌಲಾನಾ ಕಲೀಮ ಸಿದ್ಧಿಕಿ ಇವರು ’ಗ್ಲೋಬಲ್ ಪೀಸ್ ಸೆಂಟರ್’ನ ಅಧ್ಯಕ್ಷರಾಗಿದ್ದಾರೆ. ಹಾಗೆಯೇ ಅವರು ’ಜಮೀಯತ-ಎ-ವಲಿಉಲ್ಲಾಹ’ ಸಂಘಟನೆಯ ಅಧ್ಯಕ್ಷರೂ ಆಗಿದ್ದಾರೆ. ಈ ಪ್ರಕರಣದಲ್ಲಿ ಈ ಹಿಂದೆ ಮುಫ್ತಿ ಕಾಜಿ ಮತ್ತು ಉಮರ ಗೌತಮ ಈ ಇಬ್ಬರನ್ನು ಬಂಧಿಸಲಾಗಿತ್ತು. ಈ ಇಬ್ಬರೂ ಕಲೀಮ ಸಿದ್ಧಿಕಿಯ ಸಂಪರ್ಕದಲ್ಲಿದ್ದರು. ವಿದೇಶಗಳಿಂದ ಕಲೀಮ ಸಿದ್ಧಿಕಿಯವರ ಖಾತೆಯಲ್ಲಿ ಕೋಟ್ಯಾಂತರ ರೂಪಾಯಿ ಜಮೆಯಾಗಿರುವ ಆರೋಪವಿದೆ. ಹವಾಲಾ ಪದ್ಧತಿಯಿಂದ ಸಂಗ್ರಹಿಸಲಾದ ಈ ಹಣವನ್ನು ಸಿದ್ದಿಕಿಯವರು ಮತಾಂತರಕ್ಕಾಗಿ ಬಳಸುತ್ತಿದ್ದರು.

೧. ಮೌಲಾನಾ ಸಿದ್ಧಿಕಿ ಇವರು ಇತರ ಧರ್ಮೀಯರಿಗೆ ಆಮಿಷಗಳನ್ನು ಒಡ್ಡಿ ಮತಾಂತರಗೊಳಿಸಲು ಪ್ರಯತ್ನಿಸುತ್ತಿದ್ದರು. ಅವರು ಇತರ ಮದರಸಾಗಳಿಗೆ ಆರ್ಥಿಕ ಸಹಾಯ ನೀಡುತ್ತಿದ್ದರು. ವಿದೇಶಗಳಿಂದ ಹವಾಲಾ ಪದ್ಧತಿಯಲ್ಲಿ ಈ ಕೆಲಸಗಳಿಗಾಗಿ ಹಣ ಸಂಗ್ರಹ ಮಾಡಲಾಗುತ್ತಿತ್ತು. ಬಹರಿನನಿಂದ ಸಿದ್ಧಿಕಿ ಅವರ ಖಾತೆಗೆ ಸುಮಾರು ಒಂದೂವರೆ ಕೋಟಿ ರೂಪಾಯಿ ಬಂದಿತ್ತು. ಅವರ ಖಾತೆಗೆ ವಿದೇಶಗಳಿಂದ ಒಟ್ಟು ೩ ಕೋಟಿ ರೂಪಾಯಿ ಬಂದಿದೆ.

೨. ಸಪ್ಟೆಂಬರ್ ೭ ರಂದು ಮುಂಬೈಯಲ್ಲಿ ಸರಸಂಘಚಾಲಕರಾದ ಡಾ. ಮೋಹನ ಭಾಗವತರು ಆಯೋಜಿಸಿದ ’ರಾಷ್ಟ್ರ ಪ್ರಥಮ ಮತ್ತು ರಾಷ್ಟ್ರ ಸರ್ವತೋಪರಿ’ ಈ ಕಾರ್ಯಕ್ರಮದಲ್ಲಿ ಮೌಲಾನಾ ಸಿದ್ದಿಕಿಯವರೂ ಸಹಭಾಗಿಯಾಗಿದ್ದರು. ಈ ಮೊದಲು ನಟಿ ಸನಾ ಖಾನಳ ನಿಕಾಹ ಮಾಡಿಸಿದ್ದಕ್ಕಾಗಿ ಮೌಲಾನಾ ಸಿದ್ದಿಕಿಯವರು ಚರ್ಚೆಯಲ್ಲಿದ್ದರು.