ಅಯೋಧ್ಯೆಯ ಶ್ರೀರಾಮ ಮಂದಿರದ ಅಡಿಪಾಯ ಸಿದ್ಧ!

ಅಯೋಧ್ಯೆ(ಉತ್ತರಪ್ರದೇಶ) – ಅಯೋಧ್ಯೆಯಲ್ಲಿನ ಶ್ರೀರಾಮ ಜನ್ಮಭೂಮಿಯಲ್ಲಿನ ಶ್ರೀರಾಮ ಮಂದಿರ ನಿರ್ಮಾಣದ ಮೊದಲ ಹಂತ ಪೂರ್ಣವಾಗಿದೆ. ಶ್ರೀರಾಮಮಂದಿರದ ಅಡಿಪಾಯವು ಸಿದ್ಧವಾಗಿದೆ. ಮಂದಿರದ ಎರಡನೆಯ ಹಂತವನ್ನು ಎರಡು ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು, ಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‍ನ ನಿರ್ದೇಶಕ ಚಂಪತ ರಾಯ ಇವರು ಮಾಹಿತಿ ನೀಡಿದ್ದಾರೆ.

ಚಂಪತ ರಾಯ ಇವರು, ಶ್ರೀರಾಮ ಮಂದಿರವು 360 ಅಡಿ ಉದ್ದ, 235 ಅಡಿ ಅಗಲ, ಮತ್ತು 161 ಅಡಿ ಎತ್ತರ ಇರಲಿದೆ. ಮಂದಿರ 3 ಅಂತಸ್ತಿನದಾಗಿರುತ್ತದೆ. ನೆಲಮಾಳಿಗೆಯಲ್ಲಿ 160, ಮೊದಲನೆಯ ಮಾಳಿಗೆಯಲ್ಲಿ 132 ಮತ್ತು ಎರಡನೇ ಮಾಳಿಗೆಯಲ್ಲಿ 74 ಕಂಬಗಳು ಇರಲಿವೆ. ಮಂದಿರಕ್ಕೆ ಒಂದು ಮುಖ್ಯ ಶಿಖರ ಇದ್ದು ಉಳಿದವು 5 ಉಪ ಶಿಖರಗಳು ಮತ್ತು ಅಷ್ಟೇ ಮಂಟಪಗಳು ಇರಲಿವೆ. ಅದರ ಜೊತೆಗೆ ಒಂದು ಮುಖ್ಯ ಮಹಾದ್ವಾರ ಸಹಿತ 11 ಉಪ ದ್ವಾರಗಳು ಇರಲಿವೆ. ಮಂದಿರ ಪೂರ್ಣವಾದ ನಂತರ 2.75 ಎಕರೆ ಹಾಗೂ ಮಂದಿರದ ಸಂಪೂರ್ಣ ಪರಿಸರ 6.5 ಎಕರೆ ಇರಲಿದೆ. ಶ್ರೀರಾಮ ಜನ್ಮಭೂಮಿ ಟ್ರಸ್ಟ್ ನ ಬಳಿ ಅಂದಾಜು ನೂರು ಎಕರೆಯಷ್ಟು ಜಾಗವಿದೆ. ದೇಶಾದ್ಯಂತ ಶ್ರೀರಾಮ ಭಕ್ತರು ಮಂದಿರ ನಿರ್ಮಾಣಕ್ಕಾಗಿ ಅಂದಾಜು 4 ಸಾವಿರ ಕೋಟಿ ರೂಪಾಯಿಗಳನ್ನು ದಾನ ನೀಡಿದ್ದಾರೆ. ಇದರಲ್ಲಿ ಪ್ರತಿ ತಿಂಗಳು 15 ಲಕ್ಷ ರೂಪಾಯಿ ಸೇರ್ಪಡೆಯಾಗುತ್ತಿದೆ ಎಂದು ಹೇಳಿದ್ದಾರೆ.