ಸ್ವಾತಂತ್ರ್ಯ ದೊರಕಿ 74 ವರ್ಷಗಳ ಬಳಿಕವೂ ಭಾರತೀಯ ನ್ಯಾಯವಸ್ಥೆಯ ಭಾರತೀಕರಣವಾಗಿಲ್ಲ ಎಂಬುದು ಇಲ್ಲಿಯವರೆಗಿನ ಸರ್ವಪಕ್ಷೀಯ ಆಡಳಿತಗಾರರಿಗೆ ಲಜ್ಜಾಸ್ಪದ ! – ಸಂಪಾದಕರು
ನವ ದೆಹಲಿ – ನ್ಯಾಯವ್ಯವಸ್ಥೆಯ ಭಾರತೀಕರಣವಾಗುವುದು ಕಾಲದ ಅವಶ್ಯಕತೆಯಾಗಿದೆ . ನ್ಯಾಯದಾನ ವ್ಯವಸ್ಥೆಯು ಇನ್ನೂ ಹೆಚ್ಚು ಪ್ರಭಾವಿಯಾಗಬೇಕು. ಅದರ ಜೊತೆಗೆ ಅದು ಎಲ್ಲರಿಗೂ ಸಹಜವಾಗಿ ಲಭ್ಯವಾಗಬೇಕು, ಎಂದು ಮುಖ್ಯನ್ಯಾಯಾಧೀಶರಾದ ಎನ್.ವ್ಹೀ. ರಮಣಾರವರು ಅಭಿಪ್ರಾಯವನ್ನು ವ್ಯಕ್ತ ಪಡಿಸಿದರು. ಸರ್ವೋಚ್ಚ ನ್ಯಾಯಾಲಯದ ದಿವಂಗತ ನ್ಯಾಯಮೂರ್ತಿಗಳಾದ ಮೋಹನ ಎಮ್. ಶಾಂತಾನಾಗೌದರರ ಶ್ರದ್ಧಾಂಜಲಿಯ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
Need to Indianise judiciary to make it litigant-friendly: CJI Ramana
READ: https://t.co/beoaMEjVYa pic.twitter.com/ENIqnNfrdh
— The Times Of India (@timesofindia) September 19, 2021
ಮುಖ್ಯ ನ್ಯಾಯಾಧೀಶರು ಮಂಡಿಸಿದ ಅಂಶಗಳು
ಎಷ್ಟೋಸಲ ನ್ಯಾಯವ್ಯವಸ್ಥೆಯು ಜನ ಸಾಮಾನ್ಯರಿಗೆ ಅಡಚಣೆಯದ್ದಾಗಿರುತ್ತದೆ !
ದೇಶದಲ್ಲಿನ ನ್ಯಾಯವ್ಯವಸ್ಥೆಯು ದಾವೆ ಹೂಡುವವರನ್ನು ಕೇಂದ್ರಸ್ಥಾನದಲ್ಲಿರಿಸಬೇಕು. ಅದೇ ರೀತಿ ನ್ಯಾಯದಾನದಲ್ಲಿ ಸುಲಭತೆ ತರುವುದು ಕೂಡ ಮಹತ್ವವಾಗಿದೆ. ಎಷ್ಟೋ ಸಲ ನಮ್ಮ ನ್ಯಾಯವ್ಯವಸ್ಥೆಯು ಜನಸಾಮಾನ್ಯರಿಗೆ ಅಡಚಣೆಯನ್ನು ಹುಟ್ಟಿಸುವಂತಹದ್ದಾಗಿರುತ್ತದೆ.
ನಮ್ಮ ಪದ್ಧತಿ, ನಿಯಮಗಳು ಇಂದಿಗೂ ವಸಾಹತುವಾದದ ಕಾಲದ್ದಾಗಿವೆ !
ಈಗ ನ್ಯಾಯದಾನಕ್ಕಾಗಿ ಬಳಸಲಾಗುವ ಪದ್ಧತಿಯು ನಮಗೆ ಅನುಕೂಲವಾಗಿಲ್ಲ. ನಮ್ಮ ಪದ್ಧತಿ, ನಿಯಮಗಳು ಎಲ್ಲವೂ ಇನ್ನೂ ವಸಾಹತು ಕಾಲದ್ದಾಗಿವೆ. ಅದರಿಂದ ಭಾರತೀಯ ನಾಗರಿಕರ ಬೇಡಿಕೆಗಳನ್ನು ಈಡೇರಿಸಲು ಆಗುತ್ತಿಲ್ಲ, ಮಾತ್ರವಲ್ಲ ಹೆಚ್ಚಾಗಿ ಅಡಚಣೆಗಳೇ ಉದ್ಭವಿಸುತ್ತವೆ.
ನ್ಯಾಯಾಲಯದಲ್ಲಿನ ಎಲ್ಲಾ ಕೆಲಸಗಳು ಆಂಗ್ಲದಲ್ಲಿ ನಡೆಯುವುದರಿಂದ ಜನರಿಗೆ ಅದು ತಿಳಿಯುವುದಿಲ್ಲ !
