‘ಸಮಾಜದಲ್ಲಿ ಅಸಮಾನತೆಯನ್ನು ಹುಟ್ಟಿಸಿ ಹಿಂದುತ್ವನಿಷ್ಠರಿಗೆ ಹಿಂದುರಾಷ್ಟ್ರವನ್ನು ಸ್ಥಾಪಿಸಲಿಕ್ಕಿದೆ !’ (ಅಂತೆ) – ಡಾ. ದೀಪಾ ಸುಂದರಮ್, ಡೆನ್ವರ್ ವಿಶ್ವವಿದ್ಯಾಲಯ, ಅಮೇರಿಕಾ

‘ಡಿಸಮೆಂಟಲಿಂಗ್ ಗ್ಲೋಬಲ್ ಹಿಂದುತ್ವ’ ಈ ಹಿಂದೂ ವಿರೋಧಿ ಅಂತರರಾಷ್ಟ್ರೀಯ ಆನ್‌ಲೈನ್ ಪರಿಷತ್ತಿನ ೩ ನೇ ದಿನ

  • ಹಿಂದೂ ರಾಷ್ಟ್ರ ಸ್ಥಾಪನೆಯಾದ ಮೇಲೆ ಡಾ. ದೀಪಾ ಸುಂದರಮ್ ಇವರಂತಹ ಹಿಂದುದ್ವೇಷದ ಪ್ರಸಾರ ಮಾಡುವವರ ಅಂಗಡಿಗಳು ಶಾಶ್ವತವಾಗಿ ಮುಚ್ಚಲ್ಪಡಲಿವೆ. ಅದಕ್ಕಾಗಿಯೇ ಅವರಿಗೆ ಹಿಂದೂ ರಾಷ್ಟ್ರದ ಬಗ್ಗೆ ಭಯವಾಗುತ್ತಿದೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

  • ಭಾರತದಲ್ಲಿ ಹಿಂದೂಗಳು ಬಹುಸಂಖ್ಯಾತರಾಗಿದ್ದಾರೆ; ಹಾಗಾಗಿ ಸಾಮಾಜಿಕ ಸಾಮರಸ್ಯವು ಜೋಪಾನವಾಗಿದೆ. ಹಿಂದುಗಳು ಆಕ್ರಮಣಕಾರಿಗಳಾಗಿದ್ದಿದ್ದರೆ, ಅಲ್ಪಸಂಖ್ಯಾತರು ಭಾರತದಿಂದ ಪಲಾಯನ ಮಾಡಬೇಕಾಗಿತ್ತು. ಈ ಸತ್ಯವನ್ನು ಸೈದ್ಧಾಂತಿಕ ಭಯೋತ್ಪಾದಕರಾಗಿರುವ ಡಾ. ಸುಂದರಂ ಹಿಂದುದ್ವೇಷದಿಂದಾಗಿ ಒಪ್ಪಿಕೊಳ್ಳುವುದಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

ಮುಂಬಯಿ : ಹಿಂದೂಗಳ ವಿರುದ್ಧ ನಡೆಯುವ ಗಲಭೆಗಳು, ಹಿಂದೂ ಮಹಿಳೆಯರ ಮೇಲಾಗುವ ಅತ್ಯಾಚಾರಗಳು ಮತ್ತು ಹಿಂದೂಗಳ ಹತ್ಯೆಗೆ ಜಾತ್ಯತೀತತೆಯೇ ಕಾರಣವಾಗಿದೆ, ಎಂದು ಹಿಂದುತ್ವನಿಷ್ಠರಿಗೆ ಅನಿಸುತ್ತದೆ. ‘ದಿವಂಗತ ಪ್ರಧಾನಿ ಇಂದಿರಾ ಗಾಂಧಿಯವರು ಸಂವಿಧಾನದಲ್ಲಿ ಬಳಸಿದ ‘ಜಾತ್ಯತೀತ’(ಸೆಕ್ಯುಲರ್) ಪದವನ್ನು ಬದಲಾಯಿಸಬಹುದು’, ಎಂದು ಹಿಂದುತ್ವನಿಷ್ಠರಿಗೆ ಅನಿಸುತ್ತದೆ. (ದಿವಂಗತ ಪ್ರಧಾನಿ ಇಂದಿರಾ ಗಾಂಧಿಯವರು ಸಂವಿಧಾನದಲ್ಲಿ ‘ಸೆಕ್ಯುಲರ್’ ಎಂಬ ಪದವನ್ನು ತುರುಕಿಸಿದ ಕೃತ್ಯವೇ ಅಸಂವಿಧಾನಿಕವಾಗಿದೆ. ಈ ಬಗ್ಗೆ ಹಿಂದೂ ವಿರೋಧಿಗಳು ಮಾತನಾಡಬೇಕು ! – ಸಂಪಾದಕರು) ‘ಇಸ್ಲಾಮಿ ಸಿದ್ಧಾಂತವು ಹಿಂದೂ ತತ್ತ್ವಜ್ಞಾನದ ಮೇಲೆ, ಮಹಿಳೆಯರ ಮೇಲೆ ಆಘಾತ ನಡೆಸುತ್ತಿದೆ’, ಎಂದು ಅವರು ತಿಳಿದುಕೊಳ್ಳುತ್ತಾರೆ. (ಇದರಲ್ಲಿ ತಪ್ಪೇನಿದೆ : – ಸಂಪಾದಕರು) ಹಿಂದುತ್ವನಿಷ್ಠ ಜಾತ್ಯತೀತವಾದ ಎಂಬ ಪರಿಕಲ್ಪನೆಯನ್ನು ಸಮಾಜದಲ್ಲಿ ಅಸಮಾನತೆಯನ್ನು ಹುಟ್ಟಿಸಲು ಅವರು ಉಪಯೋಗಿಸುತ್ತಿದ್ದಾರೆ. ಇಂತಹ ಅಸಮಾನತೆಯ ಮೂಲಕ ಅವರಿಗೆ ಹಿಂದೂ ರಾಷ್ಟ್ರವನ್ನು ಸ್ಥಾಪಿಸಲಿಕ್ಕಿದೆ, ಎಂದು ಅಮೆರಿಕಾದ ಡೆನ್ವರ್ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಡಾ. ದೀಪಾ ಸುಂದರಮ್ ಹೇಳಿದರು. ಡಾ. ಸುಂದರಮ್ ಇವರು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಹಿಂದೂ ಧರ್ಮದ ವಿಷಯವನ್ನು ಕಲಿಸುತ್ತಾರೆ. (ಇಂತಹ ಪ್ರಾಧ್ಯಾಪಕರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಗೆ ಹಿಂದೂ ವಿರೋಧಿ ತತ್ತ್ವಜ್ಞಾನವನ್ನೇ ಕಲಿಸುತ್ತಿರಬಹುದು, ಎಂಬುದು ಖಚಿತ. ಅಮೇರಿಕಾದಲ್ಲಿ ಹಿಂದುದ್ವೇಷವನ್ನು ಹಬ್ಬಿಸುವಲ್ಲಿ ವಿಶ್ವವಿದ್ಯಾಲಯಗಳು ಹೇಗೆ ಕಾರ್ಯನಿರ್ವಹಿಸುತ್ತಿವೆ, ಎಂಬುದು ಇದರಿಂದ ಕಂಡುಬರುತ್ತದೆ ! – ಸಂಪಾದಕರು) ಸಪ್ಟೆಂಬರ ೧೦ ರಿಂದ ೧೨ ಈ ಕಾಲಾವಧಿಯಲ್ಲಿ ವಿಶ್ವ ಮಟ್ಟದಲ್ಲಿ ‘ಡಿಸಮೆಂಟಲಿಂಗ್ ಗ್ಲೋಬಲ್ ಹಿಂದುತ್ವ’(ಜಾಗತಿಕ ಮಟ್ಟದಲ್ಲಿ ಹಿಂದುತ್ವದ ಉಚ್ಚಾಟನೆ) ಈ ‘ಆನ್‌ಲೈನ್’ ಪರಿಷತ್ತನ್ನು ಆಯೋಜಿಸಲಾಗಿತ್ತು. ಅದರ ಮೂರನೇ ದಿನದ ಮೊದಲ ಭಾಗದಲಿ ಅವರು ಮಾತನಾಡುತ್ತಿದ್ದರು. ‘ಮೋದಿ ಸರಕಾರ ಮತ್ತು ಅದರ ಹಿಂದುತ್ವದ ಪರಿಕಲ್ಪನೆಯು ಭಾರತದ ವೈವಿಧ್ಯತೆಯನ್ನು ದುರ್ಬಲಗೊಳಿಸುತ್ತದೆ’ ಎಂದು ಅವರು ಹೇಳಿದರು.

ಬಿಜೆಪಿಯು ಮಾಹಿತಿ ಮತ್ತು ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸುತ್ತಿದೆ ಎಂದು ಹಿಂದೂವಿರೋಧಿ ಪತ್ರಕರ್ತರಿಗೆ ಹೊಟ್ಟೆಯುರಿ !

ಬಿಜೆಪಿಯು ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಯೋಜನಾಬದ್ಧ ಹೂಡಿಕೆಗಳನ್ನು ಮಾಡಿದೆ. ಬಿಜೆಪಿ ಸರಕಾರವು ಪ್ರಸಾರಮಾಧ್ಯಮಗಳ ಮೇಲೆ ದಬ್ಬಾಳಿಕೆ ನಡೆಸಿ ತನ್ನದೇ ಆದ ‘ನಮೋ ಆಪ್’ ನಂತಹ ಆಪ್ ಅನ್ನು ತಯಾರಿಸಿದೆ. ಬಿಜೆಪಿಯು ‘ಮೀಡಿಯಾ ಐಟಿ ಸೆಲ್’ ಅನ್ನು ಬಹಳ ಪರಿಣಾಮಕಾರಿಯಾಗಿ ಬಳಸಿಕೊಂಡಿತು. (ಹಿಂದೂಗಳಿಗೆ ಅಭಿವ್ಯಕ್ತಿ ಸ್ವಾತಂತ್ರ್ಯದ ಪಾಠ ಹೇಳಿಕೊಡುವ ಜಾತ್ಯತೀತವಾದಿಗಳ ದ್ವಿಮುಖನೀತಿಯನ್ನು ಗಮನದಲ್ಲಿಟ್ಟುಕೊಳ್ಳಿ ! ಸದ್ಯದ ಆಧುನಿಕ ಜಗತ್ತಿನಲ್ಲಿ ಒಂದು ಹಿಂದುತ್ವನಿಷ್ಠ ಪಕ್ಷವು ತಮ್ಮ ವಿಚಾರಗಳ ಪ್ರಸಾರವನ್ನು ಮಾಡಲು ಮಾಹಿತಿ ಮತ್ತು ತಂತ್ರಜ್ಞಾನವನ್ನು ಉಪಯೋಗಿಸಿದರೆ ಹಿಂದೂ ವಿರೋಧಕರಿಗೆ ಯಾಕೆ ಹೊಟ್ಟೆಯುರಿಯುತ್ತದೆ ? ಹಿಂದೂದ್ವೇಷದ ಕೆಂಡವನ್ನು ಆರಿಸಲು ಹಿಂದುವಿರೋಧಕರು ಎಷ್ಟು ಕೀಳುಮಟ್ಟಕ್ಕೆ ಹೋಗಿ ವಿರೋಧಿಸುತ್ತಾರೆ, ಎಂಬುದಕ್ಕೆ ಇದೊಂದು ಉದಾಹರಣೆಯಾಗಿದೆ ! – ಸಂಪಾದಕರು) ಹಿಂದುತ್ವದ ವಿಚಾರವನ್ನು ಮುಂದೆತರಲು ಬಿಜೆಪಿ ಫೇಸ್‌ಬುಕ್ ಗುಂಪು ಮಾಡಿದೆ. ಫೇಸ್‌ಬುಕ್ ಮತ್ತು ಸಂಘ ಹಾಗೂ ಆಡಳಿತ ಇವುಗಳ ನಡುವೆ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ. (ಫೇಸ್‌ಬುಕ್‌ನಲ್ಲಿ ಅನೇಕ ಜಿಹಾದಿ ಭಯೋತ್ಪಾದಕ ಸಂಘಟನೆಗಳ ಖಾತೆಗಳಿವೆ. ಈ ಬಗ್ಗೆ ಸಿರಿಲ್ ಸ್ಯಾಮ್ ಏಕೆ ಮಾತನಾಡುವುದಿಲ್ಲ ? – ಸಂಪಾದಕರು) ಈ ಮೂಲಕ ಹಿಂಸಾತ್ಮಕ ವಿಚಾರಗಳನ್ನು ಹಬ್ಬಿಸಲಾಗುತ್ತದೆ, ಎಂದು ಭಾರತದ ಹಿಂದುವಿರೋಧಿ ಪತ್ರಕರ್ತ ಸಿರಿಲ ಸ್ಯಾಮ ಇವರು ಮೊದಲ ಭಾಗದಲ್ಲಿ ಹೇಳಿದರು.