ದೇವಸ್ಥಾನದ ಭೂಮಿಯನ್ನು ಕಬಳಿಸುವವರನ್ನು ‘ಗುಂಡಾ ಕಾನೂನಿ’ನ ಅಂತರ್ಗತ ಬೇಡಿ ತೊಡಿಸಿ ! – ಮದ್ರಾಸ್ ಉಚ್ಚ ನ್ಯಾಯಾಲಯದ ಆದೇಶ

* ಈ ಆದೇಶ ಮೊದಲೇ ಸಿಕ್ಕಿದ್ದರೆ, ದೇವಾಲಯಗಳ ಭೂಮಿಯ ರಕ್ಷಣೆಯಾಗುತ್ತಿತ್ತು ! – ಸಂಪಾದಕರು 

* ದೇವಾಲಯಗಳ ಭೂಮಿಯನ್ನು ಕಬಳಿಸುವುದು, ಅಂದರೆ ಸಾಕ್ಷಾತ್ ದೇವರ ದರಬಾರಿನಲ್ಲಿ ಕಳ್ಳತನ ಮಾಡಿದಂತೆ ಆಗಿದೆ ! ಅಂತಹ ಅಕ್ಷಮ್ಯ ಪಾಪದ ಬಗ್ಗೆ ಯಾರಿಗೂ ಏನೂ ಅನಿಸುವುದಿಲ್ಲ ಎಂಬುದು ಹಿಂದೂಗಳ ಪರಮಾವಧಿಯ ಅಧೋಗತಿಯ ಲಕ್ಷಣವೇ ಸರಿ ! ಹಿಂದೂಗಳಿಗೆ ಧರ್ಮಶಿಕ್ಷಣವಿಲ್ಲದ ಕಾರಣ ಅವರು ದೇವಾಲಯದ ಭೂಮಿಯನ್ನು ಕಬಳಿಸುತ್ತಾರೆ, ಹಾಗೂ ಉಳಿದ ಹಿಂದೂಗಳು ‘ಅದಕ್ಕೂ ನಮಗೂ ಏನೂ ಸಂಬಂಧವಿಲ್ಲ’ ಎಂಬಂತೆ ವರ್ತಿಸುತ್ತಾರೆ ! ಹಿಂದೂಗಳಲ್ಲಿ ಎಷ್ಟು ಜಾಗರೂಕತೆ ನಿರ್ಮಾಣವಾಗುವುದು ಅಗತ್ಯವಿದೆ, ಎಂಬುದು ಇದರಿಂದ ಗಮನಕ್ಕೆ ಬರುತ್ತದೆ ! – ಸಂಪಾದಕರು 

* ಇಂದು ದೇವಸ್ಥಾನಗಳ ಸರಕಾರೀಕರಣ ಮಾಡುವ ಕಾನೂನು ಇದೆ; ಆದರೆ ಹಿಂದೂ ರಾಷ್ಟ್ರದಲ್ಲಿ ದೇವಸ್ಥಾನಗಳನ್ನು ಭಕ್ತರ ಅಧೀನಕ್ಕೊಪ್ಪಿಸುವ ಕಾನೂನು ಇರಲಿದೆ.- ಸಂಪಾದಕರು 

* ಸ್ವಮತದ ಪ್ರಾರ್ಥನಾಸ್ಥಳಕ್ಕಾಗಿ ಬೇರೆಯವರ ಭೂಮಿಯನ್ನು ಕಬಳಿಸುವ ಮತಾಂಧರೆಲ್ಲಿ, ಹಾಗೂ ತಮ್ಮ ಸ್ವಾರ್ಥಕ್ಕಾಗಿ ಸ್ವಶ್ರದ್ಧೆಯ ದೇವಸ್ಥಾನಗಳ ಭೂಮಿಯನ್ನು ಕಬಳಿಸುವ ಹಿಂದೂಗಳೆಲ್ಲಿ ! -ಸಂಪಾದಕರು 

ಚೆನ್ನೈ – ಯಾರು ರಾಜ್ಯದಲ್ಲಿ ದೇವಾಲಯಗಳ ಭೂಮಿಯನ್ನು ಕಬಳಿಸಲಾಗಿದೆಯೋ ಹಾಗೂ ನಿರ್ಧಾರಿತ ಸಮಯದೊಳಗೆ ಆ ಭೂಮಿಯನ್ನು ದೇವಾಲಯಕ್ಕೆ ಒಪ್ಪಿಸಲು ಹಿಂದು ಮುಂದೆ ಮಾಡುತ್ತಿರುವರೋ, ಅವರನ್ನು ‘ಗುಂಡಾ ಕಾನೂನಿ’ನ ಅಂತರ್ಗತ ಬೇಡಿ ತೊಡಿಸಿ, ಎಂದು ಮದ್ರಾಸ್ ಉಚ್ಚ ನ್ಯಾಯಾಲಯವು ‘ಹಿಂದೂ ಧಾರ್ಮಿಕ ಮತ್ತು ಧಾರ್ಮಿಕ ದತ್ತಿ ಅರ್ಪಣೆ ವಿಭಾಗ’ಕ್ಕೆ (‘ಹಿಂದೂ ರಿಲಿಜಿಯಸ್ ಆಂಡ್ ಚ್ಯಾರಿಟೇಬಲ್ ಎನ್‍ಡೋಮೆಂಟ್‍ಸ ಡಿಪಾರ್ಟ್‍ಮೆಂಟ್’ಗೆ) ಸ್ಪಷ್ಟವಾಗಿ ಆದೇಶ ನೀಡಿದೆ. ಆ ರೀತಿಯಲ್ಲಿ ಸಾರ್ವಜನಿಕ ಅಧಿಸೂಚನೆ ತೆಗೆಯುವಂತೆ ಕೂಡ ನ್ಯಾಯಾಲಯವು ಸ್ಪಷ್ಟ ಪಡಿಸಿದೆ.

ನ್ಯಾಯಮೂರ್ತಿ ಎಸ್. ಸುಬ್ರಹ್ಮಣ್ಯಮ್ ಇವರು ಆದೇಶಿಸುತ್ತಾ ಈ ರೀತಿ ಹೇಳಿದ್ದಾರೆ –

1. ರಾಜ್ಯ ಸರಕಾರವು, “ಹಿಂದೂ ಧಾರ್ಮಿಕ ಮತ್ತು ಧಾರ್ಮಿಕ ದತ್ತಿ ಅರ್ಪಣೆ ವಿಭಾಗ’ ಹಾಗೂ ಪೊಲೀಸ್ ಮಹಾಸಂಚಾಲಕರು ಆ ರೀತಿ ಭೂಮಿ ಕಬಳಿಸುವವರ ವಿರುದ್ಧ ಗುಂಡಾ ಕಾನೂನಿನ ಅಂತರ್ಗತ ಕಾರ್ಯಾಚರಣೆ ನಡೆಸಲು ಯಾವುದೇ ರೀತಿಯಲ್ಲಿ ಸಂಕೋಚ ಪಟ್ಟುಕೊಳ್ಳುವುದು ಬೇಡ.

2. ಯಾವ ದೇವಾಲಯದ ಭೂಮಿಯ ಮೇಲೆ ಅತಿಕ್ರಮಣ ಮಾಡಲಾಗಿದೆಯೋ, ಆ ಭೂಮಿಯನ್ನು ಮರಳಿ ಪಡೆದುಕೊಳ್ಳಲು ಒಂದು ವಿಶೇಷ ದಳವನ್ನು ರಚಿಸಬೇಕು. ಅಷ್ಟೇ ಅಲ್ಲ, ಸತ್ಯನಿಷ್ಠ ಹಾಗೂ ಕರ್ತವ್ಯದಕ್ಷ ಅಧಿಕಾರಿಗಳಿಗೆ ಮಾತ್ರ ಅದರಲ್ಲಿ ಸ್ಥಾನ ನೀಡಬೇಕು. ದಳದಲ್ಲಿರುವ ಎಲ್ಲಾ ಅಧಿಕಾರಿಗಳ ಪಟ್ಟಿಯನ್ನು ರಾಜ್ಯದಲ್ಲಿನ ಎಲ್ಲಾ ದೇವಾಲಯಗಳು ಹಾಗೂ ‘ಹಿಂದು ಧಾರ್ಮಿಕ ಹಾಗೂ ಧರ್ಮಾದಾಯ ದೇಣಗಿ ವಿಭಾಗ’ದ ಕಾರ್ಯಾಲಯಗಳಲ್ಲಿ ದಪ್ಪ ಅಕ್ಷರಗಳಲ್ಲಿ ಬರೆದು ಅಂಟಿಸಿರಿ, ಇದರಿಂದ ದೇವಾಲಯದ ಭೂಮಿಯನ್ನು ರಕ್ಷಿಸಲು ಇಚ್ಛೆಯಿರುವ ಜನರು ಸಂಬಂಧಪಟ್ಟ ಅಧಿಕಾರಿಗಳ ಬಳಿ ಬಂದು ತಕರಾರು ನೀಡಲು ಸಾಧ್ಯವಾಗುವುದು.

3. ನ್ಯಾಯಾಲಯವು ಮುಂದೆ ಹೀಗೆ ಆದೇಶ ನೀಡಿದೆ, ದೇವಾಲಯದ ಧನವನ್ನು ದುರುಪಯೋಗಿಸುವುದು ಸಹ ಒಂದು ಅಪರಾಧವಾಗಿದ್ದು ರಾಜ್ಯ ಸರಕಾರವು ಈ ವಿಷಯದಲ್ಲಿ ಸಂಬಂಧಪಟ್ಟವರ ವಿರುದ್ಧ ಅಪರಾಧ ನೋಂದಾಯಿಸಿ ಪ್ರಕರಣವನ್ನು ದಾಖಿಲಿಸಬೇಕು. ಸರಕಾರೀ ಅಧಿಕಾರಿಗಳು ಅವರ ಕರ್ತವ್ಯನಿಭಾಯಿಸುವಾಗ ಕೆಲಸಗಳ್ಳತನ ಮಾಡುವ ಅಂಶವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು, ಹಾಗೂ ಅವರ ಮೇಲೆ ಕ್ರಮ ಕೈಗೊಳ್ಳಬೇಕು.