ಯಾವಾಗ ನಾವು ಭಾರತೀಕರಣ ಎಂದು ಹೇಳುತ್ತೇವೋ ಅದರಲ್ಲಿ ಸಮಾಜದಲ್ಲಿನ ವ್ಯವಹಾರಿಕ ಮಟ್ಟದಲ್ಲಿ ಯೋಗ್ಯವಾಗಿರುವಂತಹ ಪದ್ಧತಿಯನ್ನು ಬಳಸುವುದು ಅಪೇಕ್ಷಿತವಿರುತ್ತದೆ. ನ್ಯಾಯವ್ಯವಸ್ಥೆಯಲ್ಲಿ ಸ್ಥಾನೀಕೀಕರಣ ಅಗತ್ಯವಾಗಿದೆ. ಒಂದುವೇಳೆ ಗ್ರಾಮೀಣ ಭಾಗವಾಗಿದ್ದರೆ ಹಾಗೂ ಅಲ್ಲಿನ ಕೌಟುಂಬಿಕ ವಾದವು ನ್ಯಾಯಾಲಯದ ಮುಂದೆ ಬಂದರೆ, ಆಗ ಸಂಬಂಧಿತರಿಗೆ ಯುಕ್ತಿವಾದವು ಏನೂ ಅರ್ಥವಾಗುವುದಿಲ್ಲ, ಏಕೆಂದರೆ ಅದು ಆಂಗ್ಲದಲ್ಲಿರುತ್ತದೆ.
ನ್ಯಾಯದಾನದ ಪದ್ಧತಿಯು ಪಾರದರ್ಶಕ ಹಾಗೂ ಪ್ರಭಾವಶಾಲಿಯಾಗಿರಬೇಕು !
ಇತ್ತೀಚೆಗೆ ತೀರ್ಪುಪತ್ರಕ್ಕೆ ಸಾಕಷ್ಟು ಕಾಲ ಹಿಡಿಸುತ್ತಿದೆ. ಆದ್ದರಿಂದ ಕಕ್ಷಿದಾರರ ಸ್ಥಿತಿ ತುಂಬಾ ಇಕ್ಕಟ್ಟಿನದ್ದಾಗಿರುತ್ತದೆ. ತೀರ್ಪುಪತ್ರದ ಪರಿಣಾಮವನ್ನು ಅರ್ಥಮಾಡಿಕೊಳ್ಳಲು ಹಣ ಖರ್ಚು ಮಾಡಬೇಕಾಗುತ್ತದೆ, ಆದ್ದರಿಂದ ನ್ಯಾಯಾಲಯವು ಆ ಕಕ್ಷಿದಾರರು ಅಥವಾ ದಾವೆದಾರರಿಗೆ ಅನುಕೂಲವಾಗಿರಬೇಕು. ನ್ಯಾಯವಾದದ ಪದ್ಧತಿಯು ಪಾರದರ್ಶಕ ಹಾಗೂ ಪ್ರಭಾವಶಾಲಿಯಾಗಿರಬೇಕು.
ನ್ಯಾಯಾಲಯಕ್ಕೆ ಹೋಗುವಾಗ ನ್ಯಾಯಾಧೀಶರ ಬಗ್ಗೆ ಭಯವಿರಬಾರದು !
ಪ್ರಕ್ರಿಯಾತ್ಮಕ ಅಡಚಣೆಗಳು ಅನೇಕ ಸಲ ನ್ಯಾಯ ಸಿಗಲು ಅಡಚಣೆಗಳನ್ನು ತಂದೊಡ್ಡುತ್ತವೆ. ಸಾಮಾನ್ಯರು ನ್ಯಾಯಾಲಯಕ್ಕೆ ಹೋಗುವಾಗ ನ್ಯಾಯಾಧೀಶರ ಬಗ್ಗೆ ಅವರಿಗೆ ಭಯವಿರಬಾರದು.
ನಾಗರಿಕರಲ್ಲಿ ಸತ್ಯ ಹೇಳುವ ಧೈರ್ಯ ಉಂಟಾಗಬೇಕು !
ನಾಗರಿಕರಲ್ಲಿ ಸತ್ಯ ಹೇಳುವ ಧೈರ್ಯ ಉಂಟಾಗಬೇಕು. ನ್ಯಾಯವಾದಿಗಳು ಹಾಗೂ ನ್ಯಾಯಾಧಿಶರು ಕಕ್ಷಿದಾರರಿಗೆ ಅನುಕೂಲ ವಾತಾವರಣವನ್ನು ಒದಗಿಸಿಕೊಡಬೇಕು. ನ್ಯಾಯ ಪಡೆಯಲು ಇಚ್ಛಿಸುವವರು ಹಾಗೂ ಕಕ್ಷಿದಾರರು ಆ ವ್ಯವಸ್ಥೆಯ ಕೇಂದ್ರಬಿಂದುವಾಗಿರಬೇಕು. ಮಧ್ಯವರ್ತಿಗಳು, ಸಮನ್ವಯದಂತಹ ಪರ್ಯಾಯ ಮಾರ್ಗವನ್ನು ಅವಲಂಬಿಸಲು ಪ್ರಯತ್ನಿಸಬೇಕು. ಇದರಿಂದ ಖಟ್ಲೆಗಳ ಸಂಖ್ಯೆಯ ಒತ್ತಡ ಕಡಿಮೆಯಾಗುತ್ತದೆ. ಸಾಧನಗಳ ಉಳಿತಾಯವಾಗುತ್ತದೆ.