ಇಸ್ಲಾಮಿಕ್ ಸ್ಟೇಟ್‍ನ ವಿಚಾರಧಾರೆಯ ಪ್ರಸಾರ ಮಾಡುವವರನ್ನು ತಡೆಗಟ್ಟಲು ರಾಷ್ಟ್ರೀಯ ತನಿಖಾ ದಳದಿಂದ ಸಂಪರ್ಕ ಸಂಖ್ಯೆ ಘೋಷಣೆ

* ಇಂತಹ ದೇಶದ್ರೋಹಿಗಳನ್ನು ಬಂಧಿಸಿ ತಕ್ಷಣವೇ ಗಲ್ಲಿಗೇರಿಸಿದರೆ ಯಾರೂ ದೇಶದ್ರೋಹಗೈಯ್ಯುವ ಧೈರ್ಯ ತೋರಿಸಲಾರರು ! – ಸಂಪಾದಕರು 

* ಒಂದು ಕಡೆ ಪೊಲೀಸರು ಇಸ್ಲಾಮಿಕ್ ಸ್ಟೇಟ್‍ನಲ್ಲಿ ಭಾಗಿಯಾಗುವವರಿಗೆ ಉಪದೇಶ ನೀಡುತ್ತಾರೆ, ಇನ್ನೊಂದು ಕಡೆ ಅವರನ್ನು ತಡೆಯಲು ಸಂಪರ್ಕ ಸಂಖ್ಯೆ ಘೋಷಿಸುತ್ತಾರೆ ! ಇಂತಹ ಪೊಲೀಸರು ಎಂದಾದರೂ ಭಯೋತ್ಪಾದಕರನ್ನು ಸದೆಬಡಿಯಬಲ್ಲರೇನು ? – ಸಂಪಾದಕರು 

ನವದೆಹಲಿ – ಇಸ್ಲಾಮಿಕ್ ಸ್ಟೇಟ್ ಈ ಕಟ್ಟರ ಜಿಹಾದಿ ಭಯೋತ್ಪಾದಕ ಸಂಘಟನೆಯ ವಿಚಾರಧಾರೆಯ ಪ್ರಸಾರ ಮಾಡುವವರನ್ನು ತಡೆಯಲು ರಾಷ್ಟ್ರೀಯ ತನಿಖಾ ದಳವು 011 -24368800 ಸಂಪರ್ಕ ಸಂಖ್ಯೆಯನ್ನು ಘೋಷಣೆ ಮಾಡಿದೆ. ಈ ಕ್ರಮಾಂಕಕ್ಕೆ ದೂರನ್ನು ದಾಖಲಿಸಬಹುದು. ರಾಷ್ಟ್ರೀಯ ತನಿಖಾ ದಳವು ಸಪ್ಟೆಂಬರ್ 16 ರಂದು ತಮಿಳುನಾಡಿನ ಒಂದು ಪ್ರಕರಣದಲ್ಲಿ ಒಬ್ಬ ಆರೋಪಿಯನ್ನು ಬಂಧಿಸಿತ್ತು. ಆತನ ವಿಚಾರಣೆಯಲ್ಲಿ ಆತನು ಇತರ ಕೆಲವು ಜನರ ಸಹಾಯದಿಂದ ಭಾರತದಲ್ಲಿ ಇಸ್ಲಾಮಿಕ್ ಸ್ಟೇಟ್ ಸ್ಥಾಪಿಸಲು, ಹಾಗೂ ಭಾರತ ಸಹಿತ ಸಂಪೂರ್ಣ ವಿಶ್ವದಲ್ಲಿ ಷರಿಯತ್ ಕಾನೂನು ಜಾರಿಮಾಡುವ ಷಡ್ಯಂತ್ರ ರಚಿಸಿರುವುದು ಬೆಳಕಿಗೆ ಬಂದಿದೆ. ಈ ಮೊದಲೂ ದೇಶದಲ್ಲಿ ಇಸ್ಲಾಮಿಕ್ ಸ್ಟೇಟ್‍ನ ಬೆಂಬಲಿಗರು ದೊಡ್ಡ ಪ್ರಮಾಣದಲ್ಲಿ ಕಂಡು ಬಂದಿದ್ದರು. ಈ ಹಿನ್ನಲೆಯಲ್ಲಿ ರಾಷ್ಟ್ರೀಯ ತನಿಖಾ ದಳವು ಮೇಲಿನ ಸಂಪರ್ಕ ಸಂಖ್ಯೆಯನ್ನು ಘೋಷಿಸಿದೆ.