ರಾಷ್ಟ್ರೀಯ ಮಟ್ಟದ ಮಹಿಳಾ ಖೊ-ಖೊ ಕ್ರೀಡಾಪಟುವಿನ ಮೇಲೆ ಬಲಾತ್ಕಾರದ ಪ್ರಯತ್ನ ವಿಫಲವಾದಗ ಅವಳನ್ನು ಕೊಲೆಗೈದ ಮತಾಂಧ

ಇಂತಹ ವಾಸನಾಂಧನ ಮೇಲೆ ತ್ವರಿತಗತಿ ನ್ಯಾಯಾಲಯದಲ್ಲಿ ಖಟ್ಲೆ ಹೂಡಿ ಅವನಿಗೆ ಗಲ್ಲು ಶಿಕ್ಷೆಯಾಗಲು ಸರಕಾರವು ಪ್ರಯತ್ನಿಸಬೇಕು !

ಬಿಜನೌರ (ಉತ್ತರಪ್ರದೇಶ) – ಇಲ್ಲಿ ರಾಷ್ಟ್ರೀಯ ಮಟ್ಟದ ಮಹಿಳಾ ಖೊ-ಖೊ ಕ್ರೀಡಾಪಟುವಿನ ಕೊಲೆ ಮಾಡಿರುವ ಪ್ರಕರಣದಲ್ಲಿ ಪೊಲೀಸರು ಶಹಜಾದ ಊರ್ಫ್ ಖಾದೀಮ ಎಂಬುವವನನ್ನು ಬಂಧಿಸಿದ್ದಾರೆ. ಶಹಜಾದನು ರೈಲು ನಿಲ್ದಾಣದ ಹತ್ತಿರ ಆ ಮಹಿಳಾ ಕ್ರೀಡಾಪಟುವನ್ನು ನಿರ್ಜನ ಸ್ಥಳಕ್ಕೆ ಎಳೆದುಕೊಂಡು ಹೋಗಿ ಅವಳ ಮೇಲೆ ಬಲಾತ್ಕಾರ ನಡೆಸಲು ಪ್ರಯತ್ನಿಸಿದ್ದನು; ಆದರೆ ಆ ಪ್ರಯತ್ನವು ವಿಫಲವಾದಾಗ ಅವಳ ವೇಲ್‌ಅನ್ನು ಅವಳ ಕುತ್ತಿಗೆಗೆ ಸುತ್ತಿ ಕೊಲೆ ಮಾಡಿರುವುದಾಗಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

ಶಹಜಾದನು ವಿವಾಹಿತನಾಗಿದ್ದು ಅವನು ಸರಣಿ ಕಳ್ಳನಾಗಿದ್ದಾನೆ. ಅವನನ್ನು ಅನೇಕ ಸಲ ಬಂಧಿಸಲಾಗಿತ್ತು. ಅವನಿಗೆ ಅಮಲು ಪದಾರ್ಥಗಳ ವ್ಯಸನವಿದೆ. (ಅನೇಕ ಸಲ ಬಂಧಿಸಿದರೂ ವ್ಯಕ್ತಿಯ ಅಪರಾಧಿ ವೃತ್ತಿ ನಾಶವಾಗುವುದಿಲ್ಲ. ಅದಕ್ಕಾಗಿ ಅಂತಹ ವೃತ್ತಿ ನಾಶವಾಗುವ ತನಕ ಶಿಕ್ಷೆ ವಿಧಿಸಬೇಕು, ಆಗಲೇ ಸಮಾಜದಲ್ಲಿ ಅಪರಾಧಿಗಳು ಕಡಿಮೆಯಾಗುವರು ! – ಸಂಪಾದಕರು